ಗೋಕಾಕ:ಜನತೆಯ ನೆಮ್ಮದಿ ಜೀವನಕ್ಕಾಗಿ ಈ ಬಾರಿ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಿ : ಸತೀಶ ಜಾರಕಿಹೊಳಿ

ಜನತೆಯ ನೆಮ್ಮದಿ ಜೀವನಕ್ಕಾಗಿ ಈ ಬಾರಿ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಿ : ಸತೀಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 14 :
ನಗರ ಸುಧಾರಣೆಯೊಂದಿಗೆ ಜನತೆಯ ನೆಮ್ಮದಿ ಜೀವನಕ್ಕಾಗಿ ಈ ಬಾರಿ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಿ ಬದಲಾವಣೆ ತನ್ನಿರೆಂದು ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಸೋಮವಾರದಂದು ಸಂಜೆ ನಗರದ ವಾರ್ಡ ನಂ 21, 22, 23 ಮತ್ತು 29 ರಲ್ಲಿ ಸಂಚರಿಸಿ ಜನತೆಯ ಕುಂದು ಕೊರತೆಗಳನ್ನು ವಿಚಾರಿಸಿ ಮಾತನಾಡಿದ ಅವರು, ನಮ್ಮ ಆಡಳಿತದಲ್ಲಿ ನಗರಸಭೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿತ್ತು, ಇಂದು ಕೆಲವೇ ವ್ಯಕ್ತಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ಯಾವುದೇ ಅಭಿವೃದ್ದಿ ಕಾರ್ಯಗಳು ಆಗದೇ ಅವನತಿಯತ್ತ ಸಾಗುತ್ತಿದೆ ಎಂದು ತಿಳಿಸಿದರು.
ಕಳೆದ 20 ವರ್ಷಗಳಿಂದ ಇಲ್ಲಿಯ ಬಡಜನತೆಗೆ ನಿವೇಶನಗಳ ಹಕ್ಕುಪತ್ರ ನೀಡಿಲ್ಲ, ಹದಗೆಟ್ಟ ರಸ್ತೆಗಳು, ದುಬಾರಿ ನೀರಿನ ಕರ, ಸ್ವಚ್ಛತೆ ಹಾಗೂ ಶೌಚಾಯಲಗಳ ಕೊರತೆಯಿಂದ ನಗರದ ಜನತೆ ತೊಂದರೆಗೀಡಾಗಿದ್ದಾರೆ. ಪ್ರವಾಹದಿಂದ ಹಾನಿಗೊಳಗಾದ ಬಿದ್ದ ಮನೆಗಳ ಮಣ್ಣು ತೆರವಿಗೆ 40ಲಕ್ಷ ರೂಗಳ ಖರ್ಚು ಮಾಡಿದ್ದು, ನಗರಸಭೆಯವರು 80 ಲಕ್ಷ ಖರ್ಚು ಮಾಡಿ ಬೃಷ್ಠಾಚಾರ ನಡೆಸಿದ್ದಾರೆ. ಇವೆಲ್ಲ ಹರಗಣಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಲು ನಗರಸಭೆಗೆ ಭೇಟಿ ನೀಡಿ ಅಲ್ಲಿಯ ಬೃಷ್ಠಾಚಾರವನ್ನು ಜನತೆ ಮುಂದೆ ಇಡಲಾಗುವುದು ಎಂದು ತಿಳಿಸಿದರು.
ಕಾಂಗ್ರೇಸ್ ಮುಖಂಡ ಲಖನ ಜಾರಕಿಹೊಳಿ ಮಾತನಾಡುತ್ತಾ, ಬೃಷ್ಠಾಚಾರದ ವಿರುದ್ಧ ಹಾಗೂ ಅಭಿವೃದ್ದಿ ಪರ ಹೋರಾಟ ನಮ್ಮದಾಗಿದೆ. ಇಲ್ಲಿಯ ಜನತೆಯೆ ನಮ್ಮ ಶಕ್ತಿಯಾಗಿದ್ದು, ಅನ್ಯಾಯದ ವಿರುದ್ಧ ನಮ್ಮ ಹೋರಾಟಕ್ಕೆ ನಿಮ್ಮ ಶಕ್ತಿ ಅವಶ್ಯಕತೆ ಇದೆ. ಹಲವಾರು ವರ್ಷಗಳಿಂದ ಕಾಂಗ್ರೇಸ್ ಪಕ್ಷಕ್ಕೆ ತಮ್ಮ ಆಶಿರ್ವಾದವನ್ನು ನೀಡುತ್ತಾ ಬಂದಿದ್ದು ಈ ಬಾರಿಯೂ ನಮ್ಮ ಪಕ್ಷಕ್ಕೆ ತಮ್ಮ ಅಮೂಲ್ಯವಾದ ಮತವನ್ನು ನೀಡಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರು, ವಾರ್ಡಗಳ ಮುಖಂಡರು ಮಹಿಳೆಯರು ಸೇರಿದಂತೆ ಅನೇಕರು ಇದ್ದರು.