RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ವಿಕೋಪಕ್ಕೆ ತಿರುಗಿದ ವಿದ್ಯುತ್ ಸೌಲಭ್ಯ ಕಲ್ಪಿಸುವ ಹೋರಾಟ : ಡಿಎಸಪಿ ಡಿ.ಟಿ.ಪ್ರಭು ಖಡಕ್ ಎಚ್ಚರಿಕೆ ಕಾಲ್ಲಕಿತ್ತ ರಮೇಶ ಮತ್ತು ಅಶೋಕ ಬೆಂಬಲಿಗರು

ಗೋಕಾಕ:ವಿಕೋಪಕ್ಕೆ ತಿರುಗಿದ ವಿದ್ಯುತ್ ಸೌಲಭ್ಯ ಕಲ್ಪಿಸುವ ಹೋರಾಟ : ಡಿಎಸಪಿ ಡಿ.ಟಿ.ಪ್ರಭು ಖಡಕ್ ಎಚ್ಚರಿಕೆ ಕಾಲ್ಲಕಿತ್ತ ರಮೇಶ ಮತ್ತು ಅಶೋಕ ಬೆಂಬಲಿಗರು 

ಮಿನಿ ವಿಧಾನಸೌಧ ಪ್ರವೇಶಿಸುತ್ತಿರುವ ರಮೇಶ ಜಾರಕಿಹೊಳಿ ಬೆಂಬಲಿಗರನ್ನು ಗೇಟ್ ನಲ್ಲಿಯೆ ತಡೆದಿರುವ ಪೊಲೀಸರು

ವಿಕೋಪಕ್ಕೆ ತಿರುಗಿದ ವಿದ್ಯುತ್ ಸೌಲಭ್ಯ ಕಲ್ಪಿಸುವ ಹೋರಾಟ : ಡಿಎಸಪಿ ಡಿ.ಟಿ.ಪ್ರಭು ಖಡಕ್ ಎಚ್ಚರಿಕೆ ಕಾಲ್ಲಕಿತ್ತ ರಮೇಶ ಮತ್ತು ಅಶೋಕ ಬೆಂಬಲಿಗರು

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 16:

 

 
ಗೋಕಾಕ ಫಾಲ್ಸ ಹದ್ದಿಯಲ್ಲಿರುವ ದನದ ಓಣಿಯಲ್ಲಿ ವಾಸಿಸುತ್ತಿರುವ ಸುಮಾರು 500 ಕುಟುಂಬಗಳಲ್ಲಿಗೆ ವಿದ್ಯುತ್ ಸಂರ್ಪಕ ಕಲ್ಪಿಸುವಂತೆ ಆಗ್ರಹಿಸಿ ಬಿಜೆಪಿ ಮುಖಂಡ ಅಶೋಕ ಪೂಜಾರಿ ಅವರ ನೇತೃತ್ವದಲ್ಲಿ ನಡೆದ ಧರಣಿ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಕೆಲಕಾಲ ಆಂತಕ ಸೃಷ್ಟಿಸದ ಘಟನೆ ಜರುಗಿತ್ತು

ಸೋಮವಾರದಂದು ಗೋಕಾಕ ಫಾಲ್ಸ ನ ಗಣಪತಿ ಗುಡಿಯಿಂದ ನಗರದ ತಹಶೀಲ್ದಾರ್ ಕಛೇರಿವರೆಗೆ ನಡೆದ ಪಾದಯಾತ್ರೆಯ ನಂತರ ತಹಶೀಲ್ದಾರ್ ಕಛೇರಿ ಎದುರು ಪ್ರತಿಭಟನಾಕಾರರು ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿ ಕಳೆದ ಹಲವಾರು ವರ್ಷಗಳಿಂದ ಗೋಕಾಕ ಫಾಲ್ಸ ದನದ ಓಣಿಯ ಜನರಿಗೆ ವಿದ್ಯುತ್ ಸಂರ್ಪಕ ಕಲ್ಪಿಸುವಂತೆ ಹೋರಾಟ ನಡೆಯಿಸಿ ನಡೆದ ಹೋರಾಟಕ್ಕೆ ಪೂರಕವಾಗಿ ಸರಕಾರ 2019 ರ ಜನೇವರಿ ತಿಂಗಳಲ್ಲಿ ಈ ಕುಟುಂಬಗಳಿಗೆ ಗೃಹಪಯೋಗಿ ವಿದ್ಯುತ್ ಸೌಲಭ್ಯ ಕಲ್ಪಿಸಿಕೋಡಲು ಕೇಂದ್ರ ಸರಕಾರದ ಸೌಭಾಗ್ಯ ಯೋಜನೆಯಲ್ಲಿ ರಾಜ್ಯ ಸರಕಾರದಿಂದ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡಲು ಹುಬ್ಬಳ್ಳಿಯ ಹೆಸ್ಕಾಂ ಇಲಾಖೆಯಿಂದ ಅಧಿಕೃತ ಮಂಜೂರಾತಿ ದೊರೆತ್ತಿದ್ದು , ಮಿಲ್ ಆಡಳಿತ ಮಂಡಳಿ ಮತ್ತು ಕೊಣ್ಣೂರ ಪುರಸಭೆಯ ನಿಷ್ಕ್ರೀಯ ದೋರಣೆಯಿಂದ ಇಂದಿನವರೆಗೂ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡುವ ಕಾರ್ಯ ನಡೆದಿಲ್ಲ ಎಂದು ಆರೋಪಿಸಿ ಧರಣಿ ನಡೆಸುತ್ತಿರುವ ಸಂದರ್ಭದಲ್ಲಿ ಗೋಕಾಕ ಪಾಲ್ಸನ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಬೆಂಬಲಿಗರು ಅಶೋಕ ಪೂಜಾರಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಅಶೋಕ ಪೂಜಾರಿ ಅವರು ಗೋಕಾಕ ಫಾಲ್ಸನಲ್ಲಿ ಶಾಂತಿ ಕೆದಡಿಸಲು ಪ್ರಯತ್ನಿಸುತ್ತಿದ್ದಾರೆ ಕೆಲವರ್ಷಗಳ ಹಿಂದೆ ಮಿಲ್ಲ ಬಂದ ಬಿದ್ದಾಗ ಕಾರ್ಮಿಕ ಬಗ್ಗೆ ಬರದ ಕರುಣೆ ಈಗ ತೋರಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಿನಿ ವಿಧಾನಸೌಧವನ್ನು ಪ್ರವೇಶಿಸಲು ಬರುತ್ತಿರುವ ಸಂದರ್ಭದಲ್ಲಿ ಪೊಲೀಸರ ಅವರನ್ನು ಗೇಟನಲ್ಲಿಯೇ ತಡೆದರು.

ಇದರಿಂದ ಪೊಲೀಸರ ಮತ್ತು ರಮೇಶ ಜಾರಕಿಹೊಳಿ ಬೆಂಬಲಿಗರ ಮಧ್ಯೆ ಮಾತಿನ ಚಕ್ಕಮಕ್ಕಿ ನಡೆಯಿತು. ಪರ ವಿರೋಧ ಘೋಷಣೆಗಳು ಜೋರಾಗಿ ನಡೆದು ಮಿನಿ ವಿಧಾನಸೌಧ ಆವರಣದಲ್ಲಿ ಘರ್ಷಣೆ ನಡೆಯುವ ಭೀತಿ ಆವರಿಸಿತ್ತು . ಸತತ ಒಂದು ಘಂಟೆಗೂ ಹೆಚ್ಚುಕಾಲ ಆರೋಪ , ಪ್ರತ್ಯಾರೋಪ ಮಾಡುತ್ತಿದ್ದ ಪ್ರತಿಭಟನಾ ಕಾರರನ್ನು ಸಮಾಧಾನ ಪಡೆಸಲು ಪೊಲೀಸರು ಹರಸಹಾಸ ಪಟ್ಟರು.

ಧರಣಿ ನಿರತ ಅಶೋಕ ಪೂಜಾರಿ ಮತ್ತು ಬೆಂಬಲಿಗರು

ಪರಿಸ್ಥಿತಿ ಕೈ ಮೀರಿ ಹೋಗುವದನ್ನು ಅರಿತ ಡಿಎಸಪಿ ಡಿ.ಟಿ.ಪ್ರಭು ಅವರು ರಮೇಶ್ ಮತ್ತು ಅಶೋಕ ಬೆಂಬಲಿಗರಿಗೆ ಹತ್ತು ನಿಮಿಷದಲ್ಲಿ ಎಲ್ಲರೂ ಜಾಗ ಖಾಲಿ ಮಾಡಬೇಕು ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರಲ್ಲ ಏನ್ ಆಟ ಹಚ್ಚಿದಿರಾ ನಾವೇನ ನಿಮ್ಮ ನಾಟಕ ನೋಡಲು ಬಂದಿಲ್ಲ ಹುಷಾರ್ ಎಂದು ಖಡಕ್ ಎಚ್ಚರಿಕೆ ನೀಡದ ಪರಿಣಾಮ ಅಶೋಕ ಪೂಜಾರಿ ಮತ್ತು ಬೆಂಬಲಿಗರು ಹಾಗೂ ರಮೇಶ ಜಾರಕಿಹೊಳಿ ಅವರ ಬೆಂಬಲಿಗರು ಪ್ರತಿಭಟನಾ ಸ್ಥಳದಿಂದ ಕಾಲ್ಲಕಿತ್ತರು

Related posts: