ಬೆಳಗಾವಿ:ಬಿಜೆಪಿ12 ಕ್ಷೇತ್ರದಲ್ಲಿ ಗೆಲ್ಲಲು ಸಿಎಂ ಪಾತ್ರ ಮುಖ್ಯವಾಗಿದೆ : ಶಾಸಕ ಬಾಲಚಂದ್ರ
ಬಿಜೆಪಿ12 ಕ್ಷೇತ್ರದಲ್ಲಿ ಗೆಲ್ಲಲು ಸಿಎಂ ಪಾತ್ರ ಮುಖ್ಯವಾಗಿದೆ : ಶಾಸಕ ಬಾಲಚಂದ್ರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 10 :
ಉಪಚುನಾವಣೆಯಲ್ಲಿ 12 ಕ್ಷೇತ್ರ ಬಿಜೆಪಿ ಗೆಲವು ಸಾಧಿಸಲು ಸಿಎಂ ಬಿ.ಎಸ್.ಯಡಿಯೂರಪ್ಪನವರ ಪಾತ್ರ ಮಹತ್ವದಾಗಿದೆ ಎಂದು ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಮಂಗಳವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಉಪಚಯನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಲು ಸಿಎಂ ಯಡಿಯೂರಪ್ಪನವರೇ ಕಾರಣ.
ಗೋಕಾಕ್ ಕ್ಷೇತ್ರದಲ್ಲಿ ಎಲ್ಲರೂ ಟಿಂ ವರ್ಕ್ ಮಾಡಿದ್ದೇವೆ.
ಶೀಘ್ರದಲ್ಲೇ ಸಂಪುಟ ವಿಸ್ತರಣೆ ಆಗಲಿದೆ.
ಜಿಲ್ಲೆಗೆ ಹೆಚ್ಚಿನ ಸೇವೆ ಸಲ್ಲಿಸಲಿ ಎಂಬುದು ನಮ್ಮ ಬಯಕೆ.
ಬೆಳಗಾವಿ ಜಿಲ್ಲೆಯಿಂದ ಸಮ್ಮಿಶ್ರ ಸರ್ಕಾರ ಪತನ ಆರಂಭವಾಯಿತು.ಜಿಲ್ಲೆಗೆ 6 ಸಚಿವ ಸ್ಥಾನ ಕೊಟ್ಟರೆ ತಪ್ಪಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಅನಕೂಲ ಆಗಲಿದೆ.
ಗೋಕಾಕ್ ಗೆಲ್ಲಲ್ಲು ನಾನು ಸೇರಿ ಅನೇಕರು ಕೆಲಸ ಮಾಡಿದ್ದೇವೆ ಎಂದರು.