RNI NO. KARKAN/2006/27779|Sunday, July 13, 2025
You are here: Home » breaking news » ಗೋಕಾಕ: ಸೌಲಭ್ಯ ಇಲ್ಲದೆ ಸೋರಗುತ್ತಿರುವ ಅರಣ್ಯ ಇಲಾಖೆಯ ಕಛೇರಿ ಹಾಗೂ ವಸತಿ ಗೃಹಗಳು ! ಇಲ್ಲಿ ಎದ್ದು ಕಾಣುತ್ತಿದೆ ಅಧಿಕಾರಿಗಳ ಬೇಜಬ್ದಾರಿತನ

ಗೋಕಾಕ: ಸೌಲಭ್ಯ ಇಲ್ಲದೆ ಸೋರಗುತ್ತಿರುವ ಅರಣ್ಯ ಇಲಾಖೆಯ ಕಛೇರಿ ಹಾಗೂ ವಸತಿ ಗೃಹಗಳು ! ಇಲ್ಲಿ ಎದ್ದು ಕಾಣುತ್ತಿದೆ ಅಧಿಕಾರಿಗಳ ಬೇಜಬ್ದಾರಿತನ 

ಸೌಲಭ್ಯ ಇಲ್ಲದೆ ಸೋರಗುತ್ತಿರುವ ಅರಣ್ಯ ಇಲಾಖೆಯ ಕಛೇರಿ ಹಾಗೂ ವಸತಿ ಗೃಹಗಳು ! ಇಲ್ಲಿ ಎದ್ದು ಕಾಣುತ್ತಿದೆ ಅಧಿಕಾರಿಗಳ ಬೇಜಬ್ದಾರಿತನ

ವಿಶೇಷ ವರದಿ :

ಗೋಕಾಕ ಜು 11 : ಕಳೆದ 10 ವರ್ಷಗಳಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗಾಗಿ ವಸತಿ ಗೃಹಗಳು ಹಾಗೂ (ಶಾಖಾ ವನ ಪಾಲಕರ ) ಉಪ ವಲಯ ಅರಣ್ಯ ಅಧಿಕಾರಿಗಳ ಕಚೇರಿ ದಿಕ್ಕು ದೆಸೆಯಿಲ್ಲದೇ ಅನೈತಿಕ ಚಟುವಟಿಕೆಗಳನ್ನು ನಡೆಯುವ ತಾಣವಾಗಿ ಪರಿಣಮಿಸಿದರು ಸಹ ಇಲಾಖೆಯ ಅಧಿಕಾರಿಗಳು ಬೇಜವಾಬ್ದಾರಿ ಧೋರಣೆ ಅನುಸರಿಸುತ್ತಿದ್ದಾರೆ

ತಾಲೂಕಿನ ಕೊಣ್ಣೂರ ಪಟ್ಟಣದ ಹೊರವಲಯದಲ್ಲಿರುವ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಇಲಾಖೆಯ ನೌಕರರಿಗಾಗಿ ಇರುವ ವಸತಿ ಗೃಹಗಳು ಹಾಗೂ ಉಪ ವಲಯ ಅರಣ್ಯಾಧಿಕಾರಿ (ವನಪಾಲಕರ ಕಚೇರಿಯ) ದು:ಸ್ಥಿತಿಯನ್ನು ನೋಡಿದರೇ ಇಲ್ಲಿಯ ಅಧಿಕಾರಿಗಳ ಬೇಜಬ್ದಾರಿತನ ಎದ್ದು ಕಾಣುತ್ತದೆ.

ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಪಾಳು ಬಿದ್ದಿರುವ ಉಪ ವಲಯ ಅರಣ್ಯ ಅಧಿಕಾರಿಗಳ ಕಛೇರಿ ಹಾಗೂ ವಸತಿ ಗೃಹಗಳು

ಗೋಕಾಕ ವಲಯ ಅರಣ್ಯಾಧಿಕಾರಗಳ ವಾಪ್ತಿಯಲ್ಲಿ ಬರುವ ಕೊಣ್ಣೂರ ವನಪಾಲಕ ಕಛೇರಿಯ ವ್ಯಾಪ್ತಿಗೆ ಮೇಲ್ಮಟ್ಟಿ, ಗೋಡಚಿನಮಲ್ಕಿ, ಶಿವಾಪೂರ, ಸಾವಳಗಿ, ಮರಡಿಮಠ ಸೇರಿದಂತೆ ಹಲವು ಗ್ರಾಮಗಳು ಬರುತ್ತವೆ. ಇಲ್ಲಿ ಓರ್ವ ವನಪಾಲಕ, ಇಬ್ಬರು ಅರಣ್ಯ ರಕ್ಷಕರು, ಓರ್ವ ಅರಣ್ಯ ವೀಕ್ಷಕ(ವಾಚರ್) ಕರ್ತವ್ಯ ನಿರ್ವಹಿಸುತ್ತಾರೆ. ಇವರ ಕರ್ತವ್ಯ ನಿರ್ವಹಣೆಗಾಗಿಯೇ ನಿರ್ಮಿಸಿದ್ದ ಕಚೇರಿ ಹಾಗೂ ವಸತಿಗಾಗಿ ನಿರ್ಮಿಸಿದ್ದ ಕಟ್ಟಡಗಳು ಬಿದ್ದು ಹೋಗಿದ್ದು ಕಳೆದ 10 ವರ್ಷಗಳಿಂದ ಇತ್ತ ಕಡೆ ಅಧಿಕಾರಿಗಳು ಗಮನ ಹರಿಸದೇ ಇರುವುದರಿಂದ ಹಾಳು ಹಂಪೆಯಂತಾಗಿವೆ.

ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯು ಕೂಡಾ ಕಂಡು ಕಾಣದಂತೆ ಜಾಣ ಕುರುಡರಂತೆ ಮೌನ ವಹಿಸಿ ಗೋಕಾಕ ನಗರದಿಂದ ಇಲ್ಲಿ ಬಂದು ಹೋಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಈ ಸ್ಥಳ ಈಗ ಸದ್ಯ ಯಾರು ಹೇಳುವವರು ಕೇಳುವವರು ಇಲ್ಲದ ಕಾರಣ ಇದು ಜೂಜುಕೂರರ ತಾಣ, ಸಾರಾಯಿ ಕುಡುಕರ ಸ್ಥಳ, ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಕಳೆದ 10 ವರ್ಷಗಳಿಂದ ಇಲ್ಲಿಯ ಕಾರ್ಯನಿರ್ವಹಿಸಿ ಹೋದ ಅಧಿಕಾರಿಗಳಾಗಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು , ವಲಯ ಅರಣ್ಯಾಧಿಕಾರಿಗಳಾಗಲಿ , ಉಪ ವಲಯ ಅರಣ್ಯ ಅಧಿಕಾರಿಗಳು ಇದರೆಡೆ ಗಮನ ಹರಿಸದೇ ತಮ್ಮ ಬೇಜಬ್ದಾರಿತನ ತೋರುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರಲ್ಲದೆ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ .

ಕಳೆದ ದಶಕಗಳಿಂದ ಪಾಳು ಬಿದ್ದಿರುವ ವಸತಿ ಗೃಹ ಮತ್ತು ಶಾಖಾ ವನ ಪಾಲಕರ ಕಛೇರಿಯ ಬಗ್ಗೆ ಇಲಿಖೆಯ (ಸರಕಾರದ) ಗಮನಕ್ಕೆ ತಾರದೆ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಲಯ ಅರಣ್ಯ ಅಧಿಕಾರಿಗಳು ಮತ್ತು ಉಪ ವಲಯ ಅರಣ್ಯ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನೂನುಚಿಕೋಳ್ಳುತ್ತಿದ್ದಾರೆಂದು ಸ್ದಳೀಯರು ಆರೋಪಿಸುತ್ತಾರೆ .

ಮನೋಹರ ಮ್ಯಾಗೇರಿ , ಸ್ಥಳೀಯರು

” ಕಳೆದ ಹಲವು ವರ್ಷಗಳಿಂದ ಅರಣ್ಯ ಇಲಾಖೆ ಸಂಬಂಧ ಪಟ್ಟ ಈ ವಸತಿ ಗೃಹಗಳು ಇಲಾಖೆಯ ಬೇಜವಾಬ್ದಾರಿ ಧೋರಣೆಯಿಂದ ಪಾಳು ಬಿದ್ಧು , ಅನೈತಿಕ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತವೆ ಇಲಾಖೆಯ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತು ಕೊಂಡು ಕೂಡಲೇ ಈ ಸಮಸ್ಯೆ ಬಗೆ ಹರಿಸಬೇಕು ಇಲ್ಲದಿದ್ದರೆ ಗೋಕಾಕ ವಲಯ ಅರಣ್ಯ ಅಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಸಲಾಗುವದು “.

ಆಯ್ಯಬ ಪೀರಜಾದೆ , ಕ.ವಿ.ಸೇ ಪ್ರಮುಖ

” ಕೊಣ್ಣೂರ ಪಟ್ಟಣದಲ್ಲಿ ಇರುವ ಅರಣ್ಯ ಇಲಾಖೆಯ ವಸತಿ ಗೃಹಗಳು ಹಾಳಾಗಿದ್ದರಿಂದ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ . ಕೂಡಲೇ ಇಲಾಖೆಯವರು ಈ ವಸತಿ ಗೃಹಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು” .

Related posts: