ಗೋಕಾಕ:ಶಾಸಕ ರಮೇಶ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು
ಶಾಸಕ ರಮೇಶ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 19 :
ಕುಂದರನಾಡಿನ ಬೂದಿಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ವಿಜಯ ಸಾಧಿಸಿದ್ದಾರೆ.
ರವಿವಾರದಂದು ತಾಲೂಕಿನ ಬೂದಿಹಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಜರುಗಿದ ಚುನಾವಣೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಬೆಂಬಲಿತ 12ಜನ ಸದಸ್ಯರು ವಿಜಯದ ಪತಾಕೆ ಹಾರಿಸಿದ್ದಾರೆ.
ಶಾಸಕ ರಮೇಶ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರ ಮಾರ್ಗದರ್ಶನದಲ್ಲಿ ಬೂದಿಹಾಳ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ ಅಡಿವೆಪ್ಪ ಶಿವಪುತ್ರಪ್ಪ ನಾವಲಗಟ್ಟಿ, ರಾಜು ಬಸಲಿಂಗಪ್ಪ ದೊಡ್ಡಮನಿ, ಅಪ್ಪರಾಯ ಬಾಳಪ್ಪ ಬಡೆನ್ನವರ, ಸುಭಾಸ ಅಡಿವೆಪ್ಪ ಗೂಳಿ, ಗಂಗಪ್ಪಾ ಬಸಲಿಂಗಪ್ಪ ಅಂಗಡಿ, ಕರೆಪ್ಪ ಶ್ಯಾಮ ಹರಿಜನ, ಸತ್ಯಗೌಡ ಪಾಟೀಲ, ದಸ್ತಗೀರಸಾಬ ದೇಸಾಯಿ, ಹನಮಂತ ಕೆಂಪದಿನ್ನಿ, ಜಾನಕ್ಕ ಬಸನಗೌಡ ಪೋಲಿಸಗೌಡರ, ಪಾರ್ವತಿ ಈರಪ್ಪ ಸಂಪಗಾಂವ, ಪರಸಪ್ಪ ಸತ್ಯೆಪ್ಪ ನಾರಿ ನೂತನ ಸದಸ್ಯರಾಗಿ ಆಯ್ಕೆಯಾಗಿರುವದಾಗಿ ಚುನಾವಣಾ ಅಧಿಕಾರಿ ಆರ್ ಸಿ ಬಿರಾದಾರ ಪತ್ರಿಕೆಗೆ ತಿಳಿಸಿದ್ದಾರೆ.
ಬೂದಿಹಾಳ ಗ್ರಾಮದಲ್ಲಿ ಶಾಸಕ ರಮೇಶ ಜಾರಕಿಹೊಳಿ ಬೆಂಬಲಿತ ಸದಸ್ಯರು ಚುನಾವಣೆಯಲ್ಲಿ ಜಯಸಾಧಿಸುತ್ತಿದ್ದಂತೆ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಭೀಮಗೌಡ ಪೋಲಿಸಗೌಡರ, ಸುಭಾಸ ಪಂಡಲಿ, ಯಮನಪ್ಪ ನಾರಿ, ಬಾಳೇಶ ಮರಾಠಿ, ಭೀಮಗೌಡ ಪಾಟೀಲ, ವೀರುಪಾಕ್ಷಿ ಅಂಗಡಿ ಸೇರಿದಂತೆ ಅನೇಕರು ಇದ್ದರು.