RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ನದಿಗೆ ಬಿದ್ದು ವ್ಯಕ್ತಿಯ ಸಾವು : ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಘಟನೆ

ಗೋಕಾಕ:ನದಿಗೆ ಬಿದ್ದು ವ್ಯಕ್ತಿಯ ಸಾವು : ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಘಟನೆ 

ನದಿಗೆ ಬಿದ್ದು ವ್ಯಕ್ತಿಯ ಸಾವು : ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಘಟನೆ
ಗೋಕಾಕ ಸೆ 7 : ನದಿ ದಾಟಲು ಹೋಗಿ ವ್ಯಕ್ತಿಯೋರ್ವ ನದಿಗೆ ಬಿದ್ದು ಸಾವನ್ನಪ್ಪಿದ್ದ ಘಟನೆ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಬುಧವಾರದಂದು ನಡೆದಿದೆ

ಸಿದ್ದಪ್ಪ ಯಲ್ಲಪ್ಪ ಹೊಸೂರ (65) ಸಾವನ್ನಪಿದ ವ್ಯಕ್ತಿ ಎಂದು ಗುರುತಿಸಲಾಗಿದ್ದು , ಸಾಲಬಾದೆಯಿಂದ ಬೇಸತ್ತು ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗ್ರಾಮಸ್ಥರು ಹೇಳುತ್ತಿದ್ದು , ತನಿಖೆಯ ನಂತರವಷ್ಟೇ ಸ್ವಷ್ಟ ಚಿತ್ರಣ ತಿಳಿದು ಬರಲಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿಗಳ ಸತತ 24 ಘಂಟೆಗೂ ಹೆಚ್ಚಿನ ಕಾರ್ಯಾಚರಣೆ ನಡೆಯಿಸಿ ಶವ ಪತ್ತೆ ಹಚ್ಚುವಲ್ಲಿ ಯಶಸ್ಸು ಸಾಧಿಸಿದ್ದಾರೆ

ಈ ಪ್ರಕರಣದ ಕುರಿತು ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related posts: