RNI NO. KARKAN/2006/27779|Friday, May 22, 2026
You are here: Home » breaking news » ಬೆಳಗಾವಿ:ರಾಸಾಯನಿಕ ಟ್ಯಾಂಕರ ಸೋರಿಕೆ : ಸ್ಥಳದಲ್ಲಿ ಭಾರಿ ಭದ್ರತೆ

ಬೆಳಗಾವಿ:ರಾಸಾಯನಿಕ ಟ್ಯಾಂಕರ ಸೋರಿಕೆ : ಸ್ಥಳದಲ್ಲಿ ಭಾರಿ ಭದ್ರತೆ 

ರಾಸಾಯನಿಕ ಟ್ಯಾಂಕರ ಸೋರಿಕೆ : ಸ್ಥಳದಲ್ಲಿ ಭಾರಿ ಭದ್ರತೆ

 

ಬೆಳಗಾವಿ ಮೇ 30: ಮುಂಬೈ ನಿಂದ ಉಡುಪಿಗೆ ಸಾಗಿಸುತ್ತಿದ ರಾಸಾಯನಿಕ ಟ್ಯಾಂಕರ ನಲ್ಲಿ ಸೋರಿಕೆ ಕಂಡ ಪರಿಣಾಮ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ

ನಿನ್ನೆ ತಡರಾತ್ರಿ ಬೆಳಗಾವಿ ಜಿಲ್ಲೆ ಎಂ.ಕೆ.ಹುಬ್ಬಳ್ಳಿ- ಹಿರೇವಾಗೇವಾಡಿ ನಡುವಿನ ಮುತ್ನಾಳ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್‌ನಲ್ಲಿ ಸೋರಿಕೆ ಕಂಡು ಬಂದಿತ್ತು. ಕೂಡಲೇ ಸ್ಥಳದಲ್ಲಿಯೇ ವಾಹನ ನಿಲ್ಲಿಸಲಾಗಿತ್ತು. ಅನಿಲ ಸೋರಿಕೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. 

ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಸ್ಥಳದಲ್ಲಿ ಅಗ್ನಿ ಶಾಮಕ ದಳ, ಆಂಬ್ಯುಲೆನ್ಸ್‌, ಹೆದ್ದಾರಿ ನಿರ್ವಹಣಾ ಪಡೆ, ಪೊಲೀಸರಿಂದ ಭದ್ರತೆ ಕೈಗೊಳ್ಳಲಾಗಿದ್ದು, ಟ್ಯಾಂಕರ ಬಳಿ ಯಾರು ಸುಳಿಯದಂತೆ  ನೋಡಿಕೊಳ್ಳಲಾಗಿದೆ. ಇನ್ನು ಕಾರ್ಖಾನೆಯ ಹಿರಿಯ ಸಹಾಯಕ ನಿರ್ದೇಶಕ ವೆಂಕಟೇಶ ಸ್ಥಳದಲ್ಲಿದ್ದು ಪರಿಶೀಲನೆ ನಡೆಸಿದ್ದಾರೆ

Related posts: