RNI NO. KARKAN/2006/27779|Thursday, October 16, 2025
You are here: Home » breaking news » ಮೂಡಲಗಿ:ದೇಶಾಭಿಮಾನವು ಭಾರತದ ಪ್ರತಿಯೊಬ್ಬ ನಾಗರಿಕರಲ್ಲಿ ರಕ್ತದಲ್ಲಿಯೇ ಪಸರಿಸಿದೆ :ಎಚ್ ಎ ಸೋನವಾಲಕರ

ಮೂಡಲಗಿ:ದೇಶಾಭಿಮಾನವು ಭಾರತದ ಪ್ರತಿಯೊಬ್ಬ ನಾಗರಿಕರಲ್ಲಿ ರಕ್ತದಲ್ಲಿಯೇ ಪಸರಿಸಿದೆ :ಎಚ್ ಎ ಸೋನವಾಲಕರ 

ದೇಶಾಭಿಮಾನವು ಭಾರತದ ಪ್ರತಿಯೊಬ್ಬ ನಾಗರಿಕರಲ್ಲಿ ರಕ್ತದಲ್ಲಿಯೇ ಪಸರಿಸಿದೆ :ಎಚ್ ಎ ಸೋನವಾಲಕರ

ಮೂಡಲಗಿ ಅ 15 : ದೇಶಾಭಿಮಾನವು ಭಾರತದ ಪ್ರತಿಯೊಬ್ಬ ನಾಗರಿಕರಲ್ಲಿ ರಕ್ತದಲ್ಲಿಯೇ ಪಸರಿಸಿದೆ. ದೇಶದ ಐಕ್ಯತೆ ಹಾಗೂ ರಾಷ್ಟ್ರೀಯ ಬೆಳವಣಿಗೆ ವಿಚಾರವಾಗಿ ಪ್ರತಿಯೊಬ್ಬರು ಕೈಜೋಡಿಸಿ ಸ್ವಾತಂತ್ರ್ಯದ ನಂತರ ನಾವೇಲ್ಲರು ಅಭಿವೃದ್ದಿ ಪಥದಂತ ಸಾಗಬೇಕಾಗಿದೆ ಎಂದು ನಿವೃತ್ತ ಉಪಪ್ರಾಚಾರ್ಯ ಎಚ್ ಎ ಸೋನವಾಲಕರ ಹೇಳಿದರು.
ಅವರು ಸ್ಥಳೀಯ ಕರುನಾಡು ಸೈನಿಕ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ 72 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಯುವಕರಿಗೆ ದೈಹಿಕ ಮಾನಸಿಕ ಹಾಗೂ ವಾಸ್ತವಿಕತೆಯ ಅರಿವು ಮೂಡಿಸಬೇಕು. ಇಂದಿನ ಯುವಕರು ಸಾಮಾಜಿಕ ಜಾಲತಾಣಗಳನ್ನು ಅವಶ್ಯಕತೆಗಳಿಗೆ ಮಾತ್ರ ಉಪಯೋಗಿಸಿಕೊಂಡು ತಮ್ಮಯ ಭವಿಷ್ಯ ರೂಪಿಸಿಕೊಳ್ಳ ಬೇಕೆಂದು ಕಿವಿ ಮಾತು ಹೇಳಿದರು.
ಜನಸೇವಾ ಪತ್ರಕರ್ತ ಸಂಘದ ಅಧ್ಯಕ್ಷ ಈಶ್ವರ ಮಗದುಮ ಮಾತನಾಡಿ, ಯುವ ಪೀಳಿಗೆಯು ಹಿರಿಯ ಹಾಗೂ ಮಾರ್ಗದರ್ಶಕರ ಜೊತೆಯಲ್ಲಿ ಅಗತ್ಯ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು. ದುಷ್ಟ ಶಕ್ತಿಗಳ ವಿರುದ್ಧ ತಮ್ಮಯ ಜಾನ್ಮೆಯ ಮೂಲಕ ದೂರವಿದ್ದು, ತಮ್ಮ ಸ್ವ ಸಾಮಥ್ರ್ಯದ ಆಧಾರದ ಮೇಲ ತಮ್ಮಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದರು.
ತರಭೇತಿ ಕೇಂದ್ರದ ವ್ಯವಸ್ಥಾಪಕ ನಿವೃತ್ತ ಸೈನಿಕ ಶಂಕರ ತುಕ್ಕನ್ನವರ ಪ್ರಾಸ್ತಾವಿಕವಾಗಿ ಸ್ವಾತಂತ್ರ್ಯದ ಕುರಿತು ದೇಶಾಭಿಮಾನ ಮತ್ತು ಇಂದಿನ ಯುವಕರಿಗೆ ಅವಶ್ಯಕತೆಗಳ ಕುರಿತು ವಿವರಿಸಿದರು.
ಧ್ವಜಾರೋಹನವನ್ನು ಎ.ಎಸ್.ಐ ಎಮ್.ಬಿ ತಳವಾರ, ಶಂಬಣ್ಣಾ ತುಕ್ಕನ್ನವರ ನೇರವೇರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಸವಿತಾ ತುಕ್ಕನ್ನವರ, ಮೆಲ್ವಿಚಾರಕರಾದ ಎಸ್.ಎಸ್ ಸೊರಗಾಂವಿ, ಬಸವರಾಜ ಕೆಡಗಿ, ಮಕ್ಕುಂದ ಕುಲಕರ್ಣಿ, ಎಸ್.ಎಸ್.ಸಿ ಸಂಸ್ಥೆಯ ವಿಷು ಕೊಳಗಿ, ವಾಯ್.ವಾಯ್ ಸುಲ್ತಾನಪೂರ, ಪೂಜಾ ಸ್ಪೂರ್ತಿ ಸಂಸ್ಥೆಯ ಅಧ್ಯಕ್ಷ ಯಲ್ಲಾಲಿಂಗ ವಾಳದ, ಯಲ್ಲಪ್ಪ ಇಟ್ನಾಳ, ಅರುಣ ನುಚ್ಚುಂಡಿ, ಹೀನಾ ಪಟೇಲ್, ಅನಿಲ ಮಡಿವಾಳರ, ಹಿರೇಮಠ, ಭೀಮಶಿ ಕಂಕಣವಾಡಿ ಹಾಗೂ ಸೈನಿಕ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

Related posts: