RNI NO. KARKAN/2006/27779|Thursday, January 15, 2026
You are here: Home » breaking news » ಗೋಕಾಕ:ಶಿಂದಿಕುಬೇಟ ಮುಸ್ಲಿಂ ಸಮಾಜ ವತಿಯಿಂದ ಸಚಿವ ರಮೇಶ ಅವರಿಗೆ ಸಂಪೂರ್ಣ ಬೆಂಬಲ

ಗೋಕಾಕ:ಶಿಂದಿಕುಬೇಟ ಮುಸ್ಲಿಂ ಸಮಾಜ ವತಿಯಿಂದ ಸಚಿವ ರಮೇಶ ಅವರಿಗೆ ಸಂಪೂರ್ಣ ಬೆಂಬಲ 

ಶಿಂದಿಕುಬೇಟ ಮುಸ್ಲಿಂ ಸಮಾಜ ವತಿಯಿಂದ ಸಚಿವ ರಮೇಶ ಅವರಿಗೆ ಸಂಪೂರ್ಣ ಬೆಂಬಲ

ಗೋಕಾಕ ಮೇ 2 : ತಾಲೂಕಿನ ಶಿಂದಿಕುಬೇಟ ಗ್ರಾಮದ ಜಾಮೀಯಾ ಮಜೀದ ಮುಸ್ಲಿಂ ಸಮಾಜ ಬಾಂಧವರು ಮಂಗಳವಾರದಂದು ಸಭೆ ಸೇರಿ ಜಾಮೀಯಾ ಮಜೀದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಬು ಮಿಟ್ಟುಸಾಬ ಫಣಿಬಂದ ಅವರು ಮಾಡುತ್ತಿರುವ ಕಾರ್ಯ ವೈಪಲ್ಯಕ್ಕೆ ಬೇಸತ್ತ ಮುಸ್ಲಿಂ ಸಮಾಜದ ಬಾಂಧವರು ಅವರನ್ನು ಸಮಾಜದ ಅಧ್ಯಕ್ಷ ಸ್ಥಾನದಿಂದ ಅವಿಶ್ವಾಸ ಮಂಡನೆ ಮಾಡಿ ಕೆಳಗಿಳಿಸಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಠರಾವು ಪಾಸು ಮಾಡಿದ್ದಾರೆ. ಸಭೆಯಲ್ಲಿ ಸಮಾಜದ ಸದಸ್ಯರುಗಳಾದ ಮಲೀಕ ಪಕಾಲಿ, ಮುಬಾರಕ ಸೌದಾಗರ, ಬಾಬುಸಾಬ ಮುಲ್ತಾನಿ, ಮಹ್ಮದರಫೀಕ ಮಕಾನದಾರ, ಮಿಟ್ಟುಸಾಬ ಮುಲ್ತಾನಿ, ದಸ್ತಗೀರಸಾಬ ಸೌದಾಗರ, ಅಬ್ದುಲ ಸರಕಾವಸ, ರಮಜಾನ ಖಾನಜಾದೆ, ಇಕ್ಬಾಲ ಮಾಲದಾರ, ಆಸೀಫ ಅತ್ತಾರ ಇದ್ದರು.

ಇದೇ ಸಂದರ್ಭದಲ್ಲಿ ಜಾಮೀಯಾ ಮಜೀದ ಮುಸ್ಲಿಂ ಸಮಾಜದ ಬಾಂಧವರು ವಿಧಾನ ಸಭಾ ಚುನಾವಣೆಯಲ್ಲಿ ಗೋಕಾಕ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಸೂಚಿಸಿದರು. ಅಲ್ಲದೇ ಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ದುಡಿಯುವುದಾಗಿ ತಿಳಿಸಿದರು.

Related posts: