RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಸ್ವತಂತ್ರ ಎಂದರೆ ದೇಶದ ಅಸ್ಮಿತೆ , ದೇಶದ ಸ್ವಾಭಿಮಾನ : ಬಿ.ಆರ್ ಮುರಗೋಡ

ಗೋಕಾಕ:ಸ್ವತಂತ್ರ ಎಂದರೆ ದೇಶದ ಅಸ್ಮಿತೆ , ದೇಶದ ಸ್ವಾಭಿಮಾನ : ಬಿ.ಆರ್ ಮುರಗೋಡ 

ಸ್ವತಂತ್ರ ಎಂದರೆ ದೇಶದ ಅಸ್ಮಿತೆ , ದೇಶದ ಸ್ವಾಭಿಮಾನ : ಬಿ.ಆರ್ ಮುರಗೋಡ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 15  :

ಸ್ಥಳೀಯ ಅಂಬೇಡ್ಕರ್ ನಗರದ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಶನಿವಾರದಂದು 74ನೇ ಸ್ವಾತಂತ್ರೋತ್ಸವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯ ಬಿ.ಆರ್.ಮುರಗೋಡ  ಸ್ವತಂತ್ರ ಎಂದರೆ ದೇಶದ ಅಸ್ಮಿತೆ , ದೇಶದ ಸ್ವಾಭಿಮಾನ ಅನೇಕ ಮಹನೀಯರು ತಮ್ಮ  ಬದುಕನ್ನು ಪಣಕ್ಕಿಟ್ಟು ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ ಅಂತಹ ಮಹಾನ ವ್ಯಕ್ತಿಗಳ ಆರ್ದಶಗಳನ್ನು ಪಾಲಿಸಿ, ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ನೂರೆಇಲಾಹಿ ಜಮಾದರ, ಸದಸ್ಯರುಗಳಾದ ಸಾದಿಕ ಹಲ್ಯಾಳ , ಅಬ್ಬು ಮುಜಾವರ ,  ಶಿಕ್ಷಕಿಯರಾದ ಶ್ರೀಮತಿ ಸಲ್ಲಾಂ  ಮುಲ್ಲಾ , ಎಫ್.ಎ ಚಿಕ್ಕುಂಬಿ  ಐ.ಎಂ ಮೋಮಿನ ಉಪಸ್ಥಿತರಿದ್ದರು

Related posts: