RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಪೊಲೀಸರ ಧಾಳಿ : ಜೂಜಾಡುತ್ತಿದ್ದ ನಾಲ್ವರ ಬಂಧನ

ಗೋಕಾಕ:ಪೊಲೀಸರ ಧಾಳಿ : ಜೂಜಾಡುತ್ತಿದ್ದ ನಾಲ್ವರ ಬಂಧನ 

ಪೊಲೀಸರ ಧಾಳಿ : ಜೂಜಾಡುತ್ತಿದ್ದ ನಾಲ್ವರ ಬಂಧನ

 

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ.13-

 

 

 

ಸರಕಾರಿ ಜಾಗೆಯಲ್ಲಿ ಜೂಜಾಡುತ್ತಿದ್ದ ಸ್ಥಳದ ಮೇಲೆ ಪೋಲೀಸರು ಧಾಳಿ ನಡೆಸಿ ನಾಲ್ವರನ್ನು ಬಂಧಿಸಿದ ಹಾಗೂ ಮೂವರು ಓಡಿ ಹೋದ ಘಟನೆ ತಾಲೂಕಿನ ಮಮದಾಪೂರ ಕ್ರಾಸ್‍ದಲ್ಲಿ ಬುಧವಾರದಂದು ಸಂಜೆ 6 ಗಂಟೆ ಸುಮಾರಿಗೆ ಜರುಗಿದೆ.
ಗೋಕಾಕ ಸಿಪಿಐ ಶ್ರೀಮತ ಇಲ್ಯಾಳ, ಡಿಸಿಐಬಿ ಸ್ಕ್ವಾಡ್‍ದ ಸಿಪಿಐ ಶಂಕರಗೌಡ ಪಾಟೀಲ, ಬೆಳಗಾವಿ ಡಿಎಸ್‍ಬಿಯ ಪಿಎಸ್‍ಐ ಸುನೀಲ ಪಾಟೀಲ, ಡಿಸಿಬಿ ಪಿಎಸ್‍ಐ ಎಸ್.ಎನ್.ಕನಮೇಶ್ವರ ಹಾಗೂ ಗೋಕಾಕ ಮತ್ತು ಬೆಳಗಾವಿ ಸಿಬ್ಬಂದಿ ಜೊತೆ ಧಾಳಿ ನಡೆಸಿ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ 1) ಬಸವರಾಜ ಉದ್ದಪ್ಪ ಹಳ್ಳೂರ (ಮಾಲದಿನ್ನಿ), 2) ಭೀಮಶಿ ರಂಗಪ್ಪ ಪೂಜೇರಿ (ಅಜ್ಜನಕಟ್ಟಿ), 3) ಅರುಣ ಕೆಂಪಣ್ಣ ಘೋರ್ಪಡೆ (ಕಲ್ಲೋಳಿ), 4) ಪ್ರಕಾಶ ಕಲ್ಲಪ್ಪ ಸಣ್ಣಗೌಡರ (ಆಲದಕಟ್ಟಿ ತಾ. ಸವದತ್ತಿ) ಬಂಧಿಸಿ ಅವರಿಂದ 10,700ರೂ. ನಗದು, 3 ಮೊಬೈಲ್, 5 ಮೋಟರ ಸೈಕಲ್ ಮತ್ತು 2 ಕಾರ್ ವಶಪಡಿಸಿಕೊಂಡಿದ್ದು ಬಂಧಿತ ನಾಲ್ವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಧಾಳಿ ಸಮಯದಲ್ಲಿ ಬೆಳಗಾವಿ ಮಹಾಂತೇಶ ನಗರದ ವೀರೇಶ ಗುಡಗನಟ್ಟಿ, ಗೋಕಾಕದ ಮಹಾದೇವ ಹಣಮಂತ ದ್ಯಾನ್ಣವರ ಹಾಗೂ ಬಾಳು ಬೋರಣ್ಣವರ ಓಡಿ ಹೋಗಿದ್ದಾರೆ.
ಈ ಬಗ್ಗೆ ಗೋಕಾಕ ಗ್ರಾಮೀಣ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: