ಘಟಪ್ರಭಾ:ವಿಜೃಂಭಣೆಯಿಂದ ಜರುಗಿದ ಶ್ರೀ ಅಂಭಾ ಭವಾನಿ ಜಾತ್ರೆ
ವಿಜೃಂಭಣೆಯಿಂದ ಜರುಗಿದ ಶ್ರೀ ಅಂಭಾ ಭವಾನಿ ಜಾತ್ರೆ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜು 30 :
ಸ್ಥಳೀಯ ಗೊಂದಳಿ ಗಲ್ಲಿಯಲ್ಲಿರುವ ಶ್ರೀ ಅಂಭಾ ಭವಾನಿ ಜಾತ್ರೆಯು ಮಂಗಳವಾರದಂದು ಅತೀ ವಿಜೃಂಭಣೆಯಿಂದ ಜರುಗಿತು.
ಮುಂಜಾನೆ ಶ್ರೀ ಅಂಭಾ ಭವಾನಿಗೆ ರುದ್ರಾಭಿಷೇಕ, ಮಹಾ ಪೂಜೆ ಜರುಗಿತು. ನಂತರ ಶ್ರೀ ಅಂಭಾ ಭವಾನಿಯ ಭಾವ ಚಿತ್ರದ ಭವ್ಯ ಮೇರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನ ತಲುಪಿತು. ನಂತರ ಮಹಾಪ್ರಸಾದ ಜರುಗಿತು.
ಈ ಸಂದರ್ಭದಲ್ಲಿ ಮರಾಠಾ ಗೊಂದಳಿ ಸಮಾಜದ ಹಿರಿಯರಾದ, ಬಾಳುಮಹಾರಾಜ ಬೋಸಲೆ, ಯಲಪ್ಪ ಗುರುವ, ಶಿವಾಜಿ ಗೊಂದಳಿ, ಮಾಣಿಕ ಬೀಸೆ, ಶಿವಾಜಿ ಬೋಸಲೆ, ಸಿದ್ದೇಶ್ವರ ಬೋಸಲೆ, ಯಮನೂರ ವಾಕೋಡೆ, ರಾಜು ಗೊಂದಳಿ, ಸುರೇಶ ಗುರುವ, ಸೇರಿದಂತೆ ಅನೇಕ ಗೊಂದಳಿ ಸಮಾಜದ ಭಾಂದವರು ಇದ್ದರು.
ಯುವಕರು ಅತೀ ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡು ಜೈಶಿವಾಜಿ, ಜೈ ಭವಾನಿ ಎಂಬ ಜೈಕಾರ ಕೂಗುತ್ತಿದ್ದರು.