ಗೋಕಾಕ:ಗಣಿತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸರ್ವೇಶ ಪಾಟೀಲ ಮಡೆಪ್ಪ ಸುಣಧೋಳಿ ಪ್ರಥಮ
ಗಣಿತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸರ್ವೇಶ ಪಾಟೀಲ ಮಡೆಪ್ಪ ಸುಣಧೋಳಿ ಪ್ರಥಮ
ಬೆಟಗೇರಿ ಅ 4 : ರ್ಯಾಂಗ್ಲರ್ ಡಿ.ಸಿ.ಪಾವಟೆಯವರ 119ನೇ ಜನ್ಮ ದಿನಾಚರಣೆ ಪ್ರಯುಕ್ತ ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದ ಚಿಂತಾಮಣಿ ಪಾವಟೆ ಪ್ರೌಢ ಶಾಲೆಯಲ್ಲಿ ಗುರುವಾರ ಆ.2ರಂದು ನಡೆದ ಜಿಲ್ಲಾ ಮಟ್ಟದ 7ನೇ ತರಗತಿ ಶಾಲೆಯ ಮಕ್ಕಳಿಗೆ ಗಣಿತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಮೀಪದ ಮಮದಾಪೂರ ಗ್ರಾಮದ ಬಿ.ಬಿ.ಮಮದಾಪೂರ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಕಾನ್ವೆಂಟ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಗಳಾದ ಸರ್ವೇಶ ಪಾಟೀಲ ಸಾಮಾನ್ಯ ವಿಭಾಗದಲ್ಲಿ ಪ್ರಥಮ, ಮಡೆಪ್ಪ ಸುಣಧೋಳಿ ಗ್ರಾಮೀಣ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಅಲ್ಲದೇ ಮಮದಾಪೂರ ಸಿಆರ್‍ಸಿ ವ್ಯಾಪ್ತಿಯ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕ್ವೀಜ್ ಸ್ಪರ್ಧೆಯಲ್ಲಿಯೂ ಸಹ ಈ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ವಿವಿಧ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಶಾಲೆಯ ವಿದ್ಯಾರ್ಥಿಗಳಿಗೆ ಮಮದಾಪೂರ ಗ್ರಾಮದ ಚಿಂತಾಮಣಿ ಪಾವಟೆ ಪ್ರೌಢ ಶಾಲೆಯ ಸ್ಪಧಾತ್ಮಕ ಪರೀಕ್ಷೆ ಆಯೋಜಕರು ಪ್ರಶಸ್ತಿ ಪತ್ರ, ಟ್ರೋಫಿ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದ್ದಾರೆ.
ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಮುಖ್ಯಾಧ್ಯಾಪಕರು, ಶಿಕ್ಷಕ ವೃಂದ ಹಾಗೂ ಗ್ರಾಮದ ಶಿಕ್ಷಣಪ್ರೇಮಿಗಳು ಶಾಲೆಯ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.