ಗೋಕಾಕ:ಸೆ 11 ರಂದು ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾ ಸಭೆ
ಸೆ 11 ರಂದು ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾ ಸಭೆ
ಬೆಟಗೇರಿ ಅ 28 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಸನ್ 2017-18ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಮಹಾಸಭೆ ಸಂಘದ ಕಾರ್ಯಾಲಯದಲ್ಲಿ ಸಂಘದ ಅಧ್ಯಕ್ಷ ಪ್ರಾಣೇಶ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸೆಪ್ಟಂಬರ್ 11 ರಂದು ಮುಂಜಾನೆ 11 ಗಂಟೆಗೆ ನಡೆಯಲಿದೆ.
ಸಂಘದ ವಾರ್ಷಿಕ ಆಯಾ-ವ್ಯಯ ಅನುಮೋದನೆ, ಕಾರ್ಯ ಚಟುವಟಿಕೆ, ವಾರ್ಷಿಕ ವರದಿ, 2017-18ನೇ ಸಾಲಿನ ನಿವ್ಹಳ ಲಾಭದ ವಿಭಾಗಣೆ, ಇತರೆ ಸಹಕಾರ ಸಂಘಗಳಲ್ಲಿ ಸಂಘದ ಸದಸ್ಯತ್ವದ ಅನುಮೋದನೆ, ಮೀಸಲು ಅಥವಾ ಇತರೆ ನಿಧಿಗಳ ವಾಸ್ತವಿಕ ಬಳಕೆಯ ಪರೀಶಿಲನೆ ಸೇರಿದಂತೆ 27 ವಿಷಯಗಳ ಕುರಿತು ಹಾಗೂ ಸಂಘದ ಸಮಗ್ರ ಪ್ರಗತಿಗಾಗಿ ಹಲವಾರು ವಿಷಯಗಳನ್ನು ಚರ್ಚಿಸಲಿದ್ದು, ಸಂಘದ ಆಡಳಿತ ಮಂಡಳಿ ಸದಸ್ಯರು, ಸರ್ವ ಸದಸ್ಯರು, ಗ್ರಾಹಕರು ಈ ಮಹಾಸಭೆಯಲ್ಲಿ ಹಾಜರಿರಬೇಕೆಂದು ಸಂಘದ ಮುಖ್ಯಕಾರ್ಯನಿರ್ವಾಹಕ ನಿಂಗಪ್ಪ ನೀಲಣ್ಣವರ ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.