ಗೋಕಾಕ:ರೈತರಿಗೆ ಉತ್ತಮ ಬೀಜ ಹಾಗೂ ರಸಗೊಬ್ಬರ ಕಲ್ಪಿಸುವ ಉದ್ದೇಶದಿಂದ ಕೃಷಿ ಪರಿಕರ ಮಾರಾಟ ಮಳಿಗೆಗಳ ಪರಿಶೀಲನೆ : ಎಲ್. ಆರ್ ರೂಡಗಿ
ರೈತರಿಗೆ ಉತ್ತಮ ಬೀಜ ಹಾಗೂ ರಸಗೊಬ್ಬರ ಕಲ್ಪಿಸುವ ಉದ್ದೇಶದಿಂದ ಕೃಷಿ ಪರಿಕರ ಮಾರಾಟ ಮಳಿಗೆಗಳ ಪರಿಶೀಲನೆ : ಎಲ್. ಆರ್ ರೂಡಗಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 21 :
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಉತ್ತಮ ಬೀಜ ಹಾಗೂ ರಸಗೊಬ್ಬರ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲ ಕೃಷಿ ಪರಿಕರ ಮಾರಾಟ ಮಳಿಗೆಗಳನ್ನು ಪರಿಶೀಲನೆ ಮಾಡುಲಾಗುತ್ತಿದ್ದೆ ಎಂದು ಚಿಕ್ಕೋಡಿ ಉಪ ವಿಭಾಗದ ಉಪ ನಿರ್ದೇಶಕ ಎಲ್. ಆರ್ ರೂಡಗಿ ಹೇಳಿದರು
ಗುರುವಾರದಂದು ನಗರದ ಕೃಷಿ ಇಲಾಖೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಗೋಕಾಕ , ಮೂಡಲಗಿ ತಾಲೂಕಿನ 186 ಕೃಷಿ ಪರಿಕರ ಮಾರಾಟ ಮಳಿಗೆಗಳನ್ನು ಪರಿಶೀಲನೆ ಮಾಡಿ ದರ ಪಟ್ಟಿ , ರಶೀದಿ ನೀಡದ 27 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. ಲೈಸೆನ್ಸ್ ನವೀಕರಿಸದ 5 ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ . ಕೊರೋನಾ ವೈರಸ್ ಹರಡದಂತೆ ತಡೆಗಟ್ಟಲು ರೈತರು ಸಾಮಾಜಿಕ ಅಂತರ ಕಾಯ್ದುಕೋಳುವ ಉದ್ದೇಶದಿಂದ ಕೃಷಿ ಮಾರಾಟ ಮಳಗಿಗಳನ್ನು ಹೆಚ್ಚಿಸಲಾಗಿದೆ ಚಿಕ್ಕೋಡಿ ಉಪ ವಿಭಾಗದಲ್ಲಿ ರಸಗೋಬ್ಬರ ಹಾಗೂ ಬೀಜಗಳ ಕೋರತೆ ಇಲ್ಲ ರೈತರು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹರಿಸಬೇಕು. ನಕಲಿ ಬೀಜಗಳನ್ನು ಪೂರೈಸಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಕೇಸ್ ದಾಖಲಿಸಲಾಗುವದು ಎಂದು ರೂಡಗಿ ಹೇಳಿದರು
ಸಹಾಯಕ ಕೃಷಿ ನಿರ್ದೇಶಕ ಎಂ ಎಂ ನಧಾಫ ಮಾತನಾಡಿ ಗೋಕಾಕ ತಾಲೂಕಿನಲ್ಲಿ 1 ಲಕ್ಷ ಮೇಲ್ಪಟ ಕೃಷಿ ಬೆಳೆಗಳು ಬೆಳೆಯುತ್ತಿದ್ದು 40 ಸಾವಿರ ಹೆಕ್ಟರ್ ಗೋವಿನ ಜೋಳ , 52 ಸಾವಿರ ಹೆಕ್ಟರ್ ಕಬ್ಬು, 2.5 ಸಾವಿರ ಹತ್ತಿ ಸೂರ್ಯಕಾಂತಿ ಸೇರಿದಂತೆ ಇತರ ಬೆಳೆಗಳನ್ನು ಬೆಳಯಲಾಗುತ್ತಿದ್ದು , ರೈತರು ಸಾಮಾಜಿಕ ಅಂತರ ಕಾಯ್ದುಕೋಳ್ಳುವ ಉದ್ದೇಶದಿಂದ 18 ಬಿಜ ವಿತರಣಾ ಉಪ ಕೇಂದ್ರಗಳನ್ನು ತೆರೆಯಲಾಗಿದೆ.ಎಲ್ಲಾ ರೀತಿಯ ಬೀಜಗಳು ದಾಸ್ತಾನು ಮಾಡಲಾಗಿದ್ದು ಯಾವುದೇ ಬೀಜ ಮತ್ತು ರಸಗೊಬ್ಬರ ಕೊರತೆ ಇಲ್ಲ ಎಂದರು
ಈ ಸಂಧರ್ಭದಲ್ಲಿ ಕಛೇರಿಯ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು