ಗೋಕಾಕ: ಬೆಟಗೇರಿಯಲ್ಲಿ ಪ್ರತ್ಯಕ್ಷವಾದ ಕಿಂಗ್ ಫಿಶರ್

ಗ್ರಾಮದ ಜಾನಕಿ ಮೆಡಿಕಲ್ ಮತ್ತು ಜನರಲ್ ಸ್ಟೊರ್ಸ್ ಅಂಗಡಿಯಲ್ಲಿ ಕಳೆದ ಎರಡು ದಿನಗಳಿಂದ ಮಿಮ್ಚುಳ್ಳಿ (ಕಿಂಗ್ ಫಿಶರ್ ಬಡ್ಸ್) ಪಕ್ಷಿ ಅಂಗಡಿಯಲ್ಲಿರುವ ಔಷಧದ ರಟ್ಟಿನ ಬಾಕ್ಸ್ ಮೇಲೆ ಬಂದು ಕುಳಿತುಕೊಂಡಿರುವದು.
ಬೆಟಗೇರಿಯಲ್ಲಿ ಪ್ರತ್ಯಕ್ಷವಾದ ಕಿಂಗ್ ಫಿಶರ್
ಬೆಟಗೇರಿ ಜೂ 21 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಚಂದ್ರಶೇಖರ ಪುರಂದರೆ ಅವರ ಜಾನಕಿ ಮೆಡಿಕಲ್ ಮತ್ತು ಜನರಲ್ ಸ್ಟೊರ್ಸ್ ಅಂಗಡಿಯಲ್ಲಿ ಕಳೆದ ಎರಡು ದಿನಗಳಿಂದ ಮಿಮ್ಚುಳ್ಳಿ (ಕಿಂಗ್ ಫಿಶರ್ ಬಡ್ಸ್) ಪಕ್ಷಿ ಬಂದು ಕುಳಿತುಕೊಂಡಿದೆ. ಅಂಗಡಿಯಿಂದ ಈ ಪಕ್ಷಿ ಹೊರಹಾಕಲು ಎಷ್ಟೇ ಪ್ರಯತ್ನಿಸಿದರೂ ಔಷಧವಿರುವ ರಟ್ಟಿನ ಪೆಟ್ಟಿಗೆ ಮೇಲೆ ಹಾಗೆ ಕುಳಿತಿದೆ.
ಒಂದಿಷ್ಟು ಅದರ ಹೊಟ್ಟೆಗೆ ಅನ್ನ ಹಾಕಿ ಔಷಧ ಅಂಗಡಿ ಮಾಲೀಕ ಚಂದ್ರಶೇಖರ ಪುರಂದರೆ ಅವರ ಪುತ್ರ ತೇಜಸ್ ಪುರಂದರೆ ಪಕ್ಷಿ ಪ್ರೇಮ ಮೆರೆದಿದ್ದಾರೆ. ಹೀಗಾಗಿ ಈ ಔಷಧ ಅಂಗಡಿಗೆ ಬರುವ ಗಿರಾಕಿಗಳಿಗೆ ಮಿಮ್ಚುಳ್ಳಿ ಪಕ್ಷಿ ಆಕರ್ಷಣಿಯವಾಗಿ ಗಮನ ಸೆಳೆಯುತ್ತಿದೆ.