ಗೋಕಾಕ:ಮನಕುಲವೆಲ್ಲಾ ಪರಿಸರ ಸಂರಕ್ಷಣೆಗೆ ಮುಂದಾಗಬೇಕು : “ವೃಕ್ಷ ದೀಕ್ಷೆ” ಕಾರ್ಯಕ್ರಮದಲ್ಲಿ ಮುರಘರಾಜೇಂದ್ರ ಶ್ರೀಗಳ ಸಲಹೆ
ಮನಕುಲವೆಲ್ಲಾ ಪರಿಸರ ಸಂರಕ್ಷಣೆಗೆ ಮುಂದಾಗಬೇಕು : “ವೃಕ್ಷ ದೀಕ್ಷೆ” ಕಾರ್ಯಕ್ರಮದಲ್ಲಿ ಮುರಘರಾಜೇಂದ್ರ ಶ್ರೀಗಳ ಸಲಹೆ
ಗೋಕಾಕ ಅ1:- ಮಳೆ ಆಗಬೇಕೆಂದರೆ ಮನಕುಲವೆಲ್ಲಾ ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದು ಗೋಕಾಕಿನ ಶೂನ್ಯ ಸಂಪಾದನಾ ಮಠದ ಮ.ನಿ.ಪ್ರ ಶ್ರೀ ಮುರುಘರಾಜೇಂದ್ರ ಮಹಾ ಸ್ವಾಮಿಗಳು ಹೇಳೀದರು.
ಅವರು ಮಂಗಳವಾರದಂದು ಸುಣಧೋಳಿ ಕ್ರಾಸ್ ಬಳಿ ಇರುವ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಶ್ರೀ ಜಡಿಸಿದ್ದೇಶ್ವರ ಮಠ ಸುಣಧೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಣಧೋಳಿ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕ, ಮಠಾಧೀಶರ ವೇದಿಕೆ ಆಶ್ರಯದಲ್ಲಿ ಹಸಿರು ಗೋಕಾಕಗಾಗಿ ಒಂದು ದಿನ ಅಂಗವಾಗಿ ಹಮ್ಮಿಕೊಂಡ ‘ವೃಕ್ಷ ದೀಕ್ಷೆ’ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ವಹಿಸಿ ಮಾತನಾಡುತ್ತಿದ್ದರು.
ಇಂದು ನಾವು ಗಿಡಮರಗಳನ್ನು ಉಳಿಸಿ ಬೆಳೆಸಿಲ್ಲವೆಂದರೆ ಮುಂದಿನ ದಿನಮಾನಗಳಲ್ಲಿ ಬಹಳ ಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಈ ಹೊತ್ತು ನೆಡುವ ಸಸಿಗಳು ದೊಡ್ಡದಾಗಿ ಮುಂದೆ ನಮಗೆ ಬದುಕಲಿಕ್ಕೆ ಆಮ್ಲಜನಕವನ್ನು ನೀಡುತ್ತವೆ. ಈ ಆಮ್ಲಜನಕ ಯಾವುದೇ ಸಂಜೀವಿನಿಕ್ಕಿಂತ ಕಡಿಮೆ ಇಲ್ಲ ಆ ದಿಸೆಯಲ್ಲಿ ನಾವು ಪ್ರತಿಯೋಬ್ಬರು ಎಚ್ಚೆತ್ತುಕೊಂಡು ಸಸಿ ನೆಡುವ ಪ್ರವಿತ್ರ ಕಾರ್ಯದಲ್ಲಿ ತಮ್ಮನ್ನು ತಾವು ಅಳವಡಿಸಿಕೊಳ್ಳಬೇಕಾಗಿದೆ.
ಬರುವ ಅಗಸ್ಟ 13 ರಂದು ಗೋಕಾಕ ತಾಲೂಕನಾದ್ಯಂತ ಒಂದೇ ದಿನ ಸುಮಾರು 25 ಸಾವಿರ ಸಸಿ ನೆಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಅದರ ಪ್ರಥಮಾರ್ಥವಾಗಿ ಇಂದು ಸುಣಧೋಳಿಯ ಶ್ರೀ ಜಡಿಸಿದ್ದೇಶ್ವರ ಮಹಾ ಸ್ವಾಮಿಗಳು ವಿದ್ಯಾರ್ಥಿಗಳಿಗೆ ವೃಕ್ಷದೀಕ್ಷೆ ನೀಡಿ ಸುಮಾರು 1 ಸಾವಿರ ಸಸಿಗಳನ್ನು ವಿತರಿಸಿ ಆ ಗಿಡಗಳನ್ನು ಉಳಿಸಿ ಬೆಳೆಸುವ ದೀಕ್ಷೆಯನ್ನು ನೀಡಿರುವುದು ಅನುಕರಣೀಯ.
ವಿದ್ಯಾರ್ಥಿಗಳು ಸಸಿಗಳನ್ನು ತೆಗೆದುಕೊಂಡು ಹೋಗಿ ಅವುಗಳನ್ನು ತಮ್ಮ ಮನೆಯ ಅಕ್ಕ ಪಕ್ಕ ಹೋಲ ಗದ್ದೆಗಳಲ್ಲಿ ನೆಟ್ಟು ಅವುಗಳನ್ನು ಸಂರಕ್ಷಿಸಿ ಬೆಳೆಸಲು ಮುಂದಾಗಬೇಕು ಆಗ ಮಾತ್ರ ನಮ್ಮ ಗೋಕಾಕ ತಾಲೂಕು ಸಂಪೂರ್ಣ ಹಸಿರುಮಯ ವಾಗಲು ಸಾದ್ಯವೆಂದು ಹೇಳಿದರು.
ಸುಣಧೋಳಿಯ ಜಡಿಸಿದ್ದೇಶ್ವರ ಮಹಾ ಸ್ವಾಮಿಗಳು, ಘಟಪ್ರಭಾ ಶ್ರೀ ಮಲ್ಲಿಕಾರ್ಜುನ ಮಹಾ ಸ್ವಾಮಿಗಳು, ಪಿ.ಜಿ. ಹುಣಶ್ಯಾಳ ನಿಜಗುಣ ದೇವರು, ಹುಲ್ಲಿಕಟ್ಟಿಯ ಕುಮಾರ ದೇವರು, ಯರಗುದ್ರಿಯ ಸಿದ್ಧಪ್ರಭು ಸ್ವಾಮಿಗಳು, ಕಪರಟ್ಟಿಯ ಬಸವರಾಜ ಹಿರೇಮಠ ಸ್ವಾಮಿಗಳು, ಘಟಪ್ರಭಾ ವಿರುಪಾಕ್ಷ ದೇವರು ಅನ್ನದಾನೇಶ್ವರ ದೇವರು, ಬಡಗುರ್ಕಿ ಬಸವಲಿಂಗ ಸ್ವಾಮಿಗಳು, ಹೊಸುರ ಸಂಗನಬಸವ ಸ್ವಾಮಿಗಳು, ದಿವ್ಯಸಾನೀದ್ಯವನ್ನು ವಹಿಸಿ ಆರ್ಶೀವಚನ ನೀಡಿದರು.
ವೇದಿಕೆ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಸುಣಧೋಳಿ ಗ್ರಾ. ಪಂ. ಅಧ್ಯಕ್ಷ ಭೀಮಶಿ ಹುವನ್ನವರ, ಗ್ರಾಮದ ಹಿರಿಯರಾದ ಸಿ.ಎಸ್.ವಾಲಿ, ಕರವೇ ತಾಲೂಕಾ ಕಾರ್ಯದರ್ಶಿ ಸಾದಿಕ ಹಲ್ಯಾಳ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಸುಣಧೋಳಿಯ ಶ್ರೀ ಮಠದ ಆವರಣದಲ್ಲಿ ತಾಲೂಕಿನ ಎಲ್ಲ ಮಠದ ಶ್ರೀಗಳು ಸೇರಿ ಸುಮಾರು 200 ಸಸಿಗಳನ್ನು ನೆಟ್ಟರು.
ಈ ಕಾರ್ಯಕ್ರಮವನ್ನು ಮುತ್ತೆಪ್ಪ ಜಿಡ್ಡಿಮನಿ ನಿರುಪಿಸಿದರು ಶಿಕ್ಷಕ ಎಂ.ಪಿ.ಹಿರೇಮಠ ಸ್ವಾಗತಿಸಿದರು ಕೊನೆಯಲ್ಲಿ ಎಂ. ಜಿ. ಕುಂಬಾರ ಅವರು ವಂದಿಸಿದರು