ಗೋಕಾಕ:ಉಪ ಚುನಾವಣೆ ನಂತರ ಮತ್ತೆ ನಮ್ಮ ಸರಕಾರ ಬಂದೆ ಬರುತ್ತೆ : ಮಾಜಿ ಸಿಎಂ ಸಿದ್ದರಾಮಯ್ಯ

ಉಪ ಚುನಾವಣೆ ನಂತರ ಮತ್ತೆ ನಮ್ಮ ಸರಕಾರ ಬಂದೆ ಬರುತ್ತೆ : ಮಾಜಿ ಸಿಎಂ ಸಿದ್ದರಾಮಯ್ಯ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 30 :
ಮತ್ತೆ ನಮ್ಮ ಸರಕಾರ ಬಂದೆ ಬರುತ್ತೆ , ಅನ್ನಭಾಗ್ಯ ಯೋಜನೆಯಲ್ಲಿ ಈಗ ಕೊಡುತ್ತಿರುವ 7 ಕೆ.ಜಿ ಅಕ್ಕಿಯನ್ನು 10 ಕೆ.ಜಿ ಏರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ,ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು
ಶನಿವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರ ಪ್ರಚಾರಾರ್ಥ ಆಯೋಜಿಸಿದ್ದ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು
ಈ ಯೋಜನೆಯಿಂದ ಬಡವರು ಸೋಮಾರಿ ಆಗಿದ್ದಾರೆಂದು ವಾಧಿಸುವವರಿಗೆ ಅವರು ಸ್ವಲ್ಪ ದಿನ ಹಾಯಾಗಿರಲ್ಲಿ , ಇನ್ನು ನೀವು ದುಡಿಯಿರೆಂದು ಶ್ರೀಮಂತ ವರ್ಗಕ್ಕೆ ಹೇಳಿದ್ದೇನೆ ಎಂದರು. ಉಪ ಚುನಾವಣೆ ಯಾರಿಗೂ ಬೇಕಾಗಿರಲಿಲ್ಲ , ಒಂದು ವರ್ಷದಲ್ಲಿ ಚುನಾವಣೆ ಬರಲು ರಮೇಶ ಜಾರಕಿಹೊಳಿ ಕಾರಣ ಕಾಂಗ್ರೆಸ್ ಪಕ್ಷದಿಂದ ದಿಂದ 14 ಜನ ಶಾಸಕರು ಮತ್ತು ಜೆಡಿಎಸ್ ಪಕ್ಷದಿಂದ 3 ಜನ ಶಾಸಕರು ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. ಇದರಿಂದ ರಾಜ್ಯ ಸರಕಾರಕ್ಕೆ ನೂರಾರು ಕೊಟ್ಟಿ ಖರ್ಚು ಆಗುತ್ತದೆ ಈ ಎಲ್ಲ ಕ್ಷೇತ್ರದ ಶಾಸಕರಿಗೆ ಪತ್ರಿ ಕ್ಷೇತ್ರದಲ್ಲಿ 2 ಲಕ್ಷ ಹೆಚ್ಚು ಮತದಾರರು ಆರ್ಶಿವಾದ ಮಾಡಿ ಕಳುಹಿಸಿದ್ದರು.ರಮೇಶ ಜಾರಕಿಹೊಳಿ ಬಿಜೆಪಿ ಪಕ್ಷಾಂತರ ಮಾಡುವ ಮೊದಲು ನಿಮ್ಮನ್ನು ಕೇಳಿಲ್ಲ ,ನಿಮ್ಮ ಕಿಮ್ಮತ್ತು ಇಟ್ಟಿಲ್ಲ ,ಬಿಜೆಪಿಗೆ ಪಕ್ಷಾಂತರ ಮಾಡಿ ನಿಮಗೆ ದ್ರೋಹ ಮಾಡಿದ್ದಾರೆ.ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಪಕ್ಷಾಂತರ ಮಾಡಿದ ನಂತರ ನಾನು ದಿನೇಶ ಗುಂಡೂರಾವ ನೋಟಿಸ್ ಕೊಟ್ಟು ಪಕ್ಷಾಂತರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ . ಇವರನ್ನು ಅನರ್ಹ ಮಾಡಬೇಕೆಂದು ಮನವಿ ಮಾಡಿದ್ದೇ ಇದು ಸಾಬೀತು ಆದ ನಂತರ ಅವರನ್ನು ಅಂದಿನ ಸ್ಪೀಕರ್ ಅವರು ಅನರ್ಹ ಮಾಡಿದರು. ರಮೇಶ ಜಾರಕಿಹೊಳಿ ಎಂಎಲ್ಎ ಯಾಗಿ ಮುಂದು ವರೆಯಲು ನಾಲಾಯಕ ಎಂದು ಅವರು ಅಭಿವೃದ್ಧಿಗೆ ದುಡ್ಡು ಕೊಡಲಿಲ್ಲ ಎಂದು ತಪ್ಪು ಹೇಳಿ , ಪಕ್ಷಾಂತರ ಮಾಡಿದ್ದಾರೆ. ಜಿಲ್ಲೆಯ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ರಮೇಶ ಜಾರಕಿಹೊಳಿ ಅವರನ್ನು ಸೋಲಿಸಬೇಕು ಸತೀಶ ಮತ್ತು ಲಖನ್ ಜೊತೆ ನಾವು ಇದ್ದವೆ ನೆರೆ ಬಂದಾಗ ರಮೇಶ್ ಎಲ್ಲಿದಾ , ಶಾಸಕನಾಗಿ ಅವರ ಕಷ್ಟದಲ್ಲಿ ಬರುವುದನ್ನು ಬಿಟ್ಟು ಸ್ಟಾರ್ ಹೊಟೇಲನಲ್ಲಿ ಮಜಾ ಮಾಡಿದ್ದಾನೆ. ಸತೀಶ ಮತು ಲಖನ್ ಗೋಕಾಕಿನ ಶಾಸಕ ಅಲ್ಲದಿದ್ದರೂ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ .
ಹಿಂತಹವರು ಶಾಸಕರಾಗ ಬೇಕಾ ? ಎಂದು ಪ್ರಶ್ನಿಸಿದ ಅವರು ಸತೀಶ ನನಗೆ ಆತ್ಮೀಯನಾದರು ಸಹ ಅವನನ್ನು ಬಿಟ್ಟು ರಮೇಶಗೆ ಮಂತ್ರಿ ಮಾಡಿದ್ದರು ಅವರನು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಹಿಂತವಯನ್ನು ಸೋಲಿಸಿ ಪಾಠ ಕಲಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು
ಅಕ್ರಮ ಗಣಿಗಾರಿಕೆ ವಿರುದ್ಧ ನಾನು ಪಾದಯಾತ್ರೆ ಮಾಡಿದೆ.ನಂತರ ಜನಾರ್ದನ ರೆಡ್ಡಿ ಜೈಲಿಗೆ ಹೋದ್ರು. ನಂತರ ಬಳ್ಳಾರಿಯಲ್ಲಿ ಸ್ವಾತಂತ್ರ್ಯ ಬಂದಿದೆ.
ಗೋಕಾಕ್ ಸ್ವಾತಂತ್ರ್ಯ ಬೇಕು ಎಂದ್ರೆ ರಮೇಶ ಜಾರಕಿಹೊಳಿ ಅವರನ್ನು ಸೋಲಿಸಲೇಬೇಕು.
ಸತೀಶ, ಲಖನ್ ಜತೆಗೆ ನಾವಿದ್ದೇವೆ ಎಂದು ಸಿದ್ದರಾಮಯ್ಯ ಗುಡುಗಿದರು .
ಶಾಸಕ ಸತೀಶ್ ಜಾರಕಿಹೊಳಿ, ಅಭ್ಯರ್ಥಿ ಲಖನ್ ಜಾರಕಿಹೊಳಿ ಮಾತನಾಡಿದರು
ವೇದಿಕೆಯಲ್ಲಿ ಶಾಸಕ ಸತೀಶ್ ಜಾರಕಿಹೊಳಿ , ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ , ಶಾಮ ಘಾಟಕೆ, ಕಾಕಾಸಾಬ ಪಾಟೀಲ, ಅರವಿಂದ ದಳವಾಯಿ, ವಿನಯ ನಾವಲಗಟ್ಟಿ, ಅಮಿತ ಘಾಟಕೆ , ಲಕ್ಷ್ಮಣರಾವ್ ಚಿಂಗಳೆ ಸೇರಿದಂತೆ ಇತರರು ಇದ್ದರು