ಗೋಕಾಕ:ಮತ್ತೆ ಉರಿಳಿದ ಬಂಡೆ , ತಪ್ಪಿದ ಭಾರಿ ಅನಾಹುತ : ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ

ಮತ್ತೆ ಉರಿಳಿದ ಬಂಡೆ , ತಪ್ಪಿದ ಭಾರಿ ಅನಾಹುತ : ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 27:
ಸಾರ್ವಜನಿಕರೆಲ್ಲ ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವಾಗ ಇಲ್ಲಿಯ ಮಲ್ಲಿಕಾರ್ಜುನ/ ಮಲ್ಲಿಕಸಾಬ ಗುಡ್ಡದ ಮೇಲಿನ ಬಂಡೆಗಲ್ಲುಗಳು ಇಂದು ಮತ್ತೆ ಸದ್ದುಮಾಡಿವೆ. ರವಿವಾರದಂದು 4:30 ಸುಮಾರಿಗೆ ಸಂಗಮ ನಗರ ಮೇಲ್ಲಗಡೆಯ ಗುಡ್ಡದ ಮೇಲಿನಿಂದ ಬೃಹದಾಕಾರದ ಬಂಡೆಗಲ್ಲೊಂದು ಕುಸಿದು ಸರಿಸುಮಾರು 700 ಮೀಟರ್ ವರೆಗೆ ಪುಡಿ ಪುಡಿಯಾಗಿ ಉರುಳಿ ಬಂದು ಸಾರ್ವಜನಿಕರಲ್ಲಿ ಮತ್ತೆ ಆತಂಕ ಸೃಷ್ಟಿಮಾಡಿದೆ.
ಮೊನ್ನೆಯಷ್ಟೇ ನಗರದ ಮಲ್ಲಿಕಾರ್ಜುನ/ ಮಲ್ಲಿಕಸಾಬ ಗುಡ್ಡದಲ್ಲಿ ಬೃಹದಾಕಾರದ ಬಂಡೆಗಲ್ಲು ಕುಸಿದು ಭಾರಿ ಸದ್ದು ಮಾಡಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿ ರಾಜ್ಯಾದ್ಯಂತ ಸುದ್ದಿಯಾಗಿದವು , ಸ್ಥಳೀಯ ಸತೀಶ ಪೌಂಡೇಶನ್ ಮತ್ತು ಎನ್.ಡಿ.ಆರ್.ಎಫ್ ತಂಡಗಳ ಸುರಕ್ಷಿತ ಕಾರ್ಯಾಚರಣೆಯಿಂದ ಜನರು ಸ್ವಲ್ಪ ನಿಟ್ಟುಸಿರು ಬಿಟ್ಟಿದರು.
ಅದರ ಬೆನ್ನಲ್ಲೇ ಮತ್ತೆ ಇಂದು ಬಂಡೆಗಲ್ಲು ಉರಳಿ ಬಂದಿದ್ದು , ಯಾವುದೆ ಜೀವ ಹಾನಿ ಯಾಗಿಲ್ಲ , ಬಂಡೆ ಉರುಳಿ ಬರುವಾಗ ಮರಗಳಿಗೆ ಡಿಕ್ಕಿಯಾದ ಪರಿಣಾಮ ಸಂಗಮ ನಗರದಲ್ಲಿರುವ ಮನೆಗಳ ವರೆಗೆ ಬರದೆ ಮರದ ಪಕ್ಕದಲ್ಲಿಲೆ ನಿಂತುಕೊಂಡಿದ್ದು , ಬಂಡೆ ಉರುಳುವಾಗ ಇನ್ನು ಎರೆಡು ಬೃಹದಾಕಾರದ ಬಂಡೆಗಲ್ಲುಗಳನ್ನು ಸಡಿಲಿಸಿದ್ದು,
ಅಧಿಕೃತವಾಗಿ ತಾಲೂಕಾಡಳಿತದ ಯಾರೋಬ್ಬರು ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ತಿಳಿದು ಬಂದಿದೆ

