ಗೋಕಾಕ:ಮಣ್ಣು ಕುಸಿದು ಬಿದ್ದು ಓರ್ವನ ಸಾವು : ಮಕ್ಕಳಗೇರಿ ಗ್ರಾಮದಲ್ಲಿ ಘಟನೆ
ಸಂಗ್ರಹ ಚಿತ್ರ
ಮಣ್ಣು ಕುಸಿದು ಬಿದ್ದು ಓರ್ವನ ಸಾವು : ಮಕ್ಕಳಗೇರಿ ಗ್ರಾಮದಲ್ಲಿ ಘಟನೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ.13-
ಭಾಂವಿಯ ಹೂಳು ತೆಗೆಯುತ್ತಿರುವಾಗ ಮಣ್ಣು ಕುಸಿದು ಬಿದ್ದ ಪರಿಣಾಮವಾಗಿ ಓರ್ವನು ಸಾವನ್ನಪ್ಪಿದ ಘಟನೆ ತಾಲೂಕಿನ ಮಕ್ಕಳಗೇರಿ ಗ್ರಾಮದಲ್ಲಿ ಬುಧವಾರದಂದು ಸಂಜೆ ಜರುಗಿದೆ.
ಸಿದ್ದಪ್ಪ ವಿಠ್ಠಲ ಸುಣಗಾರ ಎಂಬವರ ತೋಟದ ಭಾಂವಿಯ ಹೂಳು ತೆಗೆಯುವಾಗ ಪಕ್ಕದ ಮಣ್ಣು ಕುಸಿದು ಬಿದ್ದ ಪರಿಣಾಮವಾಗಿ ಮಕ್ಕಳಗೇರಿ ಗ್ರಾಮದ ಹಣಮಂತ ಅಶಪ್ಪ ತೋಳಿನ (45) ಎಂಬವನು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾನೆ.
ಈ ಬಗ್ಗೆ ಮೃತನ ಪುತ್ರ ಗೋಕಾಕ ಗ್ರಾಮೀಣ ಪೋಲೀಸ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
