ಬೈಲಹೊಂಗಲ:ಡಿ.ಬಿ ಇನಾಮದಾರ ಪ್ರೌಢಶಾಲೆಲ್ಲಿ ವಿಶ್ವ ಪರಿಸರ ದಿನ ಆಚರಣೆ

ಡಿ.ಬಿ ಇನಾಮದಾರ ಪ್ರೌಢಶಾಲೆಲ್ಲಿ ವಿಶ್ವ ಪರಿಸರ ದಿನ ಆಚರಣೆ
ನೇಗಿನಹಾಳ ಜೂ 5 : ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಡಿ.ಬಿ ಇನಾಮದಾರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಉದ್ಯಾನವನದ ಸಸಿಗಳ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅದ್ಯಾಪಕ ಚಂದ್ರಕಾಂತ ಮೆಳವಂಕಿ, ವಿಜಯ ವಿದ್ಯಾದಾಯಿನಿ ಸಂಘದ ಉಪಾದ್ಯಕ್ಷ ಮಲ್ಲನಗೌಡ ಪಾಟೀಲ, ಕಾರ್ಯದರ್ಶಿ ಬಿ.ಟಿ ಖಂಡಪ್ಪನವರ, ನಿರ್ದೇಶಕರಾದ ಎಮ್.ಎಫ್ ಗಾಣಗಿ, ಜಿ.ಜಿ ಸಂಗೊಳ್ಳಿ ಹಾಗೂ ಶಾಲಾ- ಕಾಲೇಜು ಉಪನ್ಯಾಸಕರು ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.