RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಕರವೇಯ ಸಾರ್ಥಕ ಹದಿಮೂರು ವರ್ಷಗಳು

ಗೋಕಾಕ:ಕರವೇಯ ಸಾರ್ಥಕ ಹದಿಮೂರು ವರ್ಷಗಳು 

ಕರವೇಯ ಸಾರ್ಥಕ ಹದಿಮೂರು ವರ್ಷಗಳು

ರಾಜೋತ್ಸವದ ವಿಶೇಷ:  ಸಾದಿಕ ಹಲ್ಯಾಳ :

ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎಂಬ ಧ್ಯೇಯ ವಾಕ್ಯದೊಂದಿಗೆ ಟಿ.ಎ. ನಾರಾಯಣಗೌಡರ ಮುಂದಾಳತ್ವದಲ್ಲಿ ಪ್ರಾರಂಭವಾದ ಕರ್ನಾಟಕ ರಕ್ಷಣಾ ವೇದಿಕೆಯು ಕರ್ನಾಟಕ ರಾಜ್ಯದ ಸಂಘಟನಾ ಶಕ್ತಿಯನ್ನು ಎತ್ತಿ ತೋರಿಸಿ ರಾಜ್ಯದಲ್ಲಿಯೇ ಒಂದು ದೊಡ್ಡ ಸಂಘಟನೆಯಾಗಿ ಹೊರಹೊಮ್ಮಿದೆ. ಕನ್ನಡ, ಕರ್ನಾಟಕ, ನೆಲ, ಜಲ, ಭಾಷೆಗೆ ಕುತ್ತು ಬಂದಾಗ ಮುಂಚೂಣಿಯಲ್ಲಿದ್ದು ಹೋರಾಟ ಮಾಡುತ್ತ ಬಂದಿರುವ ಕ.ರ.ವೇಯು 2005ರಲ್ಲಿ ಬೆಳಗಾವಿ ಗಡಿ ವಿಷಯದ ವಿವಾದವನ್ನು ಕೈಗೆತ್ತಿಕೊಂಡು ಅಂದಿನ ಬೆಳಗಾವಿ ನಗರ ಪಾಲಿಕೆಯ ಮೇಯರ ವಿಜಯ ಮೋರೆ ಗಡಿ ಜಿಲ್ಲೆಯ ಮರಾಠಾ ಬಹು ಭಾಷಿಕ ಗ್ರಾಮಗಳನ್ನು ರಾಜ್ಯದ ಮಹಾರಾಷ್ಟ್ರಕ್ಕೆ ಸೇರಿಸುವ ಠರಾವುವನ್ನು ಪಾಸು ಮಾಡಿ ರಾಜ್ಯದ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್‍ರವರಿಗೆ ವಿಧಾನಸೌಧದಲ್ಲಿ ಮನವಿ ಅರ್ಪಿಸುವ ಸಂಧರ್ಬದಲ್ಲಿ ಕ.ರ.ವೇಯು ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ನೇತೃತ್ವದಲ್ಲಿ ವಿಜಯ ಮೋರೆಗೆ ಮಸಿ ಬಳಿದು ತನ್ನ ಬಲಾಢ್ಯವಾದ ಆಕ್ರೋಶÀವನ್ನು ವ್ಯಕ್ತಪಡಿಸಿ ಮೇಯರ್ ವಿಜಯ ಮೋರೆ, ಶಾಸಕ ಮನೋಹರ ಕಿಣೇಕರ ಸೇರಿದಂತೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ನಿಲುವನ್ನು ಪ್ರತಿಪಾದಿಸಿದಂತಹ ಎಲ್ಲ ಚುನಾಯಿತ ಪ್ರತಿನಿಧಿಗಳ ಸದಸ್ಯತ್ವವನ್ನು ರದ್ದುಗೊಳಿಸಿ ಬೆಳಗಾವಿಯ ಮಹಾ ನಗರಪಾಲಿಕೆಯನ್ನು ವಿಸರ್ಜಿಸುವಂತೆ ಒತ್ತಾಯಿಸಿತು. ಕ.ರ.ವೇ ಒತ್ತಾಯಕ್ಕೆ ಮಣಿದ ಅಂದಿನ ಸರಕಾರ ಬೆಳಗಾವಿ  ನಗರ ಪಾಲಿಕೆಯನ್ನು ವಿಸರ್ಜಿಸಿ ಮರಾಠಿ ನಿಲವು ತಾಳಿದ ಜನಪ್ರತಿನಿಧಿಗಳಿಗೆ (ಎಂ.ಇ.ಎಸ್) ತಕ್ಕ ಉತ್ತರ ನೀಡಿತು. ಅಂದಿನ ಹೋರಾಟದ ಪ್ರತಿಫಲವಾಗಿ ರಾಜ್ಯಾಧ್ಯಂತ ಮಿಂಚಿನ ಸಂಚಲನ ಮೂಡಿಸಿದ ಕರ್ನಾಟಕ ರಕ್ಷಣಾ ವೇದಿಕೆಯು ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ಮುಂದಾಳತ್ವದಲ್ಲಿ ಶ್ರೀ ರಾಜು ಟೋಪಣ್ಣವರ ನೇತೃತ್ವದಲ್ಲಿ ಜಿಲ್ಲೆಯಾಧ್ಯಂತ ತನ್ನ ಶಾಖೆಗಳನ್ನು ತೆರೆದು ಮರಾಠಿ ಪುಂಡಾಟಿಕೆ (ಎಂ.ಇ.ಎಸ್)ಗೆ ತಕ್ಕ ಉತ್ತರ ನೀಡುತ್ತಾ ಬಂದು ಮರಾಠಿಗರ ಸ್ವತ್ತು ಅಡಗಿಸಿದ್ದು ಕರ್ನಾಟಕ ರಕ್ಷಣಾ ವೇದಿಕೆಯ ಅವಿಸ್ಮರಣೆಯ. ಯಶಸ್ಸು ಎಂದು ಎಲ್ಲಾ ಕನ್ನಡಿಗರ ಹೆಮ್ಮೆಯಿಂದ ಹೇಳಲೇಬೇಕಾದ ವಿಷಯ ಎಂದರೆ ಅತೀಶಯೋಕ್ತಿಯಾಗಲಾರದು.
ತದನಂತರ ಇದೇ ನಿಲುವುನೊಂದಿಗೆ ಫೆಬ್ರುವರಿ – 22 – 2006 ರಂದು ಜಿಲ್ಲಾಧ್ಯಕ್ಷ ರಾಜು ಟೋಪಣ್ಣವರ ಅವರ ಅಮೃತ ಹಸ್ತದಿಂದ ಗಡಿ ಜಿಲ್ಲೆಯ ಎರಡನೇ ತಾಲೂಕಾ ಘಟಕವಾಗಿ ಪ್ರಜ್ವಲಿಸಿದ ಕರ್ನಾಟಕ ರಕ್ಷಣಾ ವೇದಿಕೆಯು ಗೋಕಾಕ ತಾಲೂಕಿನಲ್ಲಿ ಶ್ರೀ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಕನ್ನಡ, ಜಲ, ಭಾಷೆ ಹಾಗೂ ತಾಲೂಕಿನಲ್ಲಿ ಎದುರಾಗುವ ಮೂಲಭೂತ ಸೌಕರ್ಯಗಳಿಗಾಗಿ ನಿರಂತರ ಹೋರಾಡುತ್ತ ಬಂದು ಇಂದು ಜಿಲ್ಲೆಯಲ್ಲಿಯೇ ಒಂದು ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಎಂ.ಇ.ಎಸ್. ಭಗವಾಧ್ವಜಾ ವಿವಾದ, ಕರಾಳ ದಿನಾಚರಣೆ, ಮಹಾಮೇಳಾವ, ಸೀಮಾ ಪರಿಷತ್ತು, ಬೆಳಗಾವಿಯ ಮರಾಠಾ ಬಹುಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ನಿಲುವು, ಯಳ್ಳೂರಿನ ಮಹಾರಾಷ್ಟ್ರ ರಾಜ್ಯವೆಂಬ ನಾಮಫಲಕ ವಿವಾದಗಳಲ್ಲದೆ ಸಂಸದ ಸುರೇಶ ಅಂಗಡಿ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಚುನಾವಣೆಯಲ್ಲಿ ಮರಾಠಾ ಸದಸ್ಯರಿಗೆ ಬೆಂಬಲ ವ್ಯಕ್ತಪಡಿಸಿದ್ದು. ಮಹಾನಗರಪಾಲಿಕೆಯಲ್ಲಿ ಭಗವಾಧ್ವಜ ಹಾರಿಸಲು ಮುಂದಾದ ಸಂಸದ ಸುರೇಶ ಅಂಗಡಿ, ಶಾಸಕರ ಸಂಜಯ ಪಾಟೀಲ ಸೇರಿದಂತೆ ಹಲವು ಜನಪ್ರತಿನಿಧಿಗಳ ಮರಾಠೆ ನಿಲುವನ್ನು ಖಂಡಿಸುವುದರ ಜೊತೆಗೆ ಗಡಿ ಸೀಮೆಯಲ್ಲಿರುವ ನಿಪ್ಪಾಣೆ ನಗರ ಸಭೆಯ ಮರಾಠಿ ಎಂ.ಇ.ಎಸ್. ಬೆಂಬಲಿತ ಸದಸ್ಯರಿಗೆ ತಕ್ಕ ಪಾಠ ಕಲಿಸುವಲ್ಲಿ ತನ್ನ ಪ್ರಾಣದ ಹಂಗನ್ನು ತೊರೆದು ಮುಂಚೂಣಿಯಲ್ಲಿ ನಿಂತು ಹೋರಾಟದಲ್ಲಿ ಗೋಕಾಕ ತಾಲೂಕಿನ ಕರವೇ ಅಧ್ಯಕ್ಷ ಶ್ರೀ ಬಸವರಾಜ ಖಾನಪ್ಪನವರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕದ ಪಾತ್ರ ಬಹುಮುಖ್ಯವಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದಲ್ಲದೇ ತಾಲೂಕಾಮಟ್ಟದಲ್ಲಿ ರಾಜ್ಯಕ್ಕೆ ಎರಗಿಕೊಂಡ ಪಿಡುಗಗಳಾದ ಹೋಗೆನೆಕಲ್ ಜಲವಿವಾಹದ, ಕಾವೇರಿ ನ್ಯಾಯಾಧೀಕರಣದ ತಿರ್ಪು, ಕನ್ನಡಕ್ಕೆ ಶಾಸ್ತ್ರಿಯ, ಸ್ಥಾನಮಾನ ದೊರೆಯುವಲ್ಲಿ ತಿರುವಳ್ಳವರ ಪ್ರತಿಮೆ ವಿವಾದ, ಮಹಾದಾಯಿ ಯೋಜನೆ, ಕಾಸರಗೂಡು ವಿವಾದ, ಗೋವಾ ಕೊಂಕಣಿ ಮಂಚ, ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯ ಸೇರಿದಂತೆ ಹಲವಾರು ರಾಜ್ಯಮಟ್ಟದ ಸಮಸ್ಯೆಗಳನ್ನು ತಾಲೂಕಾ ಮಟ್ಟದಲ್ಲಿ ಪ್ರತಿಭಟಿಸುವ ಮುಖಾಂತರ ತಾಲೂಕಿನಾಧ್ಯಂತ ಜಾಗೃತಿ ಮೂಡಿಸಿದೆ ಗೋಕಾಕ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ.
ಇದಲ್ಲದೇ ತಾಲೂಕಿನ ಜಟಿಲ ಸಮಸ್ಯೆಗಳಾದ ಮೂಲಭೂತ ಸೌಕರ್ಯಗಳು, ರಸ್ತೆ ನವೀಕರಣ, ಆರೋಗ್ಯ ಮತ್ತು ಕಂದಾಯ ಇಲಾಖೆಗಳ ಕನ್ನಡ ವಿರೋಧಿ ನಿಲುವು. ರಿದ್ದಿ ಸಿದ್ದಿ ಕಾರಖಾನೆ ಸ್ಪೋಟದಲ್ಲಿ ಮೃತ ಕುಟುಂಬಕ್ಕೆ ಪರಿಹಾರ, ಪಡಿತರ ಚೀಟಿಯಲ್ಲಿ ಸಾರ್ವಜನಿಕರಿಗೆ ಆದ ಅನ್ಯಾಯ. ಗೋಕಾಕ ಜಿಲ್ಲಾ ಹೋರಾಟ, ದೇವಾಲಯಗಳಲ್ಲಿ ಮೂರ್ತಿ ಕಳವು ಪ್ರಕರಣ, ತಾಲೂಕಿನ ಹಲವಾರು ಪ್ರಾಥಮಿಕ ಕೇಂದ್ರಗಳಲ್ಲಿ ವೈದ್ಯರನ್ನು ನೇಮಿಸುವಂತೆ ಆಗ್ರಹ. ಅನಿಯಮಿತ ವಿದ್ಯುತ್ ಲೋಡ ಶಡ್ಡಿಂಗ ನಿಲ್ಲಿಸುವುದು, ಆಕ್ರಮ ಮರಳು ಸಾಗಾಣಿಕೆ ಕ್ರಮ, ಗೋಕಾಕಕ್ಕೆ ಹೊಸ ರೈಲು ಮಾರ್ಗ ಚಳುವಳಿ, ಸೇರದಂತೆ ಹಲವಾರು ಸ್ಥಳೀಯ ಮಟ್ಟದ ಹೋರಾಟಗಳನ್ನು ಮಾಡಿ ಅದರಲ್ಲಿ ಭಾಗಶಃ 75ರಷ್ಟು ಹೋರಾಟಗಳಲ್ಲಿ ಪರಿಹಾರ ದೊರಕಿಸಿಕೊಳ್ಳುವಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕವು ಅಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಸಹಾಯ ಸಹಕಾರದಿಂದ ಯಶಸ್ವಿಕೊಂಡಿದೆ.
ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕವು ಹೋರಾಟಗಳ ಜೊತೆ ಜೊತೆಗೆ ಸಾಮಾಜಿಕ ಕಳಕಳಿಯುಳ್ಳಂತಹ ಜನೋಪಯೋಗಿ ಕೆಲಸಗಳನ್ನು ಮುಂಚೂಣಿಯಲ್ಲಿದ್ದು ಮಾಡುತ್ತಾ ಬಂದಿದೆ. ಅದರಲ್ಲಿ ಪ್ರವಾಹ ಸಂತ್ರಸ್ತರಿಗೆ ಸಹಾಯ ನಿಧಿ ಸಂಗ್ರಹ, ಪ್ರವಾಹದಲ್ಲಿ ಪ್ರಾಣವನ್ನು ಕಳೆದುಕೊಂಡ ಮೃತಕುಟುಂಬಕ್ಕೆ ಧನ ಸಹಾಯ, ಅನ್ನಸಂತರ್ಪಣೆ, ಪ್ರತಿವರ್ಷ ರಾಜ್ಯೋತ್ಸವದಂದು ರೋಗಿಗಳಿಗೆ ಮತ್ತು ವಿಚಾರಣಾಧೀನ ಕೈದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ. ರಕ್ತದಾನ ಶಿಬಿರ, ಗ್ರಾಮೀಣ ಭಾಗಗಳಲ್ಲಿ ಉಚಿತ ನೇತ್ರ ತಪಾಸಣೆ, ಹಾಗೂ ಶಸ್ತ್ರಚಿಕಿತ್ಸಾ ಶಿಬಿರಗಳು, ಉಚಿತ ದಂತ ತಪಾಸಣಾ ಶಿಬಿರಗಳು ಅರ್ಹನಿಸ್ಸಿ ಕಲಾವಿದರಿಗೆ, ಸಾಹಿತಿಗಳಿಗೆ ಗೌರವಿಸುವುದು ಗ್ರಾಮೀಣ ಭಾಗದಲ್ಲಿ ಕನ್ನಡದ ಬಗ್ಗೆ ಕನ್ನಡ ಜಾಗೃತಿ ಸಮಾವೇಶಗಳು ಜಾಥಾಗಳು 2012-13ರಲ್ಲಿ ಬೆಳಗಾವಿ ಮಹಾನಗರಪಾಲಿಕೆ ಮೇಯರ ಮಂದಾ ಬಾಳೇಕುಂದ್ರಿ ಮತ್ತು ಉಪ ಮೇಯರ ರೇಣು ಕಿಲ್ಲೇಕರ ಅವರು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಠರಾವು ಮಾಡಿದ್ದನ್ನು ಖಂಡಿಸಿ ಕರವೇ ಜಿಲ್ಲಾಧ್ಯಕ್ಷ ಮಹಾದೇವ ತಳವಾರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ನಡೆಸಿ ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ಕರವೇ ಗೋಕಾಕ ತಾಲೂಕಾ ಘಟಕವು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಘೇರಾವು ಹಾಕಿ ಮನವಿ ಅರ್ಪಿಸಿ ಪಾಲಿಕೆಯನ್ನು ಸುಪರಸೀಡ್ ಮಾಡುವಂತೆ ಆಗ್ರಹಿಸಿತು. ಕಳೆದ ಸುಮಾರು 6 ವರ್ಷಗಳಿಂದ ಗೋವಾ ರಾಜ್ಯದಲ್ಲಿ ಕನ್ನಡ ಮಾಧ್ಯಮ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುತ್ತಿರುವುದು ಕ.ರ.ವೇಯ ಹೆಮ್ಮೆ.
ಗೋವಾ ರಾಜ್ಯದಲ್ಲಿ ವಾಸಿಸುವ ಕನ್ನಡಿಗರ ಮನೆಗಳನ್ನು ತೆರವುಗೊಳಿಸಿದಾಗ ಗೋವಾ ಸರಕಾರ ಅವರಿಗೆ ಶಾಶ್ವತ ಪುರ್ನವಸತಿ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ & ಗೋವಾ ರಾಜ್ಯಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ ಗೋವಾ ರಾಜ್ಯದಲ್ಲಿ ಸುಮಾರು 3 ಕರವೇ ಶಾಖೆಗಳು ಕನ್ನಡ ಕಾರ್ಯ ಮಾಡುತ್ತಿವೆ. 2012-13ರಲ್ಲಿ ಜುವಾರಿ ಕಾರ್ಖಾನೆಯಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಸುಮಾರು 600 ಕರ್ನಾಟಕದ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದ್ದನ್ನು ಖಂಡಿಸಿ ಗೋವಾದ ಜುವಾರಿ ಕಾರ್ಖಾನೆಯ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಂಡು ಕಾರ್ಮಿಕರ ಮರುನೇಮಕ ಆಗುವವರೆಗೆ ಹೋರಾಟ ನಡೆಯಿಸಿ ಅವರಿಗೆ ನ್ಯಾಯದೊರಕಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ ಶ್ರೇಯಸ್ಸು ಕರವೇ ಗೋಕಾಕ ತಾಲೂಕಾ ಘಟಕಕ್ಕೆ ಸಲ್ಲಲೇಬೇಕು. ಇದೇ ವರ್ಷ ಅಗಸ್ಟ 13 2017 ರಂದು ರಾಜ್ಯ ತೀವ್ರ ಬರಗಾಲ ಪರಿಸ್ಥಿತಿ ಎದುರಿಸುತ್ತಿರುವುದನ್ನು ಮನಗೊಂಡು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕವು, ಶ್ರೀ ಮ.ನಿ.ಪ್ರ. ಮುರಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಗೋಕಾಕ ತಾಲೂಕಿನಾದ್ಯಂತ ಏಕ ಕಾಲಕ್ಕೆ ಸುಮಾರು 25 ಸಾವಿರ ಸಸಿಗಳನ್ನು ನೆಟ್ಟು, ತಾಲೂಕಿನಾದ್ಯಂತ ಪರಿಸರ ಜಾಗೃತಿ ಮೂಡಿಸುವುದರ ಜೊತೆಗೆ ಮರ ಬೆಳಸಿ, ಬರ ಅಳಿಸಿ ಎಂಬ ಮಹತ್ತರ ಸಂದೇಶವನ್ನು ನೀಡಿ ಇತಿಹಾಸ ನಿರ್ಮಿಸಿದೆ. ಹೀಗೆ ಒಂದಲ್ಲಾ ಎರಡಲ್ಲಾ ಹತ್ತು ಹಲವಾರು ಸಾಮಾಜಿಕ ಕಾಳಜಿವುಳ್ಳಂತಹ ಕೆಲಸ ಕಾರ್ಯಗಳನ್ನು ಕರ್ನಾಟಕ ರಕ್ಷಣಾ ವೇದಿಕೆಯ ತನ್ನ ನಿಯಮತಿ ಚೌಕಟ್ಟಿನೊಂದಿಗೆ ಮಾಡುತ್ತ ಮುಂದೆ ನಡೆದು ಇಂದು ತಾಲೂಕಿನಾದ್ಯಂತ ಅಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಶಿಸ್ತು, ಸಂಯಮ, ಸಮಯಪಾಲನೆಯೊಂದಿಗೆ ರಾಜ ರಾಜೇಶ್ವರಿ ಕನ್ನಡ ತಾಯಿ ಭುವನೇಶ್ವರಿ ಕೃಪಾಶೀರ್ವಾದದೊಂದಿಗೆ ಕನ್ನಡ ನೆಲ, ಜಲ, ಭಾಷೆ ಉಳಿಸಿ ಬೆಳೆಸಲು ಮುಂಚೂಣಿಯಲ್ಲಿದ್ದುಕೊಂಡು ಹೋರಾಟ ನಡೆದಿದೆ.

ಬಸವರಾಜ ಖಾನಪ್ಪನವರ
ಅಧ್ಯಕ್ಷರು ಗೋಕಾಕ ತಾಲೂಕಾ ಘಟಕ :

ಕಳೆದು 13 ವರ್ಷದಿಂದ ಕನ್ನಡ ನಾಡು ನುಡಿ ನೆಲ ಜಲ ಜೊತೆಗೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಪ್ರಾಮಾಣೀಕ ಪ್ರಯತ್ನ ಮಾಡಲಾಗಿದೆ. ಬರುವ ದಿನಗಳಲ್ಲಿ ತಾಲೂಕಿನಾದ್ಯಂತ ಕನ್ನಡದ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಪ್ರಸ್ತುತ ವರ್ಷದಿಂದ ಪ್ರತಿ ನವ್ಹೆಂಬರ ತಿಂಗಳಲ್ಲಿ ಕನ್ನಡ ಸಮ್ಮೇಳನ ಹಮ್ಮಿಕೊಂಡು ಮಕ್ಕಳ ಮತ್ತು ಯುವಕರಲ್ಲಿ ಕನ್ನಡದ ಅಭಿರುಚಿ ಮೂಡಿಸುವುದರ ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಡಾ. ಸಿ.ಕೆ. ನಾವಲಗಿ
ಜಾನಪದ ವಿದ್ವಾಂಸರು ಗೋಕಾಕ:

ಕಳೆದ ಒಂದು ದಶಕದಿಂದ ಕನ್ನಡಕ್ಕೆ ಕುತ್ತು ಬಂದಾಗ ಮುಂಚೂಣಿಯಲ್ಲಿದ್ದುಕೊಂಡು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುತ್ತಿರುವುದರಿಂದ ಇವರ ಕಾಯಕ ಯುವಕರಿಗೆ ಮಾದರಿಯಾಗಿದೆ.

Related posts: