RNI NO. KARKAN/2006/27779|Friday, February 13, 2026
You are here: Home » breaking news » ಗೋಕಾಕ:ರಮೇಶ್ ಜಾರಕಿಹೊಳಿ ಗೆಲುವು : ಅಂಕಲಗಿಯಲ್ಲಿ ಬಿಜೆಪಿ ಕಾಂಗ್ರೆಸ್ ಬೆಂಬಲಿಗರ ಹೊಡೆದಾಟ

ಗೋಕಾಕ:ರಮೇಶ್ ಜಾರಕಿಹೊಳಿ ಗೆಲುವು : ಅಂಕಲಗಿಯಲ್ಲಿ ಬಿಜೆಪಿ ಕಾಂಗ್ರೆಸ್ ಬೆಂಬಲಿಗರ ಹೊಡೆದಾಟ 

ರಮೇಶ್ ಜಾರಕಿಹೊಳಿ ಗೆಲುವು : ಅಂಕಲಗಿಯಲ್ಲಿ ಬಿಜೆಪಿ ಕಾಂಗ್ರೆಸ್ ಬೆಂಬಲಿಗರ ಹೊಡೆದಾಟ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 9 :

 
ಸತತ 6 ಆರನೇ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಗೆಲುವು ಸಾಧಿಸುತ್ತಿದ್ದಂತೆ ರಮೇಶ ಜಾರಕಿಹೊಳಿ ಬೆಂಬಲಿಗರು ಮತಕ್ಷೇತ್ರದ ಅಂಕಲಗಿ ಗ್ರಾಮದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ ಸಂದರ್ಭದಲ್ಲಿ ಹೊಡೆದಾಟ ನಡೆದ ಘಟನೆ ಜರುಗಿದೆ
ರಮೇಶ್ ಜಾರಕಿಹೊಳಿ ಜಯ ಸಾಧಿಸಿ ಶಾಸಕರಾಗಿ ಆಯ್ಕೆಯಾಗುತ್ತಿದ್ದಂತೆ ಗೋಕಾಕ್ ತಾಲೂಕಿನ ಅಂಕಲಗಿಯಲ್ಲಿ ರಾಜಕೀಯ ವೈಷಮ್ಯ ಉಂಟಾಗಿದೆ.
ರಮೇಶ್ ಜಾರಕಿಹೊಳಿ ಆಯ್ಕೆಯಾಗುತ್ತಿದ್ದಂತೆಯೇ ರಮೇಶ್ ಜಾರಕಿಹೊಳಿಯವರ ಬೆಂಬಲಿಗ ರಾಜು ತಳವಾರ ಹಾಗೂ ಅವರ ಗುಂಪು  ಅಂಕಲಗಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದೆ
 ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಬೆಂಬಲಿತ  ಮುಖಂಡರ ಗುಂಪು  ಬೆನ್ನಲ್ಲೇ ಬಂಟರಿಗೆ ಕಾಂಗ್ರೆಸ್ನ ಬಂಟರು ಮನೆ ಹೊಕ್ಕು ಬಡಿದಾಡಿದ ಘಟನೆ ಜರುಗಿದ ವರದಿ ತಿಳಿದು ಬಂದಿದೆ.
ಈಗ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಎರಡು ಪಕ್ಷದ ಅವರನ್ನು ಕರೆತಂದು ಪೊಲೀಸರು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

Related posts: