RNI NO. KARKAN/2006/27779|Wednesday, October 15, 2025
You are here: Home » breaking news » ಮೂಡಲಗಿ:ಧರ್ಮಟ್ಟಿ ಹಳ್ಳದ ಸೇತುವೆ ಕಾಮಗಾರಿಗೆ ಒಂದು ಕೋಟಿ ರೂ. ಮಂಜೂರು : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ:ಧರ್ಮಟ್ಟಿ ಹಳ್ಳದ ಸೇತುವೆ ಕಾಮಗಾರಿಗೆ ಒಂದು ಕೋಟಿ ರೂ. ಮಂಜೂರು : ಶಾಸಕ ಬಾಲಚಂದ್ರ ಜಾರಕಿಹೊಳಿ 

ಧರ್ಮಟ್ಟಿ ಹಳ್ಳದ ಸೇತುವೆ ಕಾಮಗಾರಿಗೆ ಒಂದು ಕೋಟಿ ರೂ. ಮಂಜೂರು : ಶಾಸಕ ಬಾಲಚಂದ್ರ ಜಾರಕಿಹೊಳಿ

 
ಅಧಿವೇಶನದಲ್ಲಿ ಈ ಬಗ್ಗೆ ಎರಡು ಬಾರಿ ಪ್ರಶ್ನೆ ಕೇಳಿ ಸಚಿವರ ಗಮನ ಸೆಳೆದಿದ್ದ ಶಾಸಕ ಬಾಲಚಂದ್ರ ಜಾರಕಿಹೊಳಿ.

 
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಜು 27 :

 

 

ಮಸಗುಪ್ಪಿ-ಮೂಡಲಗಿ ರಸ್ತೆಯ ಕಿ.ಮೀ. 4 ರಲ್ಲಿ ಧರ್ಮಟ್ಟಿ ಹಳ್ಳದ ಸೇತುವೆ ದುರಸ್ತಿ ಕಾಮಗಾರಿಗೆ ನೀರಾವರಿ ನಿಗಮದಿಂದ ಒಂದು ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.
ಶನಿವಾರ ಸಂಜೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಘಟಪ್ರಭಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಮಸಗುಪ್ಪಿ-ಮೂಡಲಗಿ ರಸ್ತೆಯ ಸೇತುವೆಯ ತಡೆಗೋಡೆ ಕುಸಿದಿರುವ ಹಿನ್ನೆಲೆಯಲ್ಲಿ ಈ ಅನುದಾನ ಮಂಜೂರಾಗಿದೆ ಎಂದು ಅವರು ಹೇಳಿದ್ದಾರೆ.
ಮಸಗುಪ್ಪಿ-ಮೂಡಲಗಿ ರಸ್ತೆಯ ಮಧ್ಯ ಧರ್ಮಟ್ಟಿ ಹಳ್ಳದ ಸೇತುವೆ ಕುಸಿದುಬಿದ್ದ ಪರಿಣಾಮ ಸಾರ್ವಜನಿಕ ಸಂಚಾರಕ್ಕೆ ಅಸ್ತವ್ಯಸ್ಥವಾಗಿತ್ತು. ಅಲ್ಲದೇ ಈ ಕಾಮಗಾರಿಯನ್ನು ತ್ವರೀತಗತಿಯಲ್ಲಿ ಕೈಗೊಂಡು ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ವಿಧಾನಸಭೆ 2 ಮತ್ತು 3ನೇ ಅಧಿವೇಶನದಲ್ಲಿ ಅಂದಿನ ಜಲಸಂಪನ್ಮೂಲ ಸಚಿವರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಒಟ್ಟು ಎರಡು ಬಾರಿ ಪ್ರಶ್ನೆ ಕೇಳುವ ಮೂಲಕ ಗಮನ ಸೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಸೇತುವೆ ದುರಸ್ತಿ ಹಾಗೂ ಸೇತುವೆಯ ಎರಡೂ ಬದಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಕಾಮಗಾರಿಯನ್ನು ಆದಷ್ಟು ಬೇಗನೆ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.

Related posts: