RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡುವಂತೆ ಆಗ್ರಹಿಸಿ ಮನವಿ

ಗೋಕಾಕ:ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡುವಂತೆ ಆಗ್ರಹಿಸಿ ಮನವಿ 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡಿ 6ನೇ ವೇತನ ತಾರತ್ಯಮವನ್ನು ನಿವಾರಿಸಬೇಕೆಂದು ಆಗ್ರಹಿಸಿ ಸಾರಿಗೆ ಸಂಸ್ಥೆಯ ನೌಕರರು ತಹಶೀಲದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡುವಂತೆ ಆಗ್ರಹಿಸಿ ಮನವಿ

 

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 26 :

 

 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡಿ 6ನೇ ವೇತನ ತಾರತ್ಯಮವನ್ನು ನಿವಾರಿಸಬೇಕೆಂದು ಆಗ್ರಹಿಸಿ ಸಾರಿಗೆ ಸಂಸ್ಥೆಯ ನೌಕರರು ತಹಶೀಲದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಬುಧವಾರದಂದು ನಗರದ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರ ಮುಖಾಂತರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಅರ್ಪಿಸಿದರು.
ಸಾರಿಗೆ ಇಲಾಖೆಯ ನಾಲ್ಕು ನಿಗಮಗಳಾದ ಕೆಎಸ್‍ಆರ್‍ಟಿಸಿ, ಬಿಎಮ್‍ಟಿಸಿ, ಎನ್‍ಡಬ್ಲೂಕೆಎಸ್‍ಆರ್‍ಟಿಸಿ, ಎನ್‍ಇಕೆಎಸ್‍ಆರ್‍ಟಿಸಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 1.25 ಲಕ್ಷ ನೌಕರರು ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯ ಒದಗಿಸುವ ಕೆಲಸವನ್ನು ಹಗಲು ರಾತ್ರಿ ಎನ್ನದೇ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಕಾರಣದಿಂದಲೇ ನಮ್ಮ ಸಾರಿಗೆ ಸಂಸ್ಥೆ ದೇಶದಲ್ಲೇ ಇತರೆ ರಾಜ್ಯಗಳ ಸಾರಿಗೆ ಸಂಸ್ಥೆಗಳಿಗಿಂತ ಉತ್ತಮವಾಗಿದೆ. ಸಂಸ್ಥೆಗೆ ಅನೇಕ ರಾಷ್ಟ್ರೀಯ ಮತ್ತು ಅಂತ್ರರಾಷ್ಟ್ರೀಯ ಪ್ರಶಸ್ತಿಗಳು ಒಲಿದು ಬಂದಿವೆ. ಆದರೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ನೋವುಗಳು ಮಾತ್ರ ಹೇಳತೀರದು. ಇತರೆ ಇಲಾಖೆ, ನಿಗಮ ಮಂಡಳಿಗಳಿಗೆ ಹೋಲಿಸಿದರೆ, ಸಾರಿಗೆ ನೌಕರರ ವೇತನ, ಪಿಂಚಣಿ, ಆರೋಗ್ಯ ಭಾಗ್ಯ ಹಾಗೂ ಇತರೆ ಎಲ್ಲಾ ಸೌಲಭ್ಯಗಳು ತೀರಾ ಅಲ್ಪವಾಗಿದ್ದು, ಇದರಿಂದ ಸಾರಿಗೆ ನೌಕರರ ಅರ್ಥಿಕ ಹಾಗೂ ಸಾಮಾಜಿಕ ಸ್ಥಿತಿ ದಿನೇ ದಿನೇ ಹದಗೆಡುತ್ತಿದೆ.
ಇದನ್ನೆಲ್ಲಾ ಮನಗಂಡ ನಾವು ಚುನಾವಣಾ ಪೂರ್ವ ರಾಮನಗರದಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿ ನಮ್ಮ ನೋವು ಈಗಿನ ಸಿ.ಎಮ್. ಕುಮಾರಸ್ವಾಮಿ ಅವರ ಮುಂದೆ ತೋಡಿಕೊಂಡು ಪರಿಹಾರ ಕೊಡಿಸಬೇಕೆಂದು ಮನವಿ ಪತ್ರ ಸಲ್ಲಿಸಿದಾಗ ಅದೇ ಸಮಾರಂಭದ ಭಾಷಣದಲ್ಲಿ ತಾವು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಅಶ್ವಾಸನೆ ನೀಡಿದ್ದರು.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಕುಮಾರಸ್ವಾಮಿ ಅವರಿಗೆ ಸಾರಿಗೆ ನೌಕರರು ಬೇಡಿಕೆ ಈಡೇರಿಕೆಗೆ ಹಲವು ಬಾರಿ ತಮ್ಮಲ್ಲಿ ಮನವಿ ಮಾಡಿಕೊಂಡೆವು. ಆದರೆ ತಾವು ಇದುವರೆಗೂ ಸಾರಿಗೆ ನೌಕರರಿಗೆ ನೀಡಿರುವ ಭರವಸೆ ಈಡೇರಿಕೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದರೆ ತಾವು ನಮ್ಮಂತೆ ಇತರರಿಗೆ ನೀಡಿರುವ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸುತ್ತಿದ್ದೀರಿ. ಆದ್ದರಿಂದ ಈ ಕೂಡಲೇ ಸಾರಿಗೆ ನೌಕರರ ಮೇಲೆ ಕೃಪೆ ತೋರಿ ತಾವು ಕೊಟ್ಟ ಮಾತಿನಂತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಿ, ಸಾರಿಗೆ ನೌಕರರಿಗೂ ಸಹಾ ಸರ್ಕಾರಿ ನೌಕರರಿಗೆ ಇರುವಂತಹ ವೇತನ, ಪಿಂಚಣಿ, ಆರೋಗ್ಯ ಭಾಗ್ಯ ಹಾಗೂ ಇತರೆ ಎಲ್ಲಾ ಸೌಲಭ್ಯಗಳನ್ನು ಸಾರಿಗೆ ನೌಕರರಿಗೂ ದೊರಕಿಸಿ ಕೊಡಬೇಕೆಂದು ತಮ್ಮಲ್ಲಿ ಸಮಸ್ತ ಸಾರಿಗೆ ನೌಕರರು ವಿನಂತಿಸಿಕೊಳ್ಳುತ್ತೇವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಲ್.ಜಿ.ಪಾಟೀಲ, ಎಸ್.ಎಸ್.ಜೋಗೋಜಿ, ಆರ್.ಆಯ್.ಕಲ್ಲೋಳಿ, ಅರುಣ ಹೊನ್ನತ್ತಿ, ಎಮ್.ಬಿ.ಕಪರಟ್ಟಿ, ವಿಠ್ಠಲ ಆನಿಗೋಳ, ಸಿ.ಬಿ.ನಿಂಬರಗಿ, ಶ್ರೀಪಾದ ಎಸ್.ಎನ್. ಭೀಮವ್ವ ಹುಳ್ಳಿ, ಸೇರಿದಂತೆ ಅನೇಕರು ಇದ್ದರು.

Related posts: