RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಮೇಘಾ ಕಂಬೈನ್ಸ್‍ರವರ ಪ್ರಪ್ರಥಮ ಕನ್ನಡ ಚಲನಚಿತ್ರ “ಲಕ್ಷ್ಯ” ಚಿತ್ರೀಕರಣಕ್ಕೆ ಚಾಲನೆ

ಗೋಕಾಕ:ಮೇಘಾ ಕಂಬೈನ್ಸ್‍ರವರ ಪ್ರಪ್ರಥಮ ಕನ್ನಡ ಚಲನಚಿತ್ರ “ಲಕ್ಷ್ಯ” ಚಿತ್ರೀಕರಣಕ್ಕೆ ಚಾಲನೆ 

ಮೇಘಾ ಕಂಬೈನ್ಸ್‍ರವರ ಪ್ರಪ್ರಥಮ ಕನ್ನಡ ಚಲನಚಿತ್ರ “ಲಕ್ಷ್ಯ” ಚಿತ್ರೀಕರಣಕ್ಕೆ ಚಾಲನೆ

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 24 :

 

ನಗರದ ಶ್ರೀ ಸಾಯಿ ಮಂದಿರದಲ್ಲಿ ಮೇಘಾ ಕಂಬೈನ್ಸ್‍ರವರ ಪ್ರಪ್ರಥಮ ಕನ್ನಡ ಚಲನಚಿತ್ರ “ಲಕ್ಷ್ಯ” ಚಿತ್ರೀಕರಣಕ್ಕೆ ಗುರುವಾರದಂದು ಇಲ್ಲಿಯ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಘೋಡಗೇರಿ ಮಲಯ್ಯ ಮಹಾಸ್ವಾಮಿಗಳು ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದರು.
ನಗರದ ಗಣ್ಯ ವರ್ತಕರಾದ ಮಹಾಂತೇಶ ತಾವಂಶಿ ಅವರ ಮೇಘಾ ಪ್ರೋಡಕ್ಷನ್ ಬ್ಯಾನರ್ ಅಡಿ ಈ ಚಲನಚಿತ್ರವನ್ನು ನಿರ್ಮಿಸುತ್ತಿದ್ದು, ಉತ್ತರ ಕರ್ನಾಟಕದ ಪ್ರತಿಭೆ ರವಿ ಸಾಸನೂರ ಅವರ ಕಥೆ ಹಾಗೂ ನಿರ್ದೇಶನದಲ್ಲಿ ನಾಯಕ ನಟರಾಗಿ ಸತ್ಯನಾಥ, ಸಂತೋಷರಾಜ, ನಿತಿನ, ನಾಯಕಿಯರಾಗಿ ಶರ್ಮಿಳಾ ಹಾಗೂ ಯಶಸ್ವಿನಿ ನಟಿಸುತ್ತಿದ್ದು, ವಿಶೇಷ ಪಾತ್ರದಲ್ಲಿ ಖ್ಯಾತ ನಟ ರಾಮಕೃಷ್ಣ ಹಾಗೂ ಮಾಲತಿಶ್ರೀ ಮೈಸೂರ, ಶಿವುಕುಮಾರ ಆರಾಧ್ಯ, ಸ್ಥಳೀಯ ಕಲಾವಿದರಾದ ಯಲ್ಲೇಶಕುಮಾರ, ಪ್ರಕಾಶ, ಶಿವು ಚಿಮ್ಮಡ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.
ನಿರ್ಮಾಪಕ ಮಹಾಂತೇಶ ತಾವಂಶಿ ಅವರು ಮಾತನಾಡಿ ಈ ಚಿತ್ರದ ಚಿತ್ರೀಕರಣ ನಗರದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಒಂದು ತಿಂಗಳ ಕಾಲ ನಡೆಯಲಿದ್ದು, ಉತ್ತರ ಕರ್ನಾಟಕ ಪ್ರತಿಭೆಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಚಿತ್ರದಲ್ಲಿ ಒಟ್ಟು 5 ಹಾಡುಗಳು ಇದ್ದು, ಪ್ರಸ್ತುತ ವಿದ್ಯಾಮಾನದಲ್ಲಿ ನಡೆಯುವ ಘಟನೆಗಳ ಆಧಾರಿತ ಚಿತ್ರವಾಗಿದ್ದು, ಮಾನವನ ಜೀವನದಲ್ಲಿ ಹಣ ಎಷ್ಟು ಮುಖ್ಯ, ಹಣ ಇದ್ದವರ ಹಾಗೂ ಇಲ್ಲದವರ ಸಮಸ್ಯೆಗಳನ್ನು ವಿವರಿಸುತ್ತಾ, ಸಾಮಾಜಿಕ ಕಳಕಳಿಯ ಸಂದೇಶವನ್ನು ಹೊಂದಿದೆ. ಈ ಚಿತ್ರ ಕೌಟುಂಬಿಕ ಚಿತ್ರವಾಗಿದ್ದು ಶಿವಸರ್ವಂ ಅವರ ಸಂಕಲನ, ಆನಂದ ಚಂದ್ರಸಾಭು ಅವರ ಛಾಯಾಗ್ರಹಣ, ಜುವೀನ್ ಅವರ ಸಂಗೀತ ಚಿತ್ರಕ್ಕೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಶೋಕ ಪೂಜಾರಿ, ಶಾಮಾನಂದ ಪೂಜೇರಿ, ಚಂದ್ರಶೇಖರ ಅಕ್ಕಿ, ಮಹಾಲಿಂಗ ಮಂಗಿ, ಮೇಘಾ ತಾವಂಶಿ, ವಿ.ಎಚ್.ಗಡೆನ್ನವರ, ಪ್ರಕಾಶ ಕೋಲಾರ, ಅರವಿಂದ ಕೋಲಾರ, ಮಹಾದೇವಪ್ಪ ತಾವಂಶಿ, ವಿಜಯ ಜಾಧವ, ಜಯಾನಂದ ಮಾದರ, ಎಸ್.ಎಮ್.ಹತ್ತಿಕಟಗಿ, ಮುರಗೇಶ ಹುಕ್ಕೇರಿ, ಭಾರತಿ ಮದಭಾಂವಿ, ರಜನಿ ಜೀರಗ್ಯಾಳ, ವೈಶಾಲಿ ಭರಭರಿ, ಶೈಲಾ ಕೊಕ್ಕರಿ, ಸಂಗೀತಾ ಬನ್ನೂರ, ಶಿವಾನಂದ ತಾವಂಶಿ, ಮಹಾಂತೇಶ ಬಿದರಿ ಸೇರಿದಂತೆ ಅನೇಕರು ಇದ್ದರು.

Related posts: