RNI NO. KARKAN/2006/27779|Monday, September 28, 2026
You are here: Home » breaking news » ಬೆಳಗಾವಿ: ಕುಮಾರಸ್ವಾಮಿ ಸರ್ಕಾರದಲ್ಲಿ ಸತೀಶ್ ಜಾರಕಿ ಹೊಳಿಗೆ ಸಚಿವ ಸ್ಥಾನ ಫಿಕ್ಸ್?

ಬೆಳಗಾವಿ: ಕುಮಾರಸ್ವಾಮಿ ಸರ್ಕಾರದಲ್ಲಿ ಸತೀಶ್ ಜಾರಕಿ ಹೊಳಿಗೆ ಸಚಿವ ಸ್ಥಾನ ಫಿಕ್ಸ್? 

ಕುಮಾರಸ್ವಾಮಿ  ಸರ್ಕಾರದಲ್ಲಿ  ಸತೀಶ್ ಜಾರಕಿ ಹೊಳಿಗೆ ಸಚಿವ ಸ್ಥಾನ ಫಿಕ್ಸ್?

ಬೆಳಗಾವಿ ಸೆ 7 : ತೀವ್ರ ಪೈಪೋಟಿ ಏರ್ಪಟ್ಟಿದ್ದ ಬೆಳಗಾವಿ ಪಿಎಲ್​ಡಿ ಬ್ಯಾಂಕ್​ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಬಣದವರು ಗೆಲುವಿನ ನಗೆ ಬೀರಿದ್ದರೆ.

ರಾಜ್ಯ ರಾಜಕಾರಣಲ್ಲಿ ದೊಡ್ಡ ತಲೆನೋವಾಗಿ ಪರಿಣಾಮಿಸಿದ್ದ ಜಾರಕಿಹೊಳಿ ಬ್ರದರ್‍ಸ್ ಹಾಗೂ ಹೆಬ್ಬಾಳ್ಕರ್​ ನಡುವಿನ ತಿಕ್ಕಾಟಕ್ಕೆ ಒಂದು ತಾರ್ತಿಕ ಅಂತ್ಯ ಕಂಡಿದೆ. ಈ ನಡುವೆ ಪಿಎಲ್​ಡಿ ಬ್ಯಾಂಕ್​ ಚುನಾವಣೆಗೆ ಸಂಬಂಧಪಟ್ಟಂತೆ ರಂಗ ಪ್ರವೇಶ ಮಾಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಇಬ್ಬರ ನಡುವಿನ ಮುನಿಸನ್ನು ಶಮನ ಮಾಡವಲ್ಲಿ ಯಶಸ್ವಿಯಾಗಿದ್ದಾರೆ. ಈ ನಡುವೆ ಹೆಬ್ಬಾಳ್ಕರ್​ ಬಣಕ್ಕೆ ಬೆಂಬಲ ವ್ಯಕ್ತಪಡಿಸಬೇಕಾದ್ರೇ ಸಚಿವ ಸಂಪುಟ ವಿಸ್ತರಣೆ ವೇಳೆಯಲ್ಲಿ ಸಚಿವ ಸ್ಥಾನ ನೀಡಬೇಕು ಇಲ್ಲ, ಪಿಎಲ್ ಡಿ ಚುನಾವಣೆಯಲ್ಲಿ ನಮ್ಮ ಬೆಂಬಲಿಗರನ್ನು ಗೆಲ್ಲಿಸ ಬೇಕು ಅಂತ ಸತೀಶ್ ಜಾರಕಿ ಹೊಳಿ ಹೇಳಿದ್ದಾರೆ ಎನ್ನಲಾಗಿದೆ.

ಈ ನಡುವೆ ಲಕ್ಷ್ಮಿ ಹೆಬ್ಬಾಳ್ಕರ್​ ನನಗೆ ಸಚಿವ ಸ್ಥಾನವೇನು ಬೇಡ ಆದರೆ ನನ್ನ ಬೆಂಬಲಿಗರು ಪಿಎಲ್ ಡಿ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಅಂತ ಹೇಳಿದ್ದಾರೆ ಎನ್ನಲಾಗಿದೆ.

ಕೊನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ವೇಣುಗೋಪಾಲ್ ಅವರೊಂದಿಗೆ ಹಾಗೂ ದಿನೇಶ್ ಗುಂಡುರಾವ್ ಜೊತೆಗೆ ಚರ್ಚೆ ಮಾಡಿದ ಬಳಿಕ ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾವನ್ನು ನೀಡುವುದಕ್ಕೆ ಒಪ್ಪಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಮ್ಮೆ ತಮ್ಮ ಅಧಿಪತ್ಯವನ್ನು ಸಾಧಿಸಬೇಕಾದ್ರೆ ಅದಕ್ಕೆ ಬೇಕಾಗಿರುವುದು ಸಚಿವ ಸ್ಥಾನವೇ ಹೊರತು. ಬೇರೆ ಅಲ್ಲ ಸತೀಶ್ ಜಾರಕಿಹೊಳಿ ಅವರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟು, ಕೊನೆಗೂ ಸಚಿವ ಸ್ಥಾನದ ಹತ್ತಿರ ಬಂದಿದ್ದಾರೆ ಎನ್ನಲಾಗಿದೆ.

Related posts: