ಗೋಕಾಕ:ಹದಗೆಟ್ಟ ರಸ್ತೆ ದಿನ ನಿತ್ಯ ಪರದಾಡುತ್ತಿರುವ ಪ್ರಯಾಣಿಕರು

ಹದಗೆಟ್ಟ ರಸ್ತೆ ದಿನ ನಿತ್ಯ ಪರದಾಡುತ್ತಿರುವ ಪ್ರಯಾಣಿಕರು
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜು 17 :
ಘಟಪ್ರಭಾದಿಂದ ಗೋಕಾಕಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪ್ರಯಾಣಿಕರು ದಿನ ನಿತ್ಯ ಪರದಾಡುವಂತಾಗಿದೆ.
ಸಂಕೇಶ್ವರ-ಯರಗಟ್ಟಿ ರಾಜ್ಯ ಹೆದ್ದಾರಿಯಲ್ಲಿ ಘಟಪ್ರಭಾದಿಂದ ಗೋಕಾಕಕ್ಕೆ ತೆರಳುವ ರಸ್ತೆ ಹದಗೆಟ್ಟಿದ್ದು, ಅದರಲ್ಲಿ ಶಿಂದಿಕುರಬೇಟ ಕ್ರಾಸ್‍ನಿಂದ ಅರಭಾಂವಿ ಮಠದ ವರೆಗೆ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆ ತುಂಬೆಲ್ಲ ಗುಂಡಿಗಳು ನಿರ್ಮಾಣವಾಗಿವೆ. ಅರಭಾಂವಿ ಸಮೀಪದ ಪೆಟ್ರೋಲ್ ಪಂಪ್ ಹತ್ತಿರ ರಸ್ತೆ ಮಧ್ಯೆ ಸುಮಾರು ಐದು ಅಡಿ ಗಾತ್ರದ ದೊಡ್ಡ ಗುಂಡಿ ನಿರ್ಮಾಣವಾಗಿದ್ದರಿಂದ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ನರಕ ಯಾತನೆ ಅನುಭವಿಸುತ್ತಿದ್ದಾರೆ.
ಮಳೆಗಾಲ ಇರುವದರಿಂದ ಈ ತೆಗ್ಗುಗಳಲ್ಲಿ ನೀರು ತುಂಬಿ ವಾಹಣ ಸವಾರರ ಜೀವಕ್ಕೆ ಅಪಾಯ ತರುತ್ತಿರುವುದರಿಂದ ಜನ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಹವಾಮಾನ ಇಲಾಖೆ ಪ್ರಕಾರ ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇರುವದಿಂದ ಇಲ್ಲಿ ಯಾವುದೋ ದೊಡ್ಡ ಅಪ್ಘಾತ ಸಂಭವಿಸಿದರೂ ಸಹ ಅಶರ್ಯ ಪಡಬೇಕಿಲ್ಲ. ರಸ್ತೆ ದುರಸ್ತಿ ಮಾಡದೇ ಅಧಿಕಾರಿಗಳು ಯಾವುದಾದರೂ ಒಂದು ದುರ್ಘಟನೆ ಸಂಭವಿಸಬೇಕೆಂದು ಕಾಯುತ್ತಿದ್ದಾರೆಂದು ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ರಸ್ತೆ ಹಾಳಾಗಿ ಅನೇಕ ದಿನಗಳು ಕಳೆದರೂ ಸಂಬಂದಿಸಿ ಇಲಾಖೆಯ ಅಧಿಕಾರಿಗಳು ಯಾವುದೆ ಕ್ರಮ ಕೈಗೊಳ್ಳದೆ ಜಾನ ಕುರುಡರಂತೆ ವರ್ತಿಸುತ್ತಿದ್ದಾರೆ. ಕೂಡಲೇ ಸಂಬಂದಿಸಿದ ಅಧಿಕಾರಿಗಳು ಈ ರಸ್ತೆಯನ್ನು ದುರಸ್ತಿಗೊಳಬೇಕೆಂಬ ಸಾರ್ವಜನಿಕರ ಆಗ್ರಹವಾಗಿದೆ.
ಶಿಂದಿಕುರಬೇಟ ಕ್ರಾಸ್‍ನಿಂದ ಅರಭಾಂವಿ ಮಠದ ವರೆಗೆ ರಸ್ತೆ ಸಂಪರ್ಣ ಹಾಳಾಗಿದ್ದರೂ ಸಹ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಜನರು ಹೋರಾಟ ಹಾದಿ ಹಿಡಿಯುವ ಮೊದಲು ಕೆಲಸ ಮಾಡಿಸಿ.
ಅಪ್ಪಾಸಾಬ ಮುಲ್ಲಾ, ಅಧ್ಯಕ್ಷರು ಕನ್ನಡ ಸೇನೆ ಗೋಕಾಕ
ಶಿಂದಿಕುರಬೇಟ ಕ್ರಾಸ್‍ನಿಂದ ಅರಭಾಂವಿ ಮಠದ ವರೆಗೆ ರಸ್ತೆ ಕೆಟ್ಟಿರುವ ಬಗ್ಗೆ ಗಮನಕ್ಕೆ ಬಂದಿಗೆ ಸಂಬಂದಿಸಿದ ಇಂಜಿಯನಿಯರರು ಬೆರೆ ಕಡೆ ವರ್ಗವಾದ ಕಾರಣ ದುರಸ್ತಿ ಕಾರ್ಯ ಆಗಿಲ್ಲ. ಒಂದು ವಾರದಲ್ಲಿ ರಸ್ತೆ ದುರಸ್ತಿ ಕೆಲಸ ಮಾಡುತ್ತೇವೆ.
ಆರ್.ಎ.ಗಾಣಿಗೇರ, ಇ.ಇ ಲೋಕೋಪಯೋಗಿ ಇಲಾಖೆ ಗೋಕಾಕ