RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ಸುದ್ದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹರಿಹಾಯ್ದ ಮಾಜಿ ಸಚಿವ ರಮೇಶ

ಗೋಕಾಕ:ಸುದ್ದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹರಿಹಾಯ್ದ ಮಾಜಿ ಸಚಿವ ರಮೇಶ 

ಸುದ್ದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹರಿಹಾಯ್ದ ಮಾಜಿ ಸಚಿವ ರಮೇಶ

ಗೋಕಾಕ ಜ 3 : ಸಂಪುಟ ವಿಸ್ತರಣೆಯಾದಾಗಿನಿಂದ ಕಣ್ಮರೆಯಾಗಿದ್ದ ಮಾಜಿ ಸಚಿವ ರಮೇಶ ಜಾರಕಿಹೊಳಿ ಇಂದು ನಗರದಲ್ಲಿ ಪ್ರತ್ಯೇಕವಾದರು. ಈ ವೇಳೆ ಸುದ್ದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳು ಮೇಲೆ ಕಿಡಿಕಾರಿದ್ದಾರೆ
ಗೋಕಾಕ್​ ನಗರದ ತಮ್ಮ ನಿವಾಸದಲ್ಲಿ ಪ್ರತ್ಯಕ್ಷರಾದ ರಮೇಶ್​ ಜಾರಕಿಹೊಳಿ, ಗೋಕಾಕ್ ಮಿಲ್​ನಲ್ಲಿರುವ ಬ್ಯಾಡ್ಮಿಂಟನ್ ಕೋರ್ಟ್​ನಲ್ಲಿ ಅರ್ಧ ಗಂಟೆ ಬ್ಯಾಡ್ಮಿಂಟನ್ ‌ಆಡಿದರು. ಈ ವೇಳೆ ಒಳಗೆ ಮಾಧ್ಯಮದವರನ್ನು ಬಿಡದಂತೆ ಸೆಕ್ಯೂರಿಟಿಗೆ ಸೂಚಿಸಿಯೇ ಒಳಗೆ ಹೋಗಿದ್ದರು ಎನ್ನಲಾಗಿದೆ. 
ಬಳಿಕ ತಮ್ಮ ಸ್ವಂತ ಕಾರಿನಲ್ಲಿ ನಿವಾಸಕ್ಕೆ ಬಂದ ರಮೇಶ್​ ಜಾರಕಿಹೊಳಿ ಅವರನ್ನು ‌ಮಾತನಾಡಿಸಲು ಹೋದ ಮಾಧ್ಯಮದವರನ್ನು ಕಂಡು‌ ಆಕ್ರೋಶ ಹೊರ ಹಾಕಿದ್ದಾರೆ. 

Related posts: