ಗೋಕಾಕ:ಬಸವಜ್ಯೋತಿ ಐ ಟಿ ಐ ವಿದ್ಯಾಲಯದಲ್ಲಿ ಮಹಾತ್ಮಾ ಪುಲೆ ಅವರ ಜನ್ಮ ಜಯಂತಿ ಆಚರಣೆ
ಬಸವಜ್ಯೋತಿ ಐ ಟಿ ಐ ವಿದ್ಯಾಲಯದಲ್ಲಿ ಮಹಾತ್ಮಾ ಪುಲೆ ಅವರ ಜನ್ಮ ಜಯಂತಿ ಆಚರಣೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 11:
ಸ್ತ್ರೀ ಸಮೂಹವು ಶೋಷಣೆ, ದಬ್ಬಾಳಿಕೆ ಅಸಮಾನತೆಗಳೆಂಬ ಸಂಕೋಲೆಗಳಿಂದ ಶಕ್ತರಾಗಲು , ಸಬಲೀಕರಣಗೊಳ್ಳಲು ಮೌಲಿಕ ಶಿಕ್ಷಣವು ರಹದಾರಿಯಾಗಿರುತ್ತದೆ ಎಂದು ಅಬುಲ್ ಕಲಾಂ ಆಜಾದ್ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ಉಪನ್ಯಾಸಕರಾದ ಎಸ್.ಎಂ.ಪೀರಜಾದೆ ಅಭಿಪ್ರಾಯ ಪಟ್ಟರು.
ಗುರುವಾರದಂದು ನಗರದ ಸತ್ಯವೇದ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ನ ಬಸವಜ್ಯೋತಿ ಐ ಟಿ ಐ ವಿದ್ಯಾಲಯದಲ್ಲಿ ಆಯೋಜಿಸಲಾದ ಮಹಾತ್ಮಾ ಪುಲೆ ಅವರ ಜನ್ಮ ಜಯಂತಿ ಆಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು .
ಕಟ್ಟುನಿಟ್ಟಾದ ಸಂಪ್ರದಾಯಗಳನ್ನು, ಮೂಡ ನಂಬಿಕೆಗಳನ್ನೂ ಧಿಕ್ಕರಿಸಿ ಜ್ಯೋತಿಬಾ ಪುಲೆ ಹಾಗೂ ಅವರ ಧರ್ಮಪತ್ನಿ ಸಾವಿತ್ರಿಬಾ ಪುಲೆ ಅವರು ಅಕ್ಷರ ಕ್ರಾಂತಿ ಆಂದೋಲನದ ಮೂಲಕ ದಮನಿತ ಮಹಿಳಾ ಸಮುದಾಯಕ್ಕೆ ದಾರಿ ದೀಪವಾಗಿದ್ದರು ಅವರ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿ ಕೋಳ್ಳಬೇಕಾಗಿದೆ ಎಂದು ಹೇಳಿದರು
ಸಮಾರಂಭದ ಅಧ್ಯಕ್ಷತೆಯನ್ನು ಅಶೋಕ ಲಗ್ಮಪ್ಪಗೋಳ ವಹಿಸಿದ್ದರು
ವೇದಿಕೆಯ ಮೇಲೆ ಪ್ರಾಚಾರ್ಯರಾದ ಬಿ ಎಲ್ ಸಾಧಿಮಠ, ಹಿರಿಯ ತರಬೇತುದಾರರಾದ ಎಂ ಬಿ ಕಂಬಾರ, ಸಿ ಎಸ್ ಪಾಟೀಲ, ಪ್ರಸನ್ನ ಡವಗಿ, ಐ ಬಿ ಅತ್ತಾರ, ಶ್ರೀಮತಿ ಎಸ್ ಕೆ ಸೌದಾಗಾರ, ಸಂಪಥ ಗಂಡವ್ವಗೋಳ, ಎಂ ಎಲ್ ಕಾಶಪ್ಪಗೋಳ, ಸಂತೋಷ ಹಾದಿಮನಿ ಉಪಸ್ಥಿತರಿದ್ದರು. ಎಂ ಬಿ ಕಂಬಾರ ಸ್ವಾಗತಿಸಿದರು, ಮಹಾಂತೇಶ ಎಡವನ್ನವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು