RNI NO. KARKAN/2006/27779|Wednesday, January 14, 2026
You are here: Home » breaking news » ಗೋಕಾಕ:ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಬಜೆಟ್ : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ:ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಬಜೆಟ್ : ಶಾಸಕ ಬಾಲಚಂದ್ರ ಜಾರಕಿಹೊಳಿ 

ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಬಜೆಟ್ : ಶಾಸಕ ಬಾಲಚಂದ್ರ ಜಾರಕಿಹೊಳಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 5 :

 

 

ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಇದೇ ಪ್ರಥಮ ಬಾರಿಗೆ ಪೂರ್ಣಾವಧಿ ಮಹಿಳಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಜೆಟ್‍ನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸ್ವಾಗತಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ಮಧ್ಯಾಹ್ನ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಬಜೆಟ್ ಅಭಿವೃದ್ಧಿಗೆ ಪೂರಕವಾಗಿದ್ದು, ಇದೊಂದು ಜನಸ್ನೇಹಿ ಬಜೆಟ್ ಎಂದು ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸಿಸಿದ್ದಾರೆ.
ಮಧ್ಯಮ ವರ್ಗದ ಪ್ರಗತಿಗೆ ಇದು ಸಹಕಾರಿಯಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ಬಲ ಬಂದಂತಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಅಭಿವೃದ್ಧಿ ಮತ್ತು ಸಮರ್ಥರಾಗಲು ಇದು ನೆರವಾಗಲಿದೆ. ಸಣ್ಣ ವ್ಯಾಪಾರಿಗಳಿಗೆ ಭರ್ಜರಿ ಕೊಡುಗೆ ನೀಡಿದೆ. ಪ್ರಧಾನಮಂತ್ರಿ ಕರಮ್ ಯೋಗಿ ಮಾನ್‍ಧನ್ ಯೋಜನೆಯಡಿ ಒಂದೂವರೆ ಕೋಟಿ ರೂ. ಕಡಿಮೆ ಇರುವ ಚಿಲ್ಲರೆ ವ್ಯಾಪಾರಿ ಹಾಗೂ ಅಂಗಡಿ ಮಾಲೀಕರಿಗೆ ಪಿಂಚಣಿ ಸೌಲಭ್ಯ ದೊರೆಯಲಿದೆ. ಮನೆ ಖರೀದಿ ಮಾಡುವ ಮಧ್ಯಮ ವರ್ಗದ ಜನರಿಗೆ ತೆರಿಗೆ ಇಳಿಕೆ ಮಾಡಲಾಗಿದೆ. ರೂ. 7 ಲಕ್ಷವರೆಗಿನ ಸಾಲಕ್ಕೆ 15 ವರ್ಷಗಳವರೆಗೆ ತೆರಿಗೆ ವಿನಾಯತಿ ನೀಡಿರುವುದನ್ನು ಸ್ವಾಗತಿಸಿದ್ದಾರೆ.
ಉಜ್ವಲ ಯೋಜನೆಯಡಿ 35 ಕೋಟಿ ಎಲ್‍ಇಡಿ ಬಲ್ಬಗಳನ್ನು ವಿತರಿಸಲಾಗುತ್ತಿದೆ. ಶೂನ್ಯ ಬಜೆಟ್ ಕೃಷಿಯನ್ನು ಮರಳಿ ತರಬೇಕಿದ್ದು, ಇದರಿಂದ ರೈತರ ಆದಾಯ ದ್ವಿಗುಣಗೊಳಿಸಲು ಸಾಧ್ಯವಾಗುತ್ತದೆ. 2020ನೇ ಹಣಕಾಸು ವರ್ಷಕ್ಕೆ ಜಾಗತಿಕ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ 400 ಕೋಟಿ ರೂ. ಅನುದಾನ ಕೊಟ್ಟಿರುವುದು ಸ್ವಾಗತಾರ್ಹ. ಪ್ರಧಾನಮಂತ್ರಿ ಆವಾಸ ಯೋಜನೆಯಡಿ 80 ಲಕ್ಷಕ್ಕೂ ಅಧಿಕ ಮನೆಗಳ ನಿರ್ಮಾಣ, ಸಾರ್ವತ್ರಿಕ ಪ್ರಯಾಣಕ್ಕಾಗಿ ಎಟಿಎಂ ಮಾದರಿಯ ಒಂದು ದೇಶ, ಒಂದು ಕಾರ್ಡ, 5 ಲಕ್ಷ ಗ್ರಾಮಗಳು ಬಯಲು ಶೌಚ ಮುಕ್ತಗೊಂಡಿವೆ. ಮುಂದಿನ 5 ವರ್ಷದ ಅವಧಿಯಲ್ಲಿ 1,25,000 ಕಿ.ಮೀ ರಸ್ತೆ ನಿರ್ಮಾಣಕ್ಕೆ 80,250 ಕೋಟಿ ರೂ. ಮೀಸಲಿಟ್ಟಿರುವುದು. 2022 ರ ವೇಳೆ ಪ್ರತಿಯೊಬ್ಬರಿಗೂ ಸೂರು ಒದಗಿಸುವುದು. ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಪ್ರತಿ ಮನೆಗೂ ಎಲ್‍ಪಿಜಿ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡುವ ಮಹತ್ವಕಾಂಕ್ಷೆಯ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಶುಕ್ರವಾರದಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ನರೇಂದ್ರ ಮೋದಿ-2 ಸರ್ಕಾರದ ಬಜೆಟ್ ಎಲ್ಲ ವರ್ಗಗಳ ಪಾಲಿಗೆ ಆಶಾದಾಯಕವಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಮುಕ್ತ ಕಂಠದಿಂದ ಶ್ಲಾಘಿಸಿ, ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸಿದ್ದಾರೆ.

Related posts: