ಗೋಕಾಕ:ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆ ಬೆಂಕಿಗಾಹುತಿ : ರೈತನಿಗೆ ಶಾಸಕ ರಮೇಶ ಜಾರಕಿಹೊಳಿ ಸಾಂತ್ವನ
ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆ ಬೆಂಕಿಗಾಹುತಿ : ರೈತನಿಗೆ ಶಾಸಕ ರಮೇಶ ಜಾರಕಿಹೊಳಿ ಸಾಂತ್ವನ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 24 :
ಆಕಸ್ಮಿಕವಾಗಿ ಕಬ್ಬು ಬೆಳೆಗೆ ಬೆಂಕಿ ಹತ್ತಿದ ಪರಿಣಾಮ ಬೆಳೆಶ ನಾಶವಾದ ಘಟನೆ ರವಿವಾರದಂದು ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.
ಕೊಣ್ಣೂರ ಗ್ರಾಮದ ರೈತರಾದ ಅಶೋಕ ತಮ್ಮಣಗೌಡ ಪಾಟೀಲ ಮತ್ತು ದೇವಪ್ಪ ಖನಗಾವಿ, ಎಂಬುವವರು 20 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಬೆಳೆ ಆಕಸ್ಮಿಕವಾಗಿ ಹತ್ತಿದ್ದ ಬೆಂಕಿಯಿಂದ ಸುಟ್ಟು ಕರಕಲಾಗಿವೆ ಎಂದು ಹೇಳಲಾಗುತ್ತಿದೆ. ಲಕ್ಷಾಂತರ ರೂ ಹಣ ಖರ್ಚು ಮಾಡಿ ಬೆಳೆದ ಬೆಳೆ ಕೈಗೆಟುಕುವಷ್ಟರಲ್ಲಿ ಆಕಸ್ಮಿಕವಾಗಿ ತಗುಲಿದ ಬೆಂಕಿಗೆ ಇಡೀ ಬೆಳೆ ಭಸ್ಮವಾಗಿದೆ.
ಶಾಸಕ ರಮೇಶ ಜಾರಕಿಹೊಳಿ ಸಾಂತ್ವನ : ಕೊಣ್ಣೂರ ಗ್ರಾಮದಲ್ಲಿ ಹೊಲಕ್ಕೆ ಬೆಂಕಿ ಹತ್ತಿ ಬೆಳೆ ನಾಶವಾಗಿದೆ ಎಂಬ ವಿಷಯ ತಿಳಿದ ಶಾಸಕ ರಮೇಶ ಜಾರಕಿಹೊಳಿ ತಕ್ಷಣ ರೈತರಿಗೆ ದೂರವಾಣಿ ಮುಖಾಂತರ ಮಾತನಾಡಿ ಸಾಂತ್ವನ ಹೇಳಿ, ಕೂಡಲೇ ಸರಕಾರ ಹಾಗೂ ವೈಯಕ್ತಿಕವಾಗಿ ನೆರವು ನೀಡುವ ಭರವಸೆ ನೀಡಿ, ತಮ್ಮ ಆಪ್ತ ಸಹಾಯಕ ಸುರೇಶ್ ಸನದಿ ಅವರಿಗೆ ಸ್ಥಳಕ್ಕೆ ಕಳುಹಿಸಿ ಸುಟ್ಟು ಭಸ್ಮವಾದ ಬೆಳೆಯ ಸಮೀಕ್ಷೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಸುರೇಶ ಸನದಿ, ಭರತೇಶ ಖನಗಾವಿ,ಶಿಥಲ ಖನಗಾವಿ,ವರ್ಧಮಾನ ಖನಗಾವಿ,ಅಪ್ಪಾಸಾಬ ಪಾಟೀಲ್, ಅಶೋಕ ಪಾಟೀಲ ಉಪಸ್ಥಿತರಿದ್ದರು.