RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಸ್ವಲ್ಪ ಕಾಮೇಡಿ, ಸ್ವಲ್ಪ ತರಾಟೆ ಸಂತ್ರಸ್ತರ ಸಭೆಯಲ್ಲಿ ಸಚಿವರಿಂದ ಎರಡನ್ನು ಅನುಭವಿಸಿದ ಅಧಿಕಾರಿಗಳು

ಗೋಕಾಕ:ಸ್ವಲ್ಪ ಕಾಮೇಡಿ, ಸ್ವಲ್ಪ ತರಾಟೆ ಸಂತ್ರಸ್ತರ ಸಭೆಯಲ್ಲಿ ಸಚಿವರಿಂದ ಎರಡನ್ನು ಅನುಭವಿಸಿದ ಅಧಿಕಾರಿಗಳು 

ನೆರೆ ಸಂತ್ರಸ್ತರ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಚಿವ ಲಕ್ಷ್ಮಣ ಸವದಿ

ಸ್ವಲ್ಪ ಕಾಮೇಡಿ, ಸ್ವಲ್ಪ ತರಾಟೆ ಸಂತ್ರಸ್ತರ ಸಭೆಯಲ್ಲಿ ಸಚಿವರಿಂದ ಎರಡನ್ನು ಅನುಭವಿಸಿದ ಅಧಿಕಾರಿಗಳು

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 22 :

 

 
ನಗರದ ನೆರೆ ಪ್ರದೇಶಗಳನ್ನು ವಿಕ್ಷೀಸಿ ಸಚಿವ ಲಕ್ಷ್ಮಣ ಸವದಿ ಅಧಿಕಾರಿಗಳ ಸಭೆ ತೆಗೆದು ಕೋಳುವಾಗ ತಾಲೂಕಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಚಿವರಿಂದ ತರಾಟೆ ಮತ್ತು ಕಾಮೇಡಿ ಎರಡನ್ನು ಅನುಭವಿಸಿದ ಘಟನೆ ಗುರುವಾರದಂದು ನಗರದ ತಾ.ಪಂ ಕಛೇರಿಯಲ್ಲಿ ನಡೆದಿದೆ

ಪ್ರವಾಹಕ್ಕೆ ಸಂಬಂಧಿಸಿದಂತೆ ಇಲಾಖಾ ವಾರು ಮಾಹಿತಿ ಪಡೆಯುತ್ತಿರುವ ಸಂದರ್ಭದಲ್ಲಿ ಹೆಸ್ಕಾಂಗೆ ಸಂಬಂಧಿಸಿದಂತೆ ಕಾರ್ಯಗಳ ಮಾಹಿತಿಗೆ ಸಿಡಿಮಿಡಿಗೊಂಡ ಸಚಿವರು ಜಪಾನ ದೇಶದಲ್ಲಿ ನಡೆದ ಮಹಾ ಯುದ್ದದಲ್ಲಿ ನಾಶಗೊಂಡ ಹೀರೊಸೀಮಾ ಮತ್ತು ನಾಗಾಸಾಕಿ ನಗರಗಳು ಸಂಪೂರ್ಣ ಹಾಳಾದಾಗ ಅಲ್ಲಿಯ ವ್ಯವಸ್ಥೆ ಕೇವಲ 48 ಘಂಟೆಗಳಲ್ಲಿ ಮತೆ ಎಲ್ಲ ಪ್ರದೇಶಗಳಲ್ಲಿ ವಿದ್ಯುತ್ ಕಲ್ಪಿಸಿದಂತೆ ಹಿಂತಹ ತುರ್ತು ಪರಿಸ್ಥಿತಿಯಲ್ಲಿ ಅಧಿಕಾರಿಗಳು ತ್ವರಿತವಾಗಿ ದುರಸ್ಥಿ ಕಾರ್ಯಗಳನ್ನು ಕೈಗೊಂಡು ನಿರಾಶ್ರಿತರಿಗೆ ನೆರವಾಗಬೇಕು ಕುಂಟು ನೆಪಗಳನ್ನು ಹೇಳದೆ ತಕ್ಷಣ ಕಾರ್ಯಪ್ರವೃತವಾಗಬೇಕೆಂದು ಹೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎಸ್.ಬಿ.ವರಾಳೆಗೆ ಸಚಿವರು ತರಾಟೆಗೆ ತಗೆದುಕೊಂಡ ಘಟನೆ ಸಭೆಯಲ್ಲಿ ನಡೆಯಿತು

ಮಧ್ಯೆ ಮಧ್ಯೆ ಹಾಸ್ಯ ಚಟಾಕಿ : ನೆರೆ ಪರಿಹಾರ ಕಾರ್ಯಗಳನ್ನು ಯಾವ ರೀತಿ ಕೈಗೋಳಬೇಕೆಂದು ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡುತ್ತಿದ್ದ ಸಚಿವರು ಸರಕಾರದಿಂದ ಪರಿಹಾರ ಸಿಗುತ್ತದೆ ಎಂದು ಮನೆ,ಜಾನುವಾರುಗಳನ್ನು ಕಳೆದುಕೊಳ್ಳದಿದ್ದರೂ ಸಹ ಅಧಿಕಾರಗಳ ಗೆಳೆತನದಿಂದ ಮನೆ ಮತ್ತು ಜಾನವಾರುಗಳನ್ನು ಕಳೆದುಕೊಂಡಿದೆವೆಂದು ಸರ್ವೆಯಲ್ಲಿ ಬರೆಸುತ್ತಾರೆ ಅಧಿಕಾರಿಗಳು ಸಹ ಅದನ್ನು ಬರೆದುಕೋಳ್ಳತ್ತಾರೆ ಹಿಂತಹ ಘಟನೆಗಳು 2005 ರಲ್ಲಿ ಕೃಷ್ಣಾ ನದಿಗೆ ಪ್ರವಾಹ ಬಂದಾಗ ನಮ್ಮಲ್ಲಿ ಆಗಿವೆ ಆದರೆ ಗೋಕಾಕಿನ ಜನತೆ ಬಳಹ ಪ್ರಾಮಾಣಿಕರು ಹಾಗೆ ಮಾಡಲ್ಲ ಆದರೂ ಆಧಿಕಾಗಳು ಸ್ವಲ್ಪ ಎಚ್ಚರಿಕೆಯಿಂದ ಸರ್ವೆ ಕಾರ್ಯಗಳನ್ನು ಮಾಡಬೇಕು ಎಂದು ಸಚಿವರು ಹೇಳಿದಾಗ ಇಡೀ ಸಭೆ ನಗೆಗಡಲಲ್ಲಿ ತೆಲಿತ್ತು ಹೀಗೆ ಸಚವರು ಮಧ್ಯೆ ಮಧ್ಯೆ ಹಾಸ್ಯ ಚಟಾಕೆ ಹಾರಿಸಿ ಅಧಿಕಾರಿಗಳನ್ನು ಹುರಿದುಂಬಿಸಿದ ಪ್ರಸಂಗಗಳು ಈ ಸಂದರ್ಭದಲ್ಲಿ ಕಂಡುಬಂದವು.

 

Related posts: