RNI NO. KARKAN/2006/27779|Friday, October 25, 2024
You are here: Home » breaking news » ಗೋಕಾಕ:ಭ್ರಷ್ಟಾಚಾರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನೈಜ ಕಥೆ ಲಕ್ಷ್ಯ : ನಿರ್ದೇಶಕ ರವಿ ಸಾಸನೂರ

ಗೋಕಾಕ:ಭ್ರಷ್ಟಾಚಾರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನೈಜ ಕಥೆ ಲಕ್ಷ್ಯ : ನಿರ್ದೇಶಕ ರವಿ ಸಾಸನೂರ 

ಭ್ರಷ್ಟಾಚಾರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನೈಜ ಕಥೆ ಲಕ್ಷ್ಯ : ನಿರ್ದೇಶಕ ರವಿ ಸಾಸನೂರ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 17 :

 
ಭ್ರಷ್ಟಾಚಾರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಥೆಯನ್ನು ನೈಜವಾಗಿ ತೋರಿಸುವ ಕಾರ್ಯ ಲಕ್ಷ್ಯ ಚಲನಚಿತ್ರದಲ್ಲಿ ಮಾಡಲಾಗಿದೆ ಎಂದು ನಿರ್ದೇಶಕ ರವಿ ಸಾಸನೂರ ಹೇಳಿದರು.

ಮಂಗಳವಾರದಂದು ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು

ಸಮಾಜಿಕ ಕಳಕಳಿಯೊಂದಿಗೆ ಯುವಕರಿಗೆ ಅನ್ಯಾಯದ ವಿರುದ್ಧ ಹೋರಾಟದ ಸಂದೇಶ ನೀಡುವ ಈ ಚಿತ್ರ ಕೌಟುಂಬಿಕ ಚಿತ್ರವಾಗಿದೆ. ಉತ್ತರ ಕರ್ನಾಟಕದ ಕಲಾವಿದರನ್ನು ಬೆಳೆಸುವ ನಿಟ್ಟಿನಲ್ಲಿ ಈ ಭಾಗದ ಕಲಾವಿದರಿಗೆ ಹೆಚ್ಚಿನ ಅವಕಾಶವನ್ನು ಕಲ್ಪಿಸಲಾಗಿದೆ. ಗೋಕಾಕವಿ ನಾಡಿನ ಪ್ರಸಿದ್ಧ ಫಾಲ್ಸ್ ಸೇರಿದಂತೆ ಸುತ್ತಮುತ್ತಲಿನ ರಮಣೀಯ ಸ್ಥಳಗಳನ್ನು ಸುಂದರವಾಗಿ ಸೆರೆ ಹಿಡಿಯಲಾಗಿದೆ. ನಗರದ ಹಲವಾರು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡಾಭಿಮಾನಿಗಳು ಚಿತ್ರವನ್ನು ವಿಕ್ಷೀಸಿ ಚಿತ್ರ ತಂಡದವರನ್ನು ಆರ್ಶಿವದಿಸಬೇಕೆಂದು ಕೋರಿದರು.
ಚಿತ್ರ ನಟ ಸಂತೋಷರಾಜ್ ಝಾವಡೆ ಮಾತನಾಡಿ ಮಹಾಮಾರಿ ಕೋವಿಡ ನಿಂದ ಚಿತ್ರ ಬಿಡುಗಡೆ ತಡೆವಾಗಿದ್ದು, ನವೆಂಬರ್ 18 ರಂದು ರಾಜ್ಯಾದ್ಯಂತ ಲಕ್ಷ್ಯ ಚಿತ್ರವನ್ನು ಬಿಡುಗಡೆ ಮಾಡಲಾಗುವದು. ಜನತೆ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು. ಗೋಕಾಕ ಮತ್ತು ಬನಹಟ್ಟಿ ನಗರದ ಚಿತ್ರ ಮಂದಿರಗಳಲ್ಲಿ ಈ ಚಿತ್ರವನ್ನು ವಿಕ್ಷೀಸುವ ಪ್ರೇಕ್ಷಕರಿಗೆ ಟೀ ಶಟ್ ಗಳನ್ನು ಉಚಿತವಾಗಿ ನೀಡಲಾಗುವದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸುಧೀರ ಹುಲ್ಲೋಳಿ, ಆನಂದ ಕೊಳಕಿ,ಶಿವಕುಮಾರ್ ಎ ,ಜುವೀನ ಸಿಂಗ, ಸತ್ಯನಾಥ, ಯಲ್ಲೇಶ ಮೆಳವಂಕಿ , ಆನಂದ, ಚಂದ್ರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts: