RNI NO. KARKAN/2006/27779|Thursday, January 15, 2026
You are here: Home » breaking news » ಗೋಕಾಕ:ಜ್ಞಾನದೀಪ ಸ್ವತಂತ್ರ ಪ.ಪೂ. ಮಹಾವಿದ್ಯಾಲಯ: ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ

ಗೋಕಾಕ:ಜ್ಞಾನದೀಪ ಸ್ವತಂತ್ರ ಪ.ಪೂ. ಮಹಾವಿದ್ಯಾಲಯ: ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ 

ಜ್ಞಾನದೀಪ ಸ್ವತಂತ್ರ ಪ.ಪೂ. ಮಹಾವಿದ್ಯಾಲಯ: ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ

 

 

ಪಿಯು ವಿಜ್ಞಾನ ಶೇ. 70 ಮತ್ತು ವಾಣಿಜ್ಯ ಶೇ. 60 ಫಲಿತಾಂಶ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 16 :

 

ಇಲ್ಲಿನ ಪ್ರತಿಷ್ಠಿತ ಗೋಕಾಕ ಶಿಕ್ಷಣ ಸಂಸ್ಥೆಯ ಜ್ಞಾನದೀಪ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಗೈದಿದ್ದಾರೆ.


ವಿಜ್ಞಾನ ವಿಭಾಗ:
ವೈಷ್ಣವಿ ಎಂ. ಗಣಾಚಾರಿ ಶೇ. 94.5 ಅಂಕಗಳೊಂದಿಗೆ ಪ್ರಥಮ, ಸರಸ್ವತಿ ಬಿ. ಕಲ್ಲೋಳಿ ಶೇ. 93 ದ್ವಿತೀಯ ಮತ್ತು     ಶಾರದಾ ನಾರಾಯಣ ಪತ್ತಾರ  92.83 ತೃತೀಯ  , ಮಲ್ಲಿಕಾರ್ಜುನ ಎಂ. ಸಸಾಲಟ್ಟಿ ಶೇ. 91.5ಗಳನ್ನು ಪಡೆದು  ನಾಲ್ಕನೇ ಮತ್ತು ರಾಮಚಂದ್ರ ಎಸ್. ನಾಯಕ  90.33 ಅಂಕ ಪಡೆದು ಐದನೇ  ಸ್ಥಾನ ಗಳಿಸಿದ್ದಾರೆ. 
ವಾಣಿಜ್ಯ ವಿಭಾಗ;
ಅಶ್ವಿನಿ ವಿ. ಅಂಗಡಿ ಮತ್ತು ರಾಹುಲ ಪಿ. ಕೋಲಾರ ಈರ್ವರೂ ತಲಾ ಶೇ. 89.5 ಅಂಕಗಳನ್ನು ಕಾಲೇಜಿನ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆಗೆ ಸಂಸ್ಥೆಯ ಆಡಳಿತ ಮತ್ತು ವಿಶ್ವಸ್ಥ ಮಂಡಳಿಯ ಚೇರಮನ್ನರು, ಕಾರ್ಯದರ್ಶಿಗಳು, ಪ್ರಾಚಾರ್ಯರು, ಬೋಧಕ ವರ್ಗದವರು ಪ್ರಶಂಸಿಶಿ, ಅಭಿನಂದಿಸಿ, ಯಶಸ್ಸು ಕೋರಿದ್ದಾರೆ.

Related posts: