RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಅರಭಾವಿ ನಾಡಕಛೇರಿಯಿಂದ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸತ್ಕಾರ

ಗೋಕಾಕ:ಅರಭಾವಿ ನಾಡಕಛೇರಿಯಿಂದ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸತ್ಕಾರ 

ಅರಭಾವಿ ನಾಡಕಛೇರಿಯಿಂದ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸತ್ಕಾರ

ಗೋಕಾಕ ನ 6 : ನಾಡಕಚೇರಿಯಲ್ಲಿ ದೊರೆಯುವ ಎಲ್ಲ ಸವಲತ್ತುಗಳನ್ನು ಸಾಮಾನ್ಯ ಜನರಿಗೆ ದೊರಕಿಸಿ ಕೊಡುವ ಕಾರ್ಯ ಅಧಿಕಾರಿಗಳು ಮಾಡಬೇಕೆಂದು ಯಮಕನಮರಡಿ ಶಾಸಕರು ಹಾಗೂ ಮಾಜಿ ಸಚಿವರಾದ ಸತೀಶ ಜಾರಕಿಹೊಳಿ ಹೇಳಿದರು.
ಅವರು ಸೋಮವಾರದಂದು ತಾಲೂಕಿನ ಅರಭಾವಿ ನಾಡಕಛೇರಿ ಹತ್ತಿರ ವಿರುವ ಸರ್ಕಾರಿ ಕೈಗಾರಿಕಾ ತರಬೇತಿ (ಜಿಟಿಟಿಸಿ) ಕಟ್ಟಡ ಪರಿಶೀಲನೆ ನಡೆಸಿ ನಂತರ ನಾಡಕಛೇರಿ ಕಾರ್ಯಾಲಯಕ್ಕೆ ಆಕಸ್ಮಿಕವಾಗಿ ಭೇಟಿ ನೀಡಿ ಸತ್ಕಾರ ಸ್ವೀಕರಿಸಿ ಮಾತನಾಡಿದರು.


ನಾಡಕಚೇರಿಯ ಕೆಲ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಿ ಆದಷ್ಟು ಬೇಗನೆ ಜನಸಾಮಾನ್ಯರಿಗೆ ತಲುಪಿಸುವಂತಹ ಕಾರ್ಯ ಅಧಿಕಾರಿಗಳು ಮಾಡಬೇಕು.ಸರ್ಕಾರದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಉಪತಹಶೀಲ್ದಾರ ಎಲ್.ಎಚ್.ಭೋವಿ, ಕಂದಾಯ ನಿರೀಕ್ಷಕ ಆರ್.ಐ.ನೇಸರಗಿ, ಗ್ರಾಮ ಲೇಕ್ಕಾಧಿಕಾರಿ ಎಸ್.ಕೆ.ತುಪ್ಪದ, ಜಿ.ಪಂ ಮಾಜಿ ಸದಸ್ಯ ಶಂಕರ ಬಿಲಕುಂದಿ, ಆರ್.ಟಿ.ಬಂಡಿವಡ್ಡರ, ನಾಡಕಚೇರಿಯ ಸಿಬ್ಬಂದಿಗಳಾದ ನವೀನ ಕೌಜಲಗಿ ಸೇರಿದಂತೆ ಇತರರು ಇದ್ದರು.

Related posts: