RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಬಿಜೆಪಿ ತೊರೆದು ಕಾಂಗ್ರೆಸ ಪಕ್ಷಕ್ಕೆ ಸೇರ್ಪಡೆಯಾದ 200 ಕ್ಕೂ ಹೆಚ್ಚು ಕಾರ್ಯಕರ್ತರು

ಗೋಕಾಕ:ಬಿಜೆಪಿ ತೊರೆದು ಕಾಂಗ್ರೆಸ ಪಕ್ಷಕ್ಕೆ ಸೇರ್ಪಡೆಯಾದ 200 ಕ್ಕೂ ಹೆಚ್ಚು ಕಾರ್ಯಕರ್ತರು 

ಬಿಜೆಪಿ ತೊರೆದು ಕಾಂಗ್ರೆಸ ಪಕ್ಷಕ್ಕೆ ಸೇರ್ಪಡೆಯಾದ 200 ಕ್ಕೂ ಹೆಚ್ಚು ಕಾರ್ಯಕರ್ತರು
ಗೋಕಾಕ ಮೇ 3 : ಕಾಂಗ್ರೇಸ ಜನಪರ ಕಾರ್ಯಗಳನ್ನು ಮೆಚ್ಚಿ ತಾಲೂಕಿನ ಬೆನಚಿನಮರಡಿ ಗ್ರಾಮದ ಯುವಕರು ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ಭೀರಪಾ ಲ ಖಿಲಾರಿ , ಸಂಗೋಳಿ ರಾಯಣ್ಣ ಬ್ರಿಗೇಡ ಅಧ್ಯಕ್ಷ ವಿಠಲ ಖಿಲಾರಿ ನೇತೃತ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೇಸ ಸೇರ್ಪಡೆಯಾದರು .

ಬುಧವಾರದಂದು ಸಾಯಂಕಾಲ ಸಚಿವ ಜಾರಕಿಹೊಳಿ ಅವರ ಗೃಹ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಾರ್ಮಿಕ ಧುರೀಣ ಅಂಬಿರಾವ ಪಾಟೀಲ ಮತ್ತು ಸಂತೋಷ ಜಾರಕಿಹೊಳಿ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದ ಕಾರ್ಯಕರ್ತರು ಸಿದ್ದರಾಮಯ್ಯ ನವರ ಕೈ ಬಲ ಪಡಿಸಲು ಸಚಿವ ರಮೇಶ ಜಾರಕಿಹೊಳಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವುದಕ್ಕಾಗಿ ಕಾಂಗ್ರೇಸ ಪಕ್ಷವನ್ನು ಬೆಂಬಲಿಸುತ್ತಿರುವುದಾಗಿ ಹೇಳಿದರು

ಈ ಸಂದರ್ಭದಲ್ಲಿ ಮಡೆಪ್ಪಾ ತೋಳಿನವರ , ಭೀಮಗೌಡ ಪೊಲಿಸಗೌಡರ ದಸ್ತಗೀರಸಾಬ ರಾಜೆ ಖಾನ , ಪ್ರಶಾಂತ ಜೋರಾಪೂರ ,ಶಿವಾನಂದ ಮನ್ನಾಪೂರ , ಉದ್ದಪ್ಪಾ ಖಿಲಾರಿ , ರಾಜು ಗಿಡ್ಡನ್ನವರ ಮಲ್ಲಪ ತಲೆಪ್ಪಗೋಳ, ಬೀರಪಾ ಖಿಲಾರಿ , ಅಡಿವೆಪ್ಪಾ ಮಾಡಮಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: