ಮೂಡಲಗಿ:ಅನ್ನದಾಸೋಹವು ಅನುಪಮ ಸೇವೆಯಾಗಿದೆ : ಡಾ.ಎಸ್.ಎಸ್. ಪಾಟೀಲ
ಅನ್ನದಾಸೋಹವು ಅನುಪಮ ಸೇವೆಯಾಗಿದೆ : ಡಾ.ಎಸ್.ಎಸ್. ಪಾಟೀಲ
ಮೂಡಲಗಿ ಜು 30 : ಅನ್ನದಾಸೋಹ ಮಾಡುವ ಭಾಗ್ಯವು ಅನುಪಮ ಸೇವೆಯಾಗಿದೆ ಎಂದು ಪುರಸಭೆ ಹಾಗೂ ಲಯನ್ಸ್ ಕ್ಲಬ್ ಸದಸ್ಯ ಡಾ.ಎಸ್.ಎಸ್. ಪಾಟೀಲ ಹೇಳಿದರು.
ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ತಮ್ಮ ಹುಟ್ಟುಹಬ್ಬದ ನಿಮಿತ್ತವಾಗಿ ಏರ್ಪಡಿಸಿದ್ದ 30ನೇ ಪಾಕ್ಷಿಕ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಹುಟ್ಟುಹಬ್ಬವನ್ನು ರೋಗಿಗಳಿಗೆ ಅನ್ನ ನೀಡುವ ಮೂಲಕ ಆಚರಿಸಿಕೊಲ್ಳುತ್ತಿರುವುದು ಸ್ಮರಣೀಯವಾಗಿದೆ ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಶಿವನಗೌಡ ಪಾಟೀಲ ಮಾತನಾಡಿ ಕಳೆದ ಒಂದುವರೆ ವರ್ಷದಿಂದ ಲಯನ್ಸ್ ಕ್ಲಬ್‍ದವರು ಆಸ್ಪತ್ರೆಯಲ್ಲಿ ಅನ್ನದಾಸೋಹವನ್ನು ಏರ್ಪಡಿಸುವ ಮೂಲಕ ರೋಗಿಗಳ ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಶ್ರೀಶೈಲ್ ಲೋಕನ್ನವರ ಮಾತನಾಡಿ ಪ್ರತಿ 15 ದಿನಗಳಿಗೊಮ್ಮೆ ಆಸ್ಪತ್ರೆಯಲ್ಲಿ ಅನ್ನದಾಸೋಹ ಏರ್ಪಡಿಸುತ್ತಿದ್ದು, ಲಯನ್ಸ್ ಕ್ಲಬ್‍ದೊಂದಿಗೆ ಬಹಳಷ್ಟು ದಾನಿಗಳು ಸಹಕಾರ ನೀಡುತ್ತಿದ್ದಾರೆ ಎಂದರು.
400ಕ್ಕೂ ಅಧಿಕ ಸಂಖ್ಯೆಯಲ್ಲಿ ರೋಗಿಗಳು ಹಾಗೂ ಪಾಲಕರು ಅನ್ನದಾಸೋಹದಲ್ಲಿ ಭಾಗವಹಿಸಿದ್ದರು.
ಡಾ. ದಂಡಿನ, ಗುತ್ತಿಗೆದಾರ ಶಾಬನ್ನವರ, ಲಯನ್ಸ್ ಕ್ಲಬ್ ವಲಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಗಿರೀಶ ಆಸಂಗಿ, ಶಿವಾನಂದ ಗಾಡವಿ, ಉದಯಕುಮಾರ ಜೋಕಿ, ವಿಶಾಲ ಶೀಲತವಂತ, ಮಲ್ಲಿನಾಥ ಶೆಟ್ಟಿ, ಸಂಜಯ ಮೋಕಾಶಿ ಇದ್ದರು.