ಗೋಕಾಕ:15 ಜನ ಅನರ್ಹ ಶಾಸಕರಿಗೆ ಜನತಾ ನ್ಯಾಯಾಲಯ ಉತ್ತರ ತಕ್ಕ ಉತ್ತರ ನೀಡಲಿದೆ : ಮಾಜಿ ಸಚಿವ ಬಂಡೆಪ್ಪಾ ಕಾಶಂಪೂರ

15 ಜನ ಅನರ್ಹ ಶಾಸಕರಿಗೆ ಜನತಾ ನ್ಯಾಯಾಲಯ ಉತ್ತರ ತಕ್ಕ ಉತ್ತರ ನೀಡಲಿದೆ : ಮಾಜಿ ಸಚಿವ ಬಂಡೆಪ್ಪಾ ಕಾಶಂಪೂರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 23 :
15 ಜನ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಜನತಾ ನ್ಯಾಯಾಲಯ ತಕ್ಕ ಉತ್ತರ ನೀಡಲಿದೆ ಎಂದು ಜೆಡಿಎಸ್ ಮುಖಂಡ ಮಾಜಿ ಸಚಿವ ಬಂಡೆಪ್ಪಾ ಕಾಶಂಪೂರ ಹೇಳಿದರು
ಶನಿವಾರದಂದು ನಗರದ ಜ್ಞಾನ ಮಂದಿರ ಆಧ್ಯಾತ್ಮ ಕೇಂದ್ರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು
ಉಪ ಚುನಾವಣೆ ಯಾಕಾಗಿ ಬಂದಿದೆ ಎಂದು ಜನರಿಗೆ ಗೋತಿದ್ದೆ ಸರಕಾರವನ್ನು ಕೆಡವಲು ಪಕ್ಷಾಂತರ ಮಾಡಿ ಸರಕಾರದ ಕೆಡವಲು ಕಾರಣವಾಗಿದ್ದಾರೆ , ರಾಜಕೀಯ ಜೀವನದಲ್ಲಿ ಇದೊಂದು ಕೆಟ್ಟ ಗಳಿಗೆ , ಸರಕಾರ ಮಾಡಿ 14 ತಿಂಗಳಲ್ಲಿ ಸರಕಾರ ಪತನವಾಗಿದೆ ಸುಪ್ರೀಂಕೋರ್ಟ್ ಅನರ್ಹತೆ ಎತ್ತಿ ಹಿಡಿದಿದ್ದೆ ಆದರೆ ಅವರು ಚುನಾವಣೆ ಎದುರಿಸುತ್ತಿದ್ದಾರೆ , ಸಮಿಶ್ರ ಸರಕಾರದಲ್ಲಿ ಕುಮಾರಸ್ವಾಮಿ ಅವರು ರೈತರ ಪರ, ಬಡವರ ಪರ ಸಾಕಷ್ಟು ಕಾಳಜಿ ವಹಿಸಿದ್ದಾರೆ,ದೇಶದಲ್ಲಿ ಸಹಕಾರ ಮತ್ತು ವಾಣಿಜ್ಯ ಬ್ಯಾಂಕದಲ್ಲಿ ಭಾರತದಲ್ಲಿ ಯಾರು ಮಾಡದಂತಹ ಕಾರ್ಯ ಕುಮಾರಸ್ವಾಮಿ ಮಾಡಿದ್ದಾರೆ.
ಸುಮಾರು 36 ಸಾವಿರ ಕುಟುಂಬಗಳಿ ಗೋಕಾಕಿನ ಸಾಲ ಮನ್ನಾ ಆಗಿದೆ ಸಾಕಷ್ಷ ಕೆಲಸ ವಾಗಿದೆ. ಪ್ರವಾಹ ಬಂದು ತತ್ತರಿಸದಾಗ , ಯಾವ ಮಟ್ಟದ ಸಹಾಯ ದೊರೆತ್ತಿಲ್ಲಾ , ಮುಖ್ಯಮಂತ್ರಿ ಮತ್ತು ಸಚಿವರು ಸಹಾಯಕ್ಕೆ ಹೋಗಿಲ್ಲಾ , ಇಂದು ಸಮಯ ಬಂದಿದೆ.ಜನರಿಗೆ ಅವಕಾಶ ವಿದೆ ಅವರು ತಕ್ಕ ಪಾಠ ಕಲಿಸಬೇಕು ಎಂದು ಕಾಶಂಪೂರ ಹೇಳಿದರು
ಅಶೋಕ ಪೂಜಾರಿ ಅವರು ಘಟಾನುಗಟ್ಟಿ ನಾಯಕರೊಂದಿಗೆ ರಾಜಕೀಯ ಹೋರಾಟ ನಡೆಸಿದ್ದಾರೆ ಅವರು ಮತ್ತೆ ಪಕ್ಷಕ್ಕೆ ಮರಳಿದ್ದರಿಂದ ಪಕ್ಷಕ್ಕೆ ಇನ್ನೆಷ್ಟು ಬಲ ಬಂದಿದೆ. ಅವರು ದೊಡ್ಡ ಹುದ್ದೆ ಪಡೆದು ಅಧಿಕಾರ ಗಿಟ್ಟಿಸಿಕೋಳ ಬಹುದಿತ್ತು ಆದರೆ ಮಾಡಲಿಲ್ಲ , ಒಂದು ಸಲಾ ಅಶೋಕ ಪೂಜಾರಿಗೆ ಅವಕಾಶ ಕೋಡಲು ಕ್ಷೇತ್ರದಲ್ಲಿ ಚರ್ಚೆ ನಡೆದಿದ್ದ ಈ ಬಾರಿ ಅವರಿಗೆ ಗೆಲ್ಲಿಸುವ ಕಾರ್ಯ ಮಾಡಬೇಕೆಂದು ಕಾಶಂಪೂರ ಹೇಳಿದರು
ಬಿಜೆಪಿಯ ಸಾಹುಕಾರ ನಮ್ಮ ಜೊತೆ ಸಚಿವರಾಗಿದ್ದರು ಬಿಜೆಪಿಯಲ್ಲಿಯೂ ಸಹ ಅವರು ಮುಖ್ಯಮಂತ್ರಿ ಆಗುವದಿಲ್ಲ ಬರಿ ಸಚಿವರಾಗುತ್ತಾರೆ , ನಾನು ಏನು ಹೇಳುತ್ತೇನೆ ಅದೆ ನಡಯಬೇಕೆಂದು ಎಂದು ಹೇಳಿ ಸರಕಾರ ಕೆಡವಿದ್ದಾರೆ. ಈಗ ಯಡಿಯೂರಪ್ಪ ಅವರ ಸರಕಾರ ಅವರು ಕಾಪಾಡುತ್ತಾರಾ ಎಂದು ಪ್ರಶ್ನಿಸಿದ ಮಾಜಿ ಸಚಿವ ವೆಂಕಟರಾವ ನಾಡಗೌಡ ದೇಶಕ್ಕೆ ಸ್ವಾತಂತ್ರ ಸಿಕ್ಕಿದೆ , ಆದರೆ ಗೋಕಾಕಕ್ಕೆ ಸ್ವಾತಂತ್ರ ಸಿಕ್ಕಿಲ್ಲಾ , ಇದು ಸರಿಣಾ ? ವಯಕ್ತಿಕ ಕಾರಣಕ್ಕೆ ಚುನಾವಣೆ ಬರುವದು ಪ್ರಜಾಪ್ರಭುತ್ವದಲ್ಲಿ ಸರಿ ಅಲ್ಲ , ಮತದಾರರು ಇದನ್ನು ಅರಿದು ಕಾರ್ಯಮಾಡಬೇಕು ಜನರು ತಮ್ಮ ಇಚ್ಚೆಗೆ ತಕ್ಕಂತೆ ಕೆಲಸ ಮಾಡುವ ವಾತಾವರಣ ಗೋಕಾಕದಲ್ಲಿ ಇಲ್ಲಾ ಎಂಬುದು ಸಾಬೀತಾಗಿದೆ. ಭೀಕರವಾದ ನೆರೆ ಹಾವಳಿಯಿಂದ ತತ್ತರಿಸಿ ಹೋದಾಗ ಅವರ ಸಹಾಯಕ್ಕೆ ಬರುವದನ್ನು ಬಿಟ್ಟು ಚುನಾವಣೆ ತಂದಿದ್ದು ಜನರು ನೋಡಿದ್ದಾರೆ. ಜೆಡಿಎಸ್ ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸಿ ಮತ ಕೇಳುತ್ತೇವೆ ಎಂದು ನಾಡಗೌಡ ಹೇಳಿದರು
ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಮಾಡಲು ಮಾಜಿ ಪ್ರಧಾನಿ ದೇವೆಗೌಡ , ಮಾಜಿ ಸಿಎಂ ಕುಮಾರಸ್ವಾಮಿ , ಬಸವರಾಜ ಹೊರಟ್ಟಿ ,ನಿಖಿಲ ಕುಮಾರಸ್ವಾಮಿ ,ಮಾಜಿ ಮಂತ್ರಿಗಳು , ಶಾಸಕರು ಮಾಜಿ ಶಾಸಕರು ಬರಲಿದ್ದಾರೆ ಎಂದು ತಿಳಿಸಿದರು
ಸ್ವಾಭಿಮಾನ ದಿಂದ ಬದುಕಲು ಬಿಡಿ : ಅಭಿವೃದ್ಧಿಯ ಮೂಲ ಮಂತ್ರದಿಂದ ಈ ಚುನಾವಣೆಯನ್ನು ಎದುರಿಸಲು ಎದುರಿಸುತ್ತಿದ್ದೇನೆ. ನನಗೆ ಚುನಾವಣೆ ಯಿಂದ ಸರಿಸಲು ಷಡೆಂತ್ರೆ ನಡೆಯಿತು. ಭಾರತೀಯ ಜನತಾ ಪಾರ್ಟಿ, ನನ್ನ ಆಪ್ತರಿಂದ ನನಗೆ ಒತ್ತಡ ಹೇರಿ ಅವಿರೋಧವಾಗಿ ಆಯ್ಕೆಯಾಗಲು ಹುನ್ನಾರ ನಡೆಸಿದರು . ನನ್ನ ಮೂಲ ಹೋರಾಟ ವವ್ಯಸ್ಥೆ ಬದಲಿಸಲು ಎಂದ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಈ ಚುನಾವಣೆಯಲ್ಲಿ ಬೇರೆ ಯವರು ಸ್ವರ್ಧೆ ಮಾಡಲು ಅವಕಾಶ ನೀಡಲು ನಿರ್ಧರಿಸಿದ್ದೆ ಆದರೆ ಬೆಂಬಲಿಗರ ಒತ್ತೆಯಾಸೆಯಿಂದ ಈ ಚುನಾವಣೆಯನ್ನು ಎದುರಿಸಿದ್ದೇನೆ.
ಚುನಾವಣೆಗೆ ಪೂರ್ವದಲ್ಲಿ ಅಧಿಕಾರ ಕೋಟ್ಟಿದ್ದರೆ ನಾನು ಸ್ವೀಕರಿಸಿ ಬಿಡುತ್ತಿದ್ದೆ ಆದರೆ ಚುನಾವಣೆ ಬಂದಾಗ ಅಧಿಕಾರ ನೀಡಿದ್ದರಿಂದ ಅದನ್ನು ಸ್ವೀಕರಿಸಿಲ್ಲ ಎಂದ ಅವರು ಈ ನನ್ನ ಹೋರಾಟ ಬೆಂಕಿಯ ಜೊತೆ ಸರಸ ಆದಂತಿದ್ದೆ ಬೆಂಕಿ ಆರಿಸುವ ಮಳೆ ಬಂದು ಈ ಬಾರಿ ಬೆಂಕಿ ಆರಿಸಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು