ಮೂಡಲಗಿ:ಹೊಸ ತಾಲೂಕು ಘೋಷಣೆ : ಮೂಡಲಗಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ
ಹೊಸ ತಾಲೂಕು ಘೋಷಣೆ : ಮೂಡಲಗಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ
ಮೂಡಲಗಿ ಅ 11: ಮೂಡಲಗಿ ಹೊಸ ತಾಲೂಕು ಘೋಷಣೆಯಾಗುತ್ತಿದ್ದಂತೆಯೇ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಅಪಾರ ಅಭಿಮಾನಿಗಳು ಮೂಡಲಗಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಸಂಪುಟ ಸಭೆಯಲ್ಲಿ ಮೂಡಲಗಿ ತಾಲೂಕಿಗೆ ಅನುಮೋದನೆ ಸಿಗುವ ಮುನ್ಸೂಚನೆ ಪಡೆದಿದ್ದ ಅಭಿಮಾನಿಗಳು ಪುರಸಭೆಯಿಂದ ವಿವಿಧ ವೃತ್ತಗಳಲ್ಲಿ ಬಾರೀ ಪ್ರಮಾಣದ ಪಟಾಕಿಗಳನ್ನು ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿದರು.
ಮೂಡಲಗಿ ತಾಲೂಕಾಗಲಿಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಶ್ರಮದ ಫಲ. ಅವರಿಂದಲೇ ತಾಲೂಕು ಆಗಿದೆ. ಆದರೇ ಕೆಲ ಪಟ್ಟಬದ್ಧ ಹಿತಾಸಕ್ತಿಗಳು ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಸಹಕಾರ ಸಚಿವ ರಮೇಶ ಜಾರಕಿಹೊಳಿ ಅವರಿಂದಲೇ ಮೂಡಲಗಿ ತಾಲೂಕು ಉದಯವಾಯಿತು. ಮೂಡಲಗಿ ಭಾಗದ ಸಾರ್ವಜನಿಕರಿಗೆ ಮಾತುಕೊಟ್ಟಂತೆ ಬಾಲಚಂದ್ರ ಜಾರಕಿಹೊಳಿ ಅವರು ನಡೆದುಕೊಂಡಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆಂದು ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಹೇಳಿದರು.
ಮೂಡಲಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು, ಜನಪ್ರತಿನಿಧಿಗಳು, ಸಹಕಾರಿಗಳು ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು.