RNI NO. KARKAN/2006/27779|Friday, March 29, 2024
You are here: Home » breaking news » ಗೋಕಾಕ:ಕರ್ನಾಟಕ ಕಂಡ ಮೇರು ಸಾಹಿತಿ ಗಿರೀಶ ಕರ್ನಾಡ : ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ

ಗೋಕಾಕ:ಕರ್ನಾಟಕ ಕಂಡ ಮೇರು ಸಾಹಿತಿ ಗಿರೀಶ ಕರ್ನಾಡ : ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ 

ಕರ್ನಾಟಕ ಕಂಡ ಮೇರು ಸಾಹಿತಿ ಗಿರೀಶ ಕರ್ನಾಡ : ಕರವೇ ಅಧ್ಯಕ್ಷ  ಬವರಾಜ ಖಾನಪ್ಪನವರ

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 10 :

 

 

ಕರ್ನಾಟಕ ಕಂಡ ಮೇರು ಸಾಹಿತಿ , ಕನ್ನಡ ಭಾಷೆಗೆ 6 ನೇ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ನಾಟಕಕಾರ ಗಿರೀಶ ಕಾರ್ನಾಡ್ ಅಗಲಿಕೆಯಿಂದ ಸಾಹಿತ್ಯ ಲೋಕ ಇಂದು ಬಡವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು
ಕರವೇ ತಾಲೂಕ ಘಟಕ ನಗರದ ಗುರುವಾಪೇಠದ ಬೂತಿಕೂಟದಲ್ಲಿ ಹಮ್ಮಿಕೊಂಡಿದ್ದ ಶೃದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು . ಕನ್ನಡ ಸಾಹಿತ್ಯದಲ್ಲಿ ನಾಟಕ ಕ್ಷೇತ್ರದ ಸಾಹಿತಿ ಎಂದು ಕರೆಯಲ್ಪಡುವ ಗಿರೀಶ ಕಾರ್ನಾಡ್, ಕನ್ನಡದಲ್ಲಿ ನಾಟಕ ರಚಿಸುತ್ತಾ ಇತರ ಭಾರತೀಯ ಭಾಷೆಗಳೊಡನೆ ಸಂಪರ್ಕವನ್ನಿಟ್ಟುಕೊಂಡು ನಟರಾಗಿ, ನಿರ್ದೇಶಕರಾಗಿ, ಸಾಂಸ್ಕ್ರತಿಕ ವಕ್ತಾರರಾಗಿ ಕೆಲಸ ಮಾಡಿದ್ದಾರೆ. ಯಯಾತಿ, ತುಘಲಕ್, ಹಯವದನ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ಟಿಪ್ಪುವಿನ ಕನಸುಗಳು ಮುಂತಾದವು ಕಾರ್ನಾಡರ ಪ್ರಮುಖ ನಾಟಕ ಕೃತಿಗಳು. ಅಲ್ಲದೆ ಹಲವಾರು ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿರುವ ಕಾರ್ನಾಡ್ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರೂ ಹೌದು. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿ, ಕಾನೂರು ಹೆಗ್ಗಡತಿ, ಉತ್ಸವ್ ಮುಂತಾದ ಸಿನಿಮಾಗಳು; ಸೂಫಿ ಪಂಥ, ಕನಕ ಪುರಂದರ ಸಾಕ್ಷಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಸಾಹಿತ್ಯ ಕ್ಷೇತ್ರದ ಸಾಧನೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕಾರ್ನಾಡರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಇವರ ಸಾವು ಕರ್ನಾಟಕ ಸಾಹಿತ್ಯ ಲೋಕಕ್ಕೆ ತುಂಬಲಾರದ ನೋವುಂಟುಮಾಡಿದೆ ಇವರ ಆತ್ಮಹತ್ಯೆ ಶಾಂತಿ ದೊರೆಯಲೆಂದು ಖಾನಪ್ಪನವರ ಪ್ರಾರ್ಥಿಸಿದರು

ಈ ಸಂದರ್ಭದಲ್ಲಿ ಕೃಷ್ಣಾ ಖಾನಪ್ಪನವರ , ಸಾದಿಕ ಹಲ್ಯಾಳ , ಮುಗುಟ ಪೈಲವಾನ , ರಫೀಕ್ ಗುಳ್ಳೆದಗುಡ್ಡ , ಇರ್ಶಾದ ನಿರ್ಲಿ , ರಮೇಶ ಬಿ.ಕೆ , ರಾಜೆಂದ್ರ ಕೆಂಚನಗುಡ , ಭೀಮಾಶಂಕರ ಪುಟಾನಿ , ಅರುಣ ಪಂಡಿತ್ , ಮಾಂತಯ್ಯ ಹಿರೇಮಠ , ಆನಂದ ಬಿ.ಕೆ , ಪರಸರಾಮ ಸುಣಗಾರ , ವೆಂಕಟೇಶ ಮುಳ್ಳಗುಂದ , ದತ್ತು ಕೋಲಕಾರ ರಹೇಮಾನ ಮೋಕಾಶಿ , ಸೇರಿದಂತೆ ಇತರರು ಉಪಸ್ಥಿತರಿದ್ದರು

Related posts: