RNI NO. KARKAN/2006/27779|Thursday, October 16, 2025
You are here: Home » breaking news » ಘಟಪ್ರಭಾ:ಕಸ ಸಂಗ್ರಹಿಸುವ ವಾಹನಕ್ಕೆ ಚಾಲನೆ

ಘಟಪ್ರಭಾ:ಕಸ ಸಂಗ್ರಹಿಸುವ ವಾಹನಕ್ಕೆ ಚಾಲನೆ 

ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಮನೆಗಳಿಂದ ಕಸ ಸಂಗ್ರಹಿಸುವ ಪ್ರಾರಂಭಿಸಲಾದ ವಾಹನ.

ಕಸ ಸಂಗ್ರಹಿಸುವ ವಾಹನಕ್ಕೆ ಚಾಲನೆ

 

 

ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜೂ 16 :

 

 
ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಚ ಭಾರತ ಮೀಷನ್ ಅಡಿಯಲ್ಲಿ ಮನೆಗಳಿಂದ ಕಸ ಸಂಗ್ರಹಿಸುವ ವಾಹನಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಇತ್ತೀಚಿಗೆ ಪಟ್ಟಣದ ಗಾಯಕವಾಡ ಓಣಿ, ಕಬ್ಬೂರ ಓಣಿ ಹಾಗೂ ಕೊರವರ ಓಣಿಯಲ್ಲಿ ಹಲವರಿಗೆ ಜನರಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡ ಬೆನ್ನಲೆ ಎಚ್ಚೆತ್ತಕೊಂಡ ಪಟ್ಟಣ ಪಂಚಾಯತಿ ಅಧಿಕಾರಿಗಳು ಪಟ್ಟಣದಲ್ಲಿ ಫಾಗಿಂಗ್, ಡಿ.ಟಿ.ಟಿ ಪೌಡರ್ ಸಿಂಪದನೆ, ಚರಂಡಿಗಳನ್ನು ಸ್ವಚ್ಚಗೊಳಿಸು ಸೇರಿದಂತೆ ಸ್ವಚ್ಚತಾ ಕೆಲಸಗಳನ್ನು ಚುರುಕುಗೊಳಿಸಿದ್ದಾರೆ. ಅಲ್ಲದೇ ಆಶಾ ಕಾರ್ಯಕರ್ತರು ಹಾಗೂ ಸರ್ಕಾರಿ ಅರೋಗ್ಯ ಕೇಂದ್ರದ ಹಾಗೂ ಅಧಿಕಾರಿ ಡಾ. ಪ್ರವೀನ ಕರಗಾಂವಿ ಅವರು ಮೇಲಿಂದ ಮೇಲೆ ಮನೆ ಮನೆಗೆ ಬೇಟ್ಟಿ ನೀಡಿ ರೋಗಿಗಳನ್ನು ವಿಚಾರಿಸಿ ಮುಂಜಾಗೃತಾ ಕ್ರಮಗಳನ್ನು ಕೈಕೊಳ್ಳುವಂತೆ ತಿಳಿಸುತ್ತಿದ್ದಾರೆ.
ಆದರೆ ಜನರು ಕಸವನ್ನು ರಸ್ತೆಗಳ ಮೇಲೆ ಎಸೆಯುತ್ತಿರುವುದರಿಂದ ಮತ್ತೆ ಪಟ್ಟಣದಲ್ಲಿ ಅಸ್ವಛತೆ ಕಾಣಿಸಿಕೊಳ್ಳುತ್ತಿರುವುರಿಂದ ಪ.ಪಂ,ಯಿಂದ ನೇರವಾಗಿ ಮನೆಗಳಿಂದ ಕಸ ಸಂಗ್ರಹಿಸುವ ವಾಹವನ್ನು ಪ್ರಾರಂಭಿಸಲಾಗಿದೆ. ಜನರು ಕಸವನ್ನು ರಸ್ತೆಯಲ್ಲಿ ಎಸೆಯುವ ಬದಲು ಮನೆಯಲ್ಲಿ ಸಂಗ್ರಹಿಸಿ ವಾಹನದಲ್ಲಿ ಹಾಕಬೇಕೆಂದು ಪ.ಪಂ ಮುಖ್ಯಾಧಿಕಾರಿ ಎಸ್.ಟಿ.ಆಲೂರ ತಿಳಿಸಿದರು.

Related posts: