ಘಟಪ್ರಭಾ:ಸಾರ್ವಜನಿಕರು ಪೋಲಿಸರ ಜೊತೆ ಕೈ ಜೋಡಿಸಿದರೆ ಅಪರಾದಗಳನ್ನು ತಡೆಯಲು ಸಾಧ್ಯ: ಡಿವೈಎಸ್‍ಪಿ ವೀರಭದ್ರಯ್ಯ
ಸಾರ್ವಜನಿಕರು ಪೋಲಿಸರ ಜೊತೆ ಕೈ ಜೋಡಿಸಿದರೆ ಅಪರಾದಗಳನ್ನು ತಡೆಯಲು ಸಾಧ್ಯ: ಡಿವೈಎಸ್‍ಪಿ ವೀರಭದ್ರಯ್ಯ
ಘಟಪ್ರಭಾ ಅ 1: ಸಾರ್ವಜನಿಕರು ಪೋಲಿಸರ ಜೊತೆ ಕೈ ಜೋಡಿಸಿದರೆ ಅಪರಾದಗಳನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ಗೋಕಾಕ ಡಿವೈಎಸ್‍ಪಿ ಈ.ಎಸ್.ವೀರಭದ್ರಯ್ಯ ಹೇಳಿದರು.
ಅವರು ಸೋಮವಾರ ಸಂಜೆ ಪೋಲಿಸ್ ಇಲಾಖೆಯಿಂದ ಇಲ್ಲಿಯ ಕೆಎಚ್‍ಐ ಅಸ್ಪತ್ರೆಯ ಸಾಂಸ್ಕಂತಿಕ ಭವನದಲ್ಲಿ ಏರ್ಪಡಿಸಿದ ಸುಧಾರಿತ ಗಸ್ತು ವ್ಯವಸ್ಥೆಯ ಮಾಸಾಚರಣೆ ಹಾಗೂ ಘಟಪ್ರಭಾ ಪೋಲಿಸ್ ಠಾಣಾ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಸರ್ವ ಬೀಟ ಸದಸ್ಯರ ಸಭೆಯಲ್ಲಿ ಮಾತನಾಡಿ ಪೋಲಿಸರ ಬಗ್ಗೆ ಜನರು ಭಯ ಪಡಬಾರದು. ಪೋಲಿಸರೊಂದಿಗೆ ಬೀಟ ಸದಸ್ಯರು ಸಂಪೂರ್ಣವಾಗಿ ವಿಚಾರವಿನಿಮಯ ಮಾಡಿಕೊಂಡು ಹಳ್ಳಿಗಳಲ್ಲಿ ನಡೆಯುತ್ತಿರುವ ಎಲ್ಲಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬೇಕು.
ಪೋಲಿಸ್‍ರೊಂದಿಗೆ ನೇರ ಸಂಪರ್ಕಕ್ಕಾಗಿಯೆ ಬೀಟ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಅಪರಾದ ತಡೆಯಲಿಕ್ಕೆ ಪೋಲಿಸರ ಜೊತೆ ಸಾರ್ವಜನಿಕರು ಕೈ ಜೋಡಿಸುವ ಸಲುವಾಗಿಯೆ ಕಳೆದ ಒಂದು ವರ್ಷದಿಂದ ಬೆಳಗಾವಿ ಜಿಲ್ಲೆಯಲ್ಲಿ ಎಸ್‍ಪಿಯವರು ಸಾರ್ವಜನಿಕರನ್ನೆ ಬೀಟ ಸದಸ್ಯರನ್ನಾಗಿ ಮಾಡಿ ಅವರಿಗೂ ಊರಿನಲ್ಲಿ ನಡೆಯುವ ಅಪರಾದ ಹಾಗೂ ಇನ್ನಿತರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವ ಜವಾಬ್ದಾರಿ ನೀಡಿದ್ದರಿಂದ ಇಂದು ಜಿಲ್ಲೆಯಲ್ಲಿ ಅಪರಾದಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ ಇದೆ ಕಾರಣಕ್ಕಾಗಿ ಈ ವ್ಯವಸ್ಥೆಯನ್ನು ಇಂದು ಸರಕಾರ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಅಳವಡಿಸಿದೆ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ ಸುರೇಶ ಪಾಟೀಲ, ರಾಮಣ್ಣ ಹುಕ್ಕೇರಿ, ಬಿ.ಎನ್.ಶಿಂದೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಶಿವಲಿಂಗ ಪೂಜೇರಿ, ಸುಲ್ತಾನಸಾಬ ಕಬ್ಬೂರ, ತಾ.ಪ.ಸದಸ್ಯ ಭೀಮಶಿ ಅಂತರಗಟ್ಟಿ, ಪೀರಮಹ್ಮದ ಮುಲ್ಲಾ ಉಪಸ್ಥಿತರಿದ್ದರು.
ಸಭೆಗೆ ಘಟಪ್ರಭಾ ಠಾಣೆಯ 32 ಹಳ್ಳಿಯ ಬೀಟ ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು. ಘಟಪ್ರಭಾ ಠಾಣೆಯ ಪಿಎಸ್‍ಐ ಗೋಪಾಲ ಹಳ್ಳೂರ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶ್ರೀಶೈಲ ಹಿರೇಮಠ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
