RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ದಿ. 4 ಮತ್ತು 5 ರಂದು ಜರುಗಲಿರುವ ನಗರದ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವ

ಗೋಕಾಕ:ದಿ. 4 ಮತ್ತು 5 ರಂದು ಜರುಗಲಿರುವ ನಗರದ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವ 

ದಿ. 4 ಮತ್ತು 5 ರಂದು ಜರುಗಲಿರುವ ನಗರದ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವ

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ, 2 ;-

 

 
ಇದೇ ದಿ. 4 ಮತ್ತು 5 ರಂದು ನಗರದ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವವು ಅತ್ಯಂತ ವಿಜೃಂಭನೆಯಿಂದ ಜರುಗುವುದು.
ರವಿವಾರ ದಿ. 4 ರಂದು ಸಂಜೆ 5 ಗಂಟೆಗೆ ಶ್ರೀ ಸಿದ್ಧೇಶ್ವರ ಮತ್ತು ದಾನಮ್ಮಾದೇವಿ ಮಹಿಳಾ ಮಂಡಳಿ ವತಿಯಿಂದ 15 ರಿಂದ 20 ವರ್ಷದ ಹೆಣ್ಣು ಮಕ್ಕಳಿಗಾಗಿ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಚುಕ್ಕಿ ರಂಗೋಲಿ ಸ್ಪರ್ಧೆ ನಡೆಯುವುದು. ಕುಮಾರಿ ಪ್ರಣಮ್ಯಾ ದೇಶನೂರ ಇತಳಿಂದ ಪ್ರಥಮ ಬಹುಮಾನ 1501, ಕುಮಾರಿ ಐಶ್ವರ್ಯಾ ಕರೋಶಿ ಇತಳಿಂದ ದ್ವಿತೀಯ 999 ಹಾಗೂ ಖುಷಿ ಚುನಮರಿ ಇತಳಿಂದ ತೃತೀಯ ಬಹುಮಾನ 555 ರೂ, ನೀಡಲಾಗುವುದು. ಈ ಸ್ಪರ್ಧೆಯಲ್ಲಿ ಭಾಗವಹಿಸುವರು ಡಾ. ಅಶ್ವಿನಿ ಗೊಬ್ಬನ್ನವರ 9538336040 ಹಾಗೂ ಶಿವಲೀಲಾ ಅರಭಾಂವಿ 7795767608 ಇವರ ಹತ್ತಿರ ಹೆಸರು ನೋಂದಾಯಿಸಬೇಕು.
ಸೋಮವಾರ ದಿ. 5 ರಂದು ಮುಂಜಾನೆ 10 ಗಂಟೆಗೆ ಬಾಲಕರಿಗಾಗಿ 100 ಮೀ. ಓಟ, ಮೂರು ಕಾಲಿನ ಓಟ, ಸ್ಲೋ ಸೈಕಲ್, ಶಾಕ ರೇಸ್, ರಿಲೇ, ಹಾಗೂ ಬಾಲಕಿಯರಿಗಾಗಿ ಟೋಮ್ಯಾಟೋ ಸ್ಪರ್ಧೆ, ಲಿಂಬೆ ಹಣ್ಣಿನ ಸ್ಪರ್ಧೆ, ಸೂಜಿದಾರ ಸ್ಪರ್ಧೆ, ಮತ್ತು ಬಾಲಕ/ಬಾಲಕಿಯರಿಗಾಗಿ ಪೈಸೆ ಹುಡುಕಿರಿ ಸ್ಪರ್ಧೆ, ಸ್ಮರಣ ಶಕ್ತಿ ಪರೀಕ್ಷೆ, ಮ್ಯೂಜಿಕಲ್ ಚೇರ್ ಸ್ಪರ್ಧೆಗಳು ನಡೆಯಲಿದ್ದು, ಈ ಎಲ್ಲ ಸ್ಪರ್ಧೆಗಳು ಸೋಮವಾರ ಪೇಟೆಯಲ್ಲಿ ಜರುಗಲಿವೆ.
ಸಂಜೆ 6 ಗಂಟೆಗೆ ಪಾರಿತೋಷಕ ವಿತರಣೆ ಹಾಗೂ ಗುರು ಹಿರಿಯರ ನೇತೃತ್ವದಲ್ಲಿ ಶ್ರೀ ಫಲಗಳ ಲಿಲಾವು ನಡೆಯುವುದು. ಸಂಜೆ 7 ಗಂಟೆಗೆ ವಿದ್ಯುತ್ ದ್ವೀಪಗಳಿಂದ ಅಲಂಕರಿಸಲಾದ ರಥೋತ್ಸವ ಜರುಗುವುದು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬಾಲಕ/ಬಾಲಕಿಯರು ಬಸವರಾಜ ಹಿರೇಮಠ, ಪ್ರಮೋದ ಕುರಬೇಟ, ಪ್ರವೀಣ ಚುನಮರಿ, ಅಶೋಕ ತುಕ್ಕಾರ, ಕಿರಣ ಹಿರೇಮಠ, ಪ್ರದೀಪ ಕಲ್ಯಾಣಶೆಟ್ಟಿ, ಶಿವಾನಂದ ಸೊಗಲಿ ಇವರ ಹತ್ತಿರ ಹೆಸರು ನೋಂದಾಯಿಸಬೇಕು.
ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಕ್ತಾಧಿಗಳು ಪಾಲ್ಗೊಳ್ಳಬೇಕೆಂದು ಶ್ರೀ ಸಿದ್ಧೇಶ್ವರ ತರುಣ ಸಂಘ ಹಾಗೂ ಜಾತ್ರಾ ಕಮೀಟಿಯವರು ಪ್ರಕಟನೆಯಲ್ಲಿ ಕೋರಿದ್ದಾರೆ.

Related posts: