ಗೋಕಾಕ:ಮನೆಯೇ ಮೊದಲ ಪಾಠಶಾಲೆ , ತಾಯಿಯೇ ಮೊದಲ ಗುರು : ಸಿ. ಬಿ. ಪಾಗದ

ಮನೆಯೇ ಮೊದಲ ಪಾಠಶಾಲೆ , ತಾಯಿಯೇ ಮೊದಲ ಗುರು : ಸಿ. ಬಿ. ಪಾಗದ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು.16-
ಮನೆಯೇ ಮೊದಲ ಪಾಠಶಾಲೆಯಾಗಿದ್ದು ತಾಯಿಯೇ ಮೊದಲ ಗುರುವೆಂದು ಮಯೂರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿ. ಬಿ. ಪಾಗದ ಹೇಳಿದರು.
ಅವರು, ಮಂಗಳವಾರದಂದು ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಗುರುವಂಧನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ತಾಯಂದಿರು ತಮ್ಮ ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು. ಶಿಕ್ಷಕರು, ಪಾಲಕರು ಹಾಗೂ ಸಂಸ್ಥೆ ಪರಸ್ಪರ ಸಹಕಾರದಿಂದ ಕಾರ್ಯಪ್ರವೃತ್ತರಾಗಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸೋಣವೆಂದರು.
ನರ್ಸರಿ ವಿದ್ಯಾರ್ಥಿಗಳು ತಮ್ಮ ತಾಯಂದಿರಿಗೆ ಗುಲಾಬಿ ಹೂವು ನೀಡಿ ಅವರಿಂದ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಶಿಕ್ಷಕ ಎಮ್.ಸಿ.ವಣ್ಣೂರ, ಶಿಕ್ಷಕಿಯರಾದ ಸೌಮ್ಯ ಕರಿಗಾರ, ಸುಧಾ ಕವಚಿ, ರೋಹಿಣಿ ಜಮಾದಾರ, ರಜಿಯಾ ಭಂಡಿ, ಸೋನಾ ಸಾಮಂತ ಹಾಗೂ ತಾಯಂದಿರು ಇದ್ದರು.