ಘಟಪ್ರಭಾ:ದುರಸ್ಥಿಗಾಗಿ ಕಾಯುತ್ತಿರುವ ಬಡಿಗವಾಡ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ

ದುರಸ್ಥಿಗಾಗಿ ಕಾಯುತ್ತಿರುವ ಬಡಿಗವಾಡ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜೂ 17 :
ಸಮೀಪದ ಬಡಿಗವಾಡ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಒಂದು ತಿಂಗಳ ಕಳೆದರೂ ಅದನ್ನು ದುಸ್ತಿಗೊಳಿಸುವವರು ಯಾರು ಇಲ್ಲದಂತಾಗಿದೆ.
ಸುಮಾರು ಐದು ಸಾವಿರ ಜನಸಂಖ್ಯೆ ಇರುವ ಬಡಿಗವಾಡ ಗ್ರಾಮದಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಗ್ರಾಮ ಪಂಚಾಯತಿಯಿಂದ ಸನ್ 2016 ರಲ್ಲಿ ಗ್ರಾಮ ಪಂಚಾಯತಿಯ ಪಕ್ಕದಲ್ಲಿಯೇ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿತ್ತು.
ಈ ಘಟಕ ಗ್ರಾಮದ ಪ್ರಮುಖ ಶುದ್ಧ ಕುಡಿಯುವ ನೀರಿನ ಮೂಲವಾಗಿದೆ. ಆದರೆ ಘಟಕ ಕೆಟ್ಟು ಒಂದು ತಿಂಗಳ ಹಿಂದೆ ತಮ್ಮ ಕಾರ್ಯ ಸ್ಥಗಿತಗೊಳಿಸಿದ್ದರಿಂದ ಜನರು ಶುದ್ಧ ಕುಡಿಯುವ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
ಈ ಗ್ರಾಮಕ್ಕೆ ಸರ್ಕಾರದ ಯಾವುದೆ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಇಲ್ಲ. ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನೆ ಅವಲಂಬಿಸಿರುವ ಜನರು ಬೆಸಿಗೆಯಲ್ಲಿ ಕೊಳವೆ ಬಾವಿಗಳಿಂದ ಬರುವ ಕಲಿಷಿತ ನೀರನ್ನೆ ಕುಡಿಯೋದು ಅನಿವಾರ್ಯವಾಗಿದೆ. ಕಲುಷಿತ ನೀರು ಸೇವನೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿ ಮಕ್ಕಳು ಆನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.
ನೀರಿನ ಘಟಕವನ್ನು ದುರಸ್ತಿಗೊಳಿಸಬೇಕಿದ್ದ ಗ್ರಾಮ ಪಂಚಾಯತಿ ಅಧಿಕಾರಿಳು ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸಬೇಕೆಂದು ಬಡಿಗವಾಡ ಗ್ರಾಮದ ಗ್ರಾಮಸ್ಥರ ಆಗ್ರಹವಾಗಿದೆ.
ಒಂದು ತಿಂಗಳಿಂದ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಒಂದ ಬಿದ್ದಿದೆ. ಈ ಬಗ್ಗೆ ಅನೇಕ ಬಾರಿ ಗ್ರಾ.ಪಂ ಅಧಿಕಾರಿಗಳನ್ನು ತಿಳಿಸಿದರೂ ಕೂಡಾ ಪ್ರಯೋಜನವಾಗಿಲ್ಲಾ. ಜನರು ಕಲುಷಿತ ನೀರು ಕುಡಿಯುದು ಅನಿವಾರ್ಯವಾಗಿದೆ. ಮೇಲಾಧಿಕಾರಿಗಳು ಕೂಡಲೆ ಕ್ರಮ ಕೈಗೊಳ್ಳಬೇಕು.
ಮಲ್ಲಿಕಾರ್ಜುನ ಚೌಕಶಿ, ಗ್ರಾಮಸ್ಥರು