RNI NO. KARKAN/2006/27779|Thursday, March 28, 2024
You are here: Home » breaking news » ಗೋಕಾಕ:ಗದ್ದುಗೆಗಾಗಿ ಜಾರಕಿಹೊಳಿ ಸಹೋದರರ ಗುದ್ದಾಟ : ಹೈರಾಣಾಗಿರುವ ಮತದಾರರು

ಗೋಕಾಕ:ಗದ್ದುಗೆಗಾಗಿ ಜಾರಕಿಹೊಳಿ ಸಹೋದರರ ಗುದ್ದಾಟ : ಹೈರಾಣಾಗಿರುವ ಮತದಾರರು 

ಗದ್ದುಗೆಗಾಗಿ ಜಾರಕಿಹೊಳಿ ಸಹೋದರರ ಗುದ್ದಾಟ : ಹೈರಾಣಾಗಿರುವ ಮತದಾರರು

 
ನಮ್ಮ ಬೆಳಗಾವಿ ಇ – ವಾರ್ತೆ , ವಿಶೇಷ ಸುದ್ದಿ ಗೋಕಾಕ ನ 11 :

 

ಚುನಾವಣಾ ಆಯೋಗದ ಅಧಿಸೂಚನೆ ಪ್ರಕಾರ ಸೋಮವಾರದಿಂದ ಉಪ ಚುನಾವಣೆ ಕಾವು ಪ್ರಾರಂಭವಾಗಿದ್ದು , ಎಲ್ಲ ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಇಳಿಯಲು ಭರ್ಜರಿ ತಯಾರಿ ನಡೆಸಿದ್ದಾರೆ ಆದರೆ ಅನರ್ಹ ಶಾಸಕರ ತೀರ್ಪು ಸುಪ್ರೀಂಕೋರ್ಟ್ ಬುಧವಾರದಂದು ಪ್ರಕಟಲಿರುವ ಕಾರಣ ಎಲ್ಲ ಲೆಕ್ಕಾಚಾರಗಳು ಬುಧವಾರದ ನಂತರವಷ್ಟೇ ಸ್ವಷ್ಟವಾಗಿ ಹೊರಬರಲಿವೆ ಆದರೆ ಗೋಕಾಕ ಗದ್ದುಗೆಗಾಗಿ ಸಹೋದರರ ಗುದ್ದಾಟ ಮಾತ್ರ ಬಹಿರಂಗವಾಗಿಯೇ ನಡೆದಿದೆ ಇದು ಮತದಾರರನ್ನು ಹೈರಾಣ ಮಾಡಿದೆ

ಕಳೆದ ಸುಮಾರು ನಾಲ್ಕು ತಿಂಗಳಿನಿಂದ ರಮೇಶ ಜಾರಕಿಹೊಳಿ ಅವರರೊಂದಿಗೆ ಮುನಿಸಿಕೊಂಡು ಇನ್ನೋರ್ವ ಸಹೋದರ ಶಾಸಕ ಸತೀಶ ಜಾರಕಿಹೊಳಿ ಅವರೊಂದಿಗೆ ಗುರುತಿಸಿಕೊಂಡು ರಮೇಶ ಜಾರಕಿಹೊಳಿ ಅವರಿಗೆ ಓಪನ್ ಛಾಲೆಂಜ ಮಾಡಿ ಮತಕ್ಷೇತ್ರದಾದ್ಯಂತ ಸಂಚರಿಸಿ ಪಂಚಾಯತಿ ಮಟ್ಟದಲ್ಲಿ ಆದ ಅವ್ಯವಹಾರಗಳನ್ನು ಜಾಲಾಡುತ್ತಿದ್ದಾರೆ . ಇದು ರಮೇಶ ಜಾರಕಿಹೊಳಿ ಅವರ ಬೆಂಬಲಿಗರಿಗೆ ಇರುಸು – ಮುರುಸು ಉಂಟುಮಾಡಿದೆ

ಅಳಿಯನಿಗಾಗಿ ಒಂದಾಗಿರುವ ಬದ್ದ ವೈರಿಗಳು : ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸಹೋದರ ಸತೀಶ ಜಾರಕಿಹೊಳಿ ವಿರುದ್ಧ ಯಮಕನಮರಡಿ ಕ್ಷೇತ್ರದಲ್ಲಿ ಬಹಿರಂಗವಾಗಿ ಪ್ರಚಾರ ನಡೆಸಿದ್ದ ಲಖನ್ ಜಾರಕಿಹೊಳಿ ಈಗ “ಎಲ್ಲಾ ನಿನೆ ತಾಯಿ ಎಲಲ್ಲಿ ನಿನ್ನ ಮಾಯೆ” ಎಂಬಂತೆ ಸತೀಶ ಜಾರಕಿಹೊಳಿ ಅವರ ಗುಣಗಾಣ ಮಾಡುತ್ತಿರುವದು ಗೋಕಾಕ ಮತಕ್ಷೇತ್ರದ ಮತ್ತು ಜಿಲ್ಲೆಯ ಜನರ ಹುಬ್ಬೇರುವಂತೆ ಮಾಡಿದೆ . ಈ ಮೊದಲು ಸತೀಶ ಜಾರಕಿಹೊಳಿ ಹೆಸರು ಮತ್ತು ಅವರ ಬೆಂಬಲಿಗರನ್ನು ಕಂಡರೆ ಕೆಂಡಾಮಂಡಲ ಆಗುತ್ತಿದ್ದ ಲಖನ್ ಜಾರಕಿಹೊಳಿ ಈಗ ಸತೀಶ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವದು ಕಂಡು ಜಾರಕಿಹೊಳಿ ಸಹೋದರರು ಯಾವಾಗ ಬೇಕಾದರು ಏನು ಬೇಕಾದರು ಮಾಡಬಹುದು ಎಂದು ಕ್ಷೇತ್ರದ ಜನರು ಬಣಿಸುತ್ತಿದ್ದಾರಲ್ಲದೆ ರಮೇಶ ಜಾರಕಿಹೊಳಿ ಅವರು ಅಂಬಿರಾವ್ ಪಾಟೀಲರಿಗೆ ಹೆಚ್ಚಿನ ಮಹತ್ವ ನೀಡುತ್ತಿರುವದನ್ನು ಸಹಿಸಲಾಯದೆ ಸತೀಶ ಜೊತೆ ಹೊಂದಾಣಿಕೆ ಲಖನ್ ಜಾರಕಿಹೊಳಿ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಸಹ ಗೋಕಾಕದಲ್ಲಿ ಬಲವಾಗಿ ಕೇಳಿ ಬರುತ್ತಿವೆ ಇದರಿಂದ ಯಾರಿಗೆ ಹಿನ್ನಡೆ ಮತ್ತು ಮುನ್ನಡೆ ಯಾಗುವದು ಎಂಬುದನ್ನು ಕಾಲವೇ ನಿರ್ಧರಿಸಬೇಕು

ಮರುಕಳಿಸುತ್ತದೆಯೇ ? 2008 ರ ಕದನ :
2008 ರ ವಿಧಾನಸಭಾ ಚುನಾವಣೆಯಲ್ಲಿ ರಮೇಶ ವಿರುದ್ಧ ರಣಕಹಳೆ ಊದಿ ಬಿಜೆಪಿಯಿಂದ ತಮ್ಮ ಮತ್ತೋರ್ವ ಸಹೋದರ ಡಾ‌. ಭೀಮಶಿ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಿದ್ದ ಸತೀಶ ಜಾರಕಿಹೊಳಿ , ರಮೇಶ ಜಾರಕಿಹೊಳಿ ವಿರುದ್ಧ ಇದೇ ಕಾರ್ಯತಂತ್ರಗಳನ್ನು ಅನುಸರಿಸಿದ್ದರು ಸತೀಶ ಬೆಂಬಲಿಗರು ಜಾತಿ,ಮತ ಪಂಥ ಮರೆತು ಸತೀಶ ಜಾರಕಿಹೊಳಿ ಅವರ ಆದೇಶವನ್ನು ಪಾಲಿಸಿ ಬಿಜೆಪಿಗೆ ಜೈ ಎಂದಿದ್ದರು ಆದರೆ ಕೊನೆಯ ಗಳಿಗೆಯಲ್ಲಿ ಸತೀಶ ಜಾರಕಿಹೊಳಿ ತಟ್ಟಸ್ಥ ಉಳಿದು ಒಳಗಿಂದೋಳಗೆ ರಮೇಶ ಜಾರಕಿಹೊಳಿ ಅವರ ಗೆಲುವಿಗೆ ಸಹಕರಿಸಿದರು ಎಂಬ ಬಲವಾದ ಮಾತುಗಳು ದಶಕಗಳು ಕಳೆದರೂ ಸಹ ಜನರ ಬಾಯಿಯಿಂದ ಕೇಳಿ ಬರುತ್ತಿವೆ

ಅನಾಥವಾಗಿದ್ದ ಸತೀಶ ಬೆಂಬಲಿಗರು : 2008 ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಅವರ ಸೂಚನೆ ಮೆರಗೆ ಬಿಜೆಪಿಯನ್ನು ಬೆಂಬಲಿಸಿದ್ದ ಸತೀಶ ಬೆಂಬಲಿಗರು ಮತ್ತು ಸುಮಾರು 13 ಜನ ನಗರಸಭೆ ಸದಸ್ಯರು ಸತೀಶ ಪರವಾಗಿ ನಿಲುವು ತೋರಿ ಬಿಜೆಪಿಯಿಂದ ಸ್ವರ್ಧಿಸಿದ್ದ ಭೀಮಶಿ ಜಾರಕಿಹೊಳಿ ಪರ ಪ್ರಚಾರ ಮಾಡಿದ್ದರು. ಫಲಿತಾಂಶ ಬಂದಾಗ ಮೂರನೇ ಸ್ಥಾನಕ್ಕೆ ತೃಪ್ತಿ ಪಡೆದ ಭೀಮಶಿ ಜಾರಕಿಹೊಳಿ ನಂತರ ಸಹೋದರ ಸತೀಶ್ ಅವರೊಂದಿಗೆ ಅಂತರ ಕಾಯ್ದುಕೊಂಡಿದ್ದಾರೆ.ನಂತರ ಬೆಳವಣಿಗೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿ ಭೀಮಶಿ ಜಾರಕಿಹೊಳಿ ಅವರಿಗೆ ಬೆಂಬಲಿಸಿದ್ದ ಸತೀಶ ಜಾರಕಿಹೊಳಿ ಆಪ್ತರನ್ನು ಮತ್ತು ಬೆಂಬಲಿಗರನ್ನು ಲಖನ್ ಜಾರಕಿಹೊಳಿ ಮತ್ತು ರಮೇಶ ಜಾರಕಿಹೊಳಿ ರೊಂದಿಗೆ ಕೂಡಿ ಬಹಿರಂಗವಾಗಿ ಸತೀಶ ಅವರನ್ನು ಬೆಂಬಲಿಸಿದ್ದ ಅಂದಿನ ನರಗಸಭೆ ಸದಸ್ಯರ ವಾರ್ಡಗಳಲ್ಲಿ ಗಟಾರ ತಗೆಯುವದಾಗಲ್ಲಿ , ಲೈಟ್ ಹಾಕುವದಾಗಲ್ಲಿ ,ಶೌಚಾಲಯ ಸ್ವಚ್ಚಗೋಳಿಸುವದಾಗಲ್ಲಿ ಸಂಪೂರ್ಣ ಬಂದ ಮಾಡಿ ಸತತ ಐದು ವರ್ಷಗಳ ಕಾಲ ನೀಡಿದ ಕಾಟ ಅಷ್ಟಿಷ್ಟಲ್ಲ ಯಾವುದೆ ಕೆಲಸವಾಗದೆ ಅಂದಿನ ನಗರಸಭೆ ಸದಸ್ಯರು ಅನುಭವಿಸಿದ ತೊಂದರೆ ಹೇಳ ತೀರದು. ಇದು ನಗರಸಭೆ ಸದಸ್ಯರ ಪರಿಸ್ಥಿತಿ ಯಾದರೆ ಇನ್ನೂ ಸತೀಶ್ ಮತ್ತು ಭೀಮಶಿ ಅವರನ್ನು ಬೆಂಬಲಿಸಿದ್ದ ಸತೀಶ ಅನುಯಾಯಿಗಳ ಪರಿಸ್ಥಿತಿ ಬೇರೆ ಯಾಗಿರಲಿಲ್ಲ ಅವರು ಯಾವದೇ ಕಾರ್ಯಮಾಡಲಿ ಲಖನ್ ಮತ್ತು ರಮೇಶ ಕೂಡಿ ಅದಕ್ಕೆ ಅಡತಡೆಯನ್ನುಂಟು ಮಾಡುತ್ತಿದ್ದರು ಅದನ್ನು ಸರಿಪಡಿಸುವ ಕಾರ್ಯವೂ ಸಹ ಸತೀಶ ಮತ್ತು ಭೀಮಶಿ ಅವರಿಂದ ಕಷ್ಟ ಸಾಧ್ಯವಾಗಿತ್ತು ಅಷ್ಟರ ಮಟ್ಟಗಿನ ಖದರ್ ಈ ಇಬ್ಬರೂ ಸಹೋದರರದ್ದಾಗಿತ್ತು ಒಟ್ಟಾರೆ ಸತೀಶ್ ಮಾತು ಕೇಳಿ ಭೀಮಶಿ ಜಾರಕಿಹೊಳಿ ಅವರನ್ನು ಬೆಂಬಲಿಸಿದ್ದ ಸತೀಶ ಅಭಿಮಾನಿಗಳು, ಹಿತೈಷಿಗಳು, ಅನುಯಾಯಿಗಳು ಮತ್ತು ನಗರಸಭೆ ಸದಸ್ಯರು ಅಂದು ಅನಾಥರಾಗಿದ್ದರು. ಇದನ್ನು ಮನಗಂಡ ಅಂದಿನ ಸದಸ್ಯರು ಈಗ ತುಟ್ಟಿ ಪಿಟ್ಟಕನ್ನದೇ ಬಹಿರಂಗವಾಗಿ ರಮೇಶ ಜಾರಕಿಹೊಳಿ ಅವರನ್ನು ಬೆಂಬಲಿಸುತ್ತಿದರೆ ಸತೀಶರ ಹಿತೈಷಿಗಳು ಇನ್ನೂ ಬಹಿರಂಗವಾಗಿ ರಂಗ ಪ್ರವೇಶ ಮಾಡಿಲ್ಲದಿರುವದು ಈಗ ಗುಟ್ಟಾಗಿ ಉಳಿದಿಲ್ಲ

ರಮೇಶ ಜಾರಕಿಹೊಳಿ ಮಣಿಸಲು ‌ಸೂತ್ರ ಹೆಣೆಯುತ್ತಿರುವ 3 ಪಕ್ಷಗಳು :
ಗೋಕಾಕ್ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಸೋಲಿಸಲು ಕಾರ್ಯತಂತ್ರ ರೂಪಿಸಲಾಗುತ್ತಿದೆ ಎನ್ನಲಾಗಿದೆ.
ಕಾಂಗ್ರೆಸ್, ಜೆಡಿಎಸ್ ಮತ್ತು ಕೆಲ ಬಿಜೆಪಿ ನಾಯಕರಿಂದ ರಣತಂತ್ರ ರೂಪಿಸಲಾಗಿದೆ. ಪಕ್ಷಬೇಧ ಮರೆತು ರಮೇಶ್ ಜಾರಕಿಹೊಳಿ ಸೋಲಿಸಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ತಂತ್ರ ರೂಪಿಸಲಾಗಿದೆ ಎಂದು ಹೇಳಲಾಗಿದೆ.
ಗೋಕಾಕ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ್ ಪೂಜಾರಿ ಅವರನ್ನು ಕಾಂಗ್ರೆಸ್ ಗೆ ಕರೆತರಲು ಸಿದ್ದತೆ ನಡೆಸಲಾಗಿದೆ. ನಿನ್ನೆ ಅವರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡು ಬರುವುದಾಗಿ ಕಾಂಗ್ರೆಸ್ ನಾಯಕರು ಜವಾಬ್ದಾರಿ ಹೊತ್ತುಕೊಂಡಿದ್ದು, ಅವರಿಗೆ ಜೆಡಿಎಸ್, ಬಿಜೆಪಿ ನಾಯಕರು ಕೈಜೋಡಿಸಲಿದ್ದಾರೆ ಎಂದು ಹೇಳಲಾಗಿದೆ.
ಆದರೆ, ಈ ಕ್ಷೇತ್ರದಲ್ಲಿ ಲಖನ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಟಿಕೆಟ್ ಖಚಿತಪಡಿಸಿಕೊಂಡಿರುವ ಸತೀಶ್ ಜಾರಕಿಹೊಳಿ, ರಮೇಶ್ ಸೋಲಿಸಲು ಪ್ಲಾನ್ ಮಾಡಿದ್ದಾರೆ. ಎಲ್ಲರೂ ಸೇರಿ ರಮೇಶ್ ಜಾರಕಿಹೊಳಿ ಅವರನ್ನು ಸೋಲಿಸಲು ತಂತ್ರ ರೂಪಿಸಿದ್ದಾರೆ. ಕಾಂಗ್ರೆಸ್ ನಿಂದ ಯಾರಿಗೆ ಟಿಕೆಟ್ ಸಿಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಮೈತ್ರಿ ಸರ್ಕಾರ ಬೀಳಿಸುವಲ್ಲಿ ಕಿಡಿಹೊತ್ತಿಸಿದ ರಮೇಶ್ ಜಾರಕಿಹೊಳಿ ಸೋಲಿಸಲು ಹೆಚ್.ಡಿ.ಕೆ., ಡಿಕೆಶಿ ಸೇರಿ ಹಲವು ನಾಯಕರು ಪ್ಲಾನ್ ಮಾಡಿದ್ದು, ಇದರ ಭಾಗವಾಗಿ ಅಶೋಕ್ ಪೂಜಾರಿ ಜೊತೆಗೆ ಚರ್ಚೆ ನಡೆಸಲಾಗಿದೆ ಎನ್ನಲಾಗುತ್ತಿದೆ .

” ಜಾರಕಿಹೊಳಿ ಸಹೋದರರ ಕಿತ್ತಾಟ್ಟ ಜನಸಾಮಾನ್ಯರಿಗೆ ತಲೆನೋವಾಗಿ ಪರಿಣಮಿಸಿದೆ ಗಂಡ ಹೆಂಡತಿಯರ ಮಧ್ಯೆ ಕೂಸು ನಾಸ ಎಂಬಂತಾಗಿದೆ ಮತದಾರರ ಪರಿಸ್ಥಿತಿ. ಒಟ್ಟಾರೆ ಕ್ಷೇತ್ರದ ಅಭಿವೃದ್ಧಿ ವಿಚಾರದ ಮೇಲೆ ಈ ಚುನಾವಣೆ ನಡೆಯಲಿದೆ
ಇದು ಚುನಾವಣೆಗೆ ಸ್ವರ್ಧಿಸುವ ಎಲ್ಲ ಅಭ್ಯರ್ಥಿಗಳಿಗೆ ಹೊಸ ಪಾಠವಾದರೂ ಸಹ ಏನು ಅಚ್ಚರಿ ಪಡಬೇಕಾಗಿಲ್ಲ “

– ಕೃಷ್ಣಾ ಕೆ. ಮತದಾರ ಗೋಕಾಕ .

Related posts: