RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಇಂಧನ ಸಚಿವ ಡಿಕೆಶಿ ಮನೆ ಮೇಲೆ ಐಟಿ ದಾಳಿ ಖಂಡಿಸಿ : ಗೋಕಾಕದಲ್ಲಿ ಬ್ಲಾಕ್ ಕಾಂಗ್ರೇಸ ಪ್ರತಿಭಟನೆ

ಗೋಕಾಕ:ಇಂಧನ ಸಚಿವ ಡಿಕೆಶಿ ಮನೆ ಮೇಲೆ ಐಟಿ ದಾಳಿ ಖಂಡಿಸಿ : ಗೋಕಾಕದಲ್ಲಿ ಬ್ಲಾಕ್ ಕಾಂಗ್ರೇಸ ಪ್ರತಿಭಟನೆ 

ಇಂಧನ ಸಚಿವ ಡಿಕೆಶಿ ಮನೆ ಮೇಲೆ ಐಟಿ ದಾಳಿ ಖಂಡಿಸಿ : ಗೋಕಾಕದಲ್ಲಿ ಬ್ಲಾಕ್ ಕಾಂಗ್ರೇಸ ಪ್ರತಿಭಟನೆ

ಗೋಕಾಕ ಅ 3: ಇಂಧನ ಸಚಿವ ಡಿಕೆಶಿ ಅವರ ಮನೆ ಮೇಲೆ ನಡೆದ ಐಟಿ ದಾಳಿಯನ್ನು ಖಂಡಿಸಿ ಗೋಕಾಕ ಬ್ಲಾಕ್ ಕಾಂಗ್ರೇಸ ಕಾರ್ಯಕರ್ತರು ಇಂದು ನಗರದಲ್ಲಿ ಪ್ರತಿಭಟನೆ ನಡೆಯಿಸಿ ತಹಶೀಲ್ದಾರ್ ಮುಖಾಂತರ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಮನವಿ ಅರ್ಪಿಸಿದರು
ಗುರುವಾರ ಮುಂಜಾನೆ ನಗರದ ಕಾಂಗ್ರೇಸ ಕಾರ್ಯಾಲಯದಲ್ಲಿ ಸೇರಿದ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು ತಹಶೀಲ್ದಾರ್ ಕಾರ್ಯಾಲಯದ ವರೆಗೆ ಪ್ರತಿಭಟನಾ ಮೇರವಣಿಗೆ ನಡೆಸಿದ ಕಾರ್ಯಕರ್ತರು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು

ಸಚಿವ ಡಿಕೆಶಿ ಅವರ ಮನೆ , ಕಛೇರಿ ಹಾಗೂ ಅವರ ಆಪ್ತರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದು ಖಂಡನೀಯ ಈ ದಾಳಿ ರಾಜಕೀಯ ಪ್ರೇರಿತವಾಗಿದ್ದು ಪ್ರಧಾನ ಮಂತ್ರಿ ಮೋದಿ ಅವರು ಅಧಿಕಾರಿಗಳನ್ನು ಬಳಸಿಕೊಂಡು ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ ಗುಜರಾತ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಕುದುರೆ ವ್ಯಾಪರ ನಡೆಸುತ್ತಿರುವ ಬಿಜೆಪಿ ಹತ್ತಾಶವಾಗಿ ಐಟಿ ಅಧಿಕಾರಿಗಳನ್ನು ಬಳಸಿ ಕಾಂಗ್ರೇಸ ನಾಯಕರನ್ನೇ ಗುರಿ ಮಾಡಿ ಸೇಡಿನ ರಾಜಕೀಯ ಮಾಡುತ್ತಿದ್ದಾರೆ ಈ ಕೂಡಲೇ ಇವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ, ಕಾಂಗ್ರೇಸ ಮುಖಂಡರಾದ ನಜೀರ ಶೇಖ ,ವಿವೇಕ ಜತ್ತಿ , ಎಸ.ಎ.ಕೋತವಾಲ , ಅಬ್ಬಾಸ ದೇಸಾಯಿ , ವಿನೋದ ಕರನಿಂಗ , ಪ್ರಕಾಶ ಕರನಿಂಗ , ಭೀಮಗೌಡ ಪಾಟೀಲ , ಬಸವರಾಜ ಸಾಯನ್ನವರ , ಭೀಮಶಿ ಭರಮಣ್ಣವರ , ಕಾಡಪ್ಪಾ ಮೆಸ್ತ್ರಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು

Related posts: