ಬೆಳಗಾವಿ:ನಾಡವಿರೋಧಿ ಎಂಇಎಸ್ ನ ಬೇವರಿಳಿಸಿದ್ದ ದಿಟ್ಟ ಜಿಲ್ಲಾಧಿಕಾರಿ ಎನ್.ಜಯರಾಂ ಬೆಂಗಳೂರಿಗೆ ವರ್ಗಾವಣೆ
ನಾಡವಿರೋಧಿ ಎಂಇಎಸ್ ನ ಬೇವರಿಳಿಸಿದ್ದ ದಿಟ್ಟ ಜಿಲ್ಲಾಧಿಕಾರಿ ಎನ್.ಜಯರಾಂ ಬೆಂಗಳೂರಿಗೆ ವರ್ಗಾವಣೆ
ಬೆಳಗಾವಿ ಜು 27: ಜನರ ಜಿಲ್ಲಾಧಿಕಾರಿ, ಬೆಳಗಾವಿಗರ ಮನೆ ಮಗ, ನಾಡದ್ರೋಹಿ ಎಂಇಎಸ್ ಗೆ ಸಿಂಹಸ್ವಪ್ನ ಎನ್. ಜಯರಾಮ ಸುದೀರ್ಘ ನಾಲ್ಕು ವರ್ಷಗಳ ಸೇವೆ ನಂತರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಬೆಂಗಳೂರಿಗೆ ವರ್ಗಾವಣೆ ಆಗಿದ್ದಾರೆ.
ಕೆಳಹಂತದ ಅಧಿಕಾರಿ ವರ್ಗ, ಜನಪ್ರತಿನಿಧಿಗಳು, ಮಾಧ್ಯಮಗಳು ಹಾಗೂ ಜನಸಾಮಾನ್ಯರೊಂದಿಗೆ ಸಹಜ ಸೌಜನ್ಯ, ಸೌಮ್ಯತೆಯಿಂದ ಇದ್ದು, ತಮ್ಮ ಕಚೇರಿ ಬಾಗಿಲು ಸದಾ ಜನಭೇಟಿಗೆ ತೆರೆದಿಟ್ಟುಕೊಂಡಿದ್ದ ಎನ್. ಜಯರಾಮ ಜಿಲ್ಲೆಯನ್ನು ಸಮಯೋಚಿತ ಆಡಳಿತದಲ್ಲಿ ತೊಡಗಿಸಿ ಎಲ್ಲರಿಂದಲೂ ಸೈ ಎನ್ನಿಸಿಕೊಂಡಿದ್ದರು.
ರಾಷ್ಟ್ರಪತಿ, ಪ್ರಧಾನಿಗಳ ಆಹ್ವಾನ , ಯಶಸ್ವಿ ವಿಧಾನಮಂಡಲ ಅಧಿವೇಶನ ನಡೆಸಿದ್ದು, ನಾಡವಿರೋಧಿ ಚಟುವಟಿಕೆಗಳನ್ನು ಹದ್ದು ಬಸ್ತಿನಲ್ಲಿಟ್ಟಿದ್ದು, ಉತ್ಸವ, ಸಾರ್ವಜನಿಕ ಸಮಾರಂಭಗಳ ವ್ಯವಸ್ಥಿತ ಆಯೋಜನೆ ಸೇರಿ ಇಡೀ ಆಡಳಿತ ವ್ಯವಸ್ಥಿತವಾಗಿ ನಡೆಸಿ ರಾಜ್ಯದ ಗಮನ ಸೆಳೆದಿದ್ದರು
Related posts:
ಗೋಕಾಕ:ಸಮ್ಮೇಳನದ ಸಂಘಟಕರ ಎಡವಟ್ಟು : ಸಮ್ಮೇಳನ ಬಹಿಷ್ಕರಿಸಿ ವೇದಿಕೆಯಿಂದ ನಿರ್ಗಮಿಸಿದ ಸಾಹಿತಿ ಪ್ರೊ. ಜ್ಯೋತಿ ಹೊಸೂರ
ಘಟಪ್ರಭಾ:ಗ್ರಾಮೀಣ ಭಾಗದ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದಾಗಿದೆ : ಮಲ್ಲಿಕಾರ್ಜುನ ಮಹಾಸ್ವ…
ಘಟಪ್ರಭಾ:ರಾಜಾಪೂರದಲ್ಲಿ 8.17 ಕೋಟಿ ರೂ. ವೆಚ್ಚದ ಜಲಜೀವನ ಮಿಷನ್ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ