RNI NO. KARKAN/2006/27779|Tuesday, July 8, 2025
You are here: Home » breaking news » ಗೋಕಾಕ:ಬೆಳಗಾವಿ ಜಿಲ್ಲಾ ವಿಭಜನೆಗೆ ಹೆಚ್ಚಿದ ಆಗ್ರಹ : ಗೋಕಾಕ ನೂತನ ಜಿಲ್ಲೆಗೆ ಆಗ್ರಹಿಸಿ ಅ 3 ರಂದು ಮುಖ್ಯಮಂತ್ರಿ ಭೇಟಿ

ಗೋಕಾಕ:ಬೆಳಗಾವಿ ಜಿಲ್ಲಾ ವಿಭಜನೆಗೆ ಹೆಚ್ಚಿದ ಆಗ್ರಹ : ಗೋಕಾಕ ನೂತನ ಜಿಲ್ಲೆಗೆ ಆಗ್ರಹಿಸಿ ಅ 3 ರಂದು ಮುಖ್ಯಮಂತ್ರಿ ಭೇಟಿ 

ಬೆಳಗಾವಿ ಜಿಲ್ಲಾ ವಿಭಜನೆಗೆ ಹೆಚ್ಚಿದ ಆಗ್ರಹ : ಗೋಕಾಕ ನೂತನ ಜಿಲ್ಲೆಗೆ ಆಗ್ರಹಿಸಿ ಅ 3 ರಂದು ಮುಖ್ಯಮಂತ್ರಿ ಭೇಟಿ

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 29 :

ಗೋಕಾಕ ಜಿಲ್ಲಾ ಹೋರಾಟ ಸಲುವಾಗಿ ಗೋಕಾಕ ವಕೀಲರ ಸಂಘದವರು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರನ್ನು  ಭೇಟಿ ನೀಡಿ ಚರ್ಚಿಸಿದರು.

ನಗರದ ಮಾಜಿ ಸಚಿವರ ಕಛೇರಿಗೆ ಭೇಟಿ ನೀಡಿದ ಸಂಘದ ಅಧ್ಯಕ್ಷ ವ್ಹಿ.ಬಿ.ಶಿಂಪಿ ನೇತೃತ್ವದ ನಿಯೋಗವು ಭೇಟಿ ಆಗಿ ಗೋಕಾಕ ಜಿಲ್ಲೆ ರಚನೆ ಸಂಬಂಧವಾಗಿ ಸುಮಾರು ಅರ್ಧ ಗಂಟೆಗಳ ಮಾತುಕತೆ ನಡೆಸಿ ಮುಂದಿನ ಹೋರಾಟ ಮತ್ತು ಕೈಗೊಳ್ಳಬೇಕಾಗುವ ನಡೆಗಳ ಬಗ್ಗೆ ಚರ್ಚಿಸಿದರು.

ದಿ. 03 ರಂದು ಬೆಳಗಾವಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಲಿದ್ದು ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಜಿಲ್ಲಾ ಹೋರಾಟ ಚಾಲನಾ ಸಮಿತಿ ಅಧ್ಯಕ್ಷರಾದ ಶೂನ್ಯ ಸಂಪಾದನಾ ಮಠದ ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ  ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ರಮೇಶ ಜಾರಕಿಹೊಳಿ ತಿಳಿಸಿದರು.

ಗೋಕಾಕ ಜಿಲ್ಲೆ ಘೋಷಣೆ ನಿಶ್ಚಿತ: ಆದರೆ ಅದಕ್ಕೂ ಪೂರ್ವದಲ್ಲಿ ಇನ್ನೂ ಕೆಲ  ಹೊಸ ತಾಲೂಕುಗಳ ಘೋಷಣೆ ಆಗಬೇಕಾಗಿದೆ ಹೊಸ ತಾಲೂಕು ಘೋಷಣೆ ಜೊತೆಗೆ ಬೆಳಗಾವಿ ಜಿಲ್ಲಾ ವಿಭಜನೆ ಮಾಡಿ ಗೋಕಾಕ ಜಿಲ್ಲೆ ಬಗ್ಗೆ ಯೋಜನಾಬಧ್ಧ ಹೋರಾಟ ದ ಮೂಲಕ ಗೋಕಾಕ ಜಿಲ್ಲೆ ಘೋಷಣೆ ಗೆ ಒತ್ತಾಯ ಮಾಡಲಾಗುವುದು ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

Related posts: